ಇನ್ನೂ ಹತ್ತನೇ ತರಗತಿ ಕಲಿಯುತ್ತಿರುವ ಈ ಮಕ್ಕಳಿಗೆ ಸ್ಟಾರ್ಟ್ ಅಪ್ ಮಾಡುವ ಯೋಚನೆ ಬಂದಿದೆ. ಇಲ್ಲಿನ ನೀರ್ಜಾ ಮೋದಿ ಶಾಲೆಯ ವಿದ್ಯಾರ್ಥಿಗಳಾದ ಚೇತನ್ಯ ಗೋಲೆಚ್ಚ, ಮೃಗಾಂಕ್ ಗುಜ್ಜರ್ ಮತ್ತು ಉತ್ಸವ್ ಜೈನ್ ಎನ್ನುವ ಮೂವರು ವಿದ್ಯಾರ್ಥಿಗಳು ಸೇರಿ ಇನ್ ಫ್ಯೂಷನ್ ಬಿವರೇಜಸ್ ಎನ್ನುವ ಸ್ಟಾರ್ಟ್ ಅಪ್ ಸ್ಥಾಪಿಸಿದ್ದಾರೆ. ಇದಕ್ಕೆ ರೂ. 3 ಕೋಟಿ ಬಂಡವಾಳವನ್ನೂ ಪಡೆದಿದ್ದಾರೆ.
ಜೈಪುರ (ಮಾ.15): ಇನ್ನೂ ಹತ್ತನೇ ತರಗತಿ ಕಲಿಯುತ್ತಿರುವ ಈ ಮಕ್ಕಳಿಗೆ ಸ್ಟಾರ್ಟ್ ಅಪ್ ಮಾಡುವ ಯೋಚನೆ ಬಂದಿದೆ. ಇಲ್ಲಿನ ನೀರ್ಜಾ ಮೋದಿ ಶಾಲೆಯ ವಿದ್ಯಾರ್ಥಿಗಳಾದ ಚೇತನ್ಯ ಗೋಲೆಚ್ಚ, ಮೃಗಾಂಕ್ ಗುಜ್ಜರ್ ಮತ್ತು ಉತ್ಸವ್ ಜೈನ್ ಎನ್ನುವ ಮೂವರು ವಿದ್ಯಾರ್ಥಿಗಳು ಸೇರಿ ಇನ್ ಫ್ಯೂಷನ್ ಬಿವರೇಜಸ್ ಎನ್ನುವ ಸ್ಟಾರ್ಟ್ ಅಪ್ ಸ್ಥಾಪಿಸಿದ್ದಾರೆ. ಇದಕ್ಕೆ ರೂ. 3 ಕೋಟಿ ಬಂಡವಾಳವನ್ನೂ ಪಡೆದಿದ್ದಾರೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಇವರ ಶಾಲೆಯಲ್ಲಿ ನಡೆದ ಎಂಟರ್ ಪ್ರೀನರ್ ಶಿಪ್ ಫೆಸ್ಟ್ ನಲ್ಲಿ ಈ ಮೂವರು ಭಾಗವಹಿಸಿದ್ದರು. ಇದು ಇವರ ಬದುಕನ್ನೇ ಬದಲಾಯಿಸುತ್ತದೆ ಎಂದು ಬಹುಶಃ ಇವರು ಊಹಿಸಿರಲಿಕ್ಕಿಲ್ಲ.
ಯಾವುದೇ ಸಂರಕ್ಷಕಗಳನ್ನು ಬಳಸದೇ ನೀರನ್ನು ರುಚಿಗೊಳಿಸುವುದು ಹೇಗೆ ಎನ್ನುವುದು ಇವರ ಪ್ರಾಜೆಕ್ಟಾಗಿತ್ತು. ಸಕ್ಕರೆ ಮತ್ತು ಸೋಡಾವನ್ನು ಸೇರಸದೇ ಆರೋಗ್ಯಯುತ ಪಾನೀಯವನ್ನು ತಯಾರಿಸುವುದು ಹೇಗೆ ಎಂದು ಸಾಕಷ್ಟು ಸಂಶೋಧನೆ ನಡೆಸಿದೆವು. ನಾವಿನ್ನು ಅಪ್ರಾಪ್ತರಾದ್ದರಿಂದ ವಾಸ್ತವದಲ್ಲಿ ಇದನ್ನು ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆರೋಗ್ಯ ಇಲಾಖೆ ಮತ್ತು ಎಫ್ ಎಸ್ ಎಸ್ ಎಐ ನಿಂದ ಅಗತ್ಯ ನುಮತಿ, ಪರವಾನಗಿ ತೆಗೆದುಕೊಳ್ಳುವ ಅಗತ್ಯವಿತ್ತು. ನಮ್ಮ ಪರವಾಗಿ ನಮ್ಮ ಪೋಷಕರು ತೆಗೆದುಕೊಂಡಿದ್ದಾರೆ ಎಂದು ಗುಜ್ಜಾರ್ ಎನ್ನುವ ವಿದ್ಯಾರ್ಥಿ ಹೇಳಿದ್ದಾನೆ.
ಇವರ ಈ ಸಂಶೋಧನೆಗೆ ವ್ಯಾಪಕ ಅಭಿನಂದನೆ ವ್ಯಕ್ತವಾಗಿದೆ.
