ಕೇರಳ ಮೂಲದ ಮೊಹಮ್ಮದ್ ಷಿಹಾದ್ ಕತಾರ್'ನಲ್ಲಿ ವಾಸಿಸುತ್ತಿದ್ದು, ಅಲ್ಲಿ ಕರಾಚಿ ಮೂಲದ ಸಮೀರಾಳನ್ನು ವಿವಾಹವಾಗಿದ್ದನೆನ್ನಲಾಗಿದೆ. ಇದಕ್ಕೆ ತನ್ನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಕತಾರ್'ನಿಂದ ಆ ಹುಡುಗಿ ಹಾಗೂ ಆಕೆಯ ಸೋದರ ಮತ್ತು ಸೋದರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿರುವುದಾಗಿ ಕೇರಳದ ಯುವಕ ಹೇಳಿಕೊಂಡಿದ್ದಾನೆ.

ಬೆಂಗಳೂರು(ಮೇ 25): ನಗರದಲ್ಲಿ ಮೂವರು ಪಾಕ್​ ಪ್ರಜೆಗಳನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಸೇರಿ ಮೂವರನ್ನು ಬಂಧಿಸಲಾಗಿದೆ. ಕಳೆದ ಆರು ತಿಂಗಳಿಂದ ಕುಮಾರಸ್ವಾಮಿ ಲೇಔಟ್​ನ JBHCS ಲೇಔಟ್'​ನಲ್ಲಿ ಕೇರಳದ ಯುವಕನೊಂದಿಗೆ ಮೂವರು ಪಾಕ್​ ಪ್ರಜೆಗಳು ವಾಸವಾಗಿದ್ದರು. ಪಾಕ್​ ಪ್ರಜೆಗಳು ಆಧಾರ್​ ಕಾರ್ಡ್​ ಮತ್ತು ವೋಟರ್​ ಐಡಿಗಳನ್ನು ಮಾಡಿಸಿಕೊಂಡು ಭಾರತೀಯರಂತೆ ವಾಸವಾಗಿದ್ದರು. ಆದ್ರೆ ಮನೆಯಲ್ಲಿ ವಾಸವಿದ್ದ ಪಾಕ್​ ಪ್ರಜೆಗಳ ಬಗ್ಗೆ ಅನುಮಾನಗೊಂಡಿದ್ದ ಸ್ಥಳೀಯರು ಸಿಸಿಬಿ ಪೊಲೀಸರಿಗೆ ಮತ್ತು ಕೆಎಸ್​ ಲೇಔಟ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಮತ್ತು ಕುಮಾರಸ್ವಾಮಿ ಲೇಔಟ್​ ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಸರಿಯಾಗಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಸಮೀರಾ(25), ಖಾಸಿಬ್ ಶಂಷುದ್ದೀನ್, ಕಿರಣ್ ಗುಲಾಂ ಆಲಿ ಮತ್ತು ಮೊಹ್ಮದ್ ಷಿಹಾಬ್ ಬಂಧನಕ್ಕೊಳಗಾದವರು. ಪಾಕಿಸ್ತಾನದ ಮೂವರು ವ್ಯಕ್ತಿಗಳು ಕರಾಚಿ ಮೂಲದವರೆನ್ನಲಾಗಿದೆ. ಮೊಹಮ್ಮದ್ ಷಿಹಾಬ್ ಕೇರಳದ ವ್ಯಕ್ತಿಯಾಗಿದ್ದಾರೆ.

ಪಾಕಿಸ್ತಾನದ ಪ್ರಜೆಗಳು ಯಾವುದೇ ಪಾಸ್'ಪೋರ್ಟ್ ಇಲ್ಲದೇ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮಸ್ಕತ್'ನಿಂದ ನೇಪಾಳಕ್ಕೆ ಹೋಗಿ ಅಲ್ಲಿಂದ ಪಾಟ್ನಾ ಮೂಲಕ ಬೆಂಗಳೂರಿಗೆ ಈ ನಾಲ್ವರು ಬಂದಿರುವುದು ತಿಳಿದುಬಂದಿದೆ.

ಪಾಕ್ ಹುಡುಗಿಯೊಂದಿಗೆ ಮದುವೆ:
ಕೇರಳ ಮೂಲದ ಮೊಹಮ್ಮದ್ ಷಿಹಾದ್ ಕತಾರ್'ನಲ್ಲಿ ವಾಸಿಸುತ್ತಿದ್ದು, ಅಲ್ಲಿ ಕರಾಚಿ ಮೂಲದ ಸಮೀರಾಳನ್ನು ವಿವಾಹವಾಗಿದ್ದನೆನ್ನಲಾಗಿದೆ. ಇದಕ್ಕೆ ತನ್ನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಕತಾರ್'ನಿಂದ ಆ ಹುಡುಗಿ ಹಾಗೂ ಆಕೆಯ ಸೋದರ ಮತ್ತು ಸೋದರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿರುವುದಾಗಿ ಕೇರಳದ ಯುವಕ ಹೇಳಿಕೊಂಡಿದ್ದಾನೆ.

ನಾಲ್ವರನ್ನೂ ಬಂಧನಕ್ಕೊಳಪಡಿಸಿರುವ ಸಿಸಿಬಿ ಅಧಿಕಾರಿಗಳ ತಂಡ ಅವರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ಕೇಂದ್ರ ಗುಪ್ತಚರ ಇಲಾಖೆ ಜೊತೆ ಬೆಂಗಳೂರಿನ ಪೊಲೀಸರು ಸಂಪರ್ಕದಲ್ಲಿದ್ದಾರೆ.