Asianet Suvarna News Asianet Suvarna News

ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಒಂದೇ ಕುಟುಂಬದ ಮೂವರು ಸದ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದಿದೆ. 

Three members Of Family Commit Suicide
Author
Bengaluru, First Published Oct 8, 2018, 10:47 AM IST
  • Facebook
  • Twitter
  • Whatsapp

ಅರಕಲಗೂಡು: ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡನಾಯಕನಕೊಪ್ಪಲಿನಲ್ಲಿ ಭಾನುವಾರ ರಾತ್ರಿ ನಡೆದಿದೆ. 

ತಾಲೂಕಿನ ದೊಡ್ಡನಾಯಕನ ಕೊಪ್ಪಲು ಗ್ರಾಮದ ದಂಪತಿಯಾದ ಕೃಷ್ಣೇಗೌಡ (50) ಮತ್ತು ಮಂಜುಳ (40), ಪುತ್ರಿ ಭೂಮಿಕ (21) ಮೃತ ದುರ್ದೈವಿಗಳು. ತಂದೆ, ತಾಯಿ ಮತ್ತು ಮಗಳು ಮೂವರು ವಿಷ ಕುಡಿಯುವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೆ ಈ ಮೂವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. 

ಪಟ್ಟಣ ಪೊಲೀಸರು ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ ಕುಮಾರ್‌ ಶೆಹಪುರವಾಡ್‌ ತಿಳಿಸಿದ್ದಾರೆ.

Follow Us:
Download App:
  • android
  • ios