ಬೆಂಗಳೂರಿಗೂ ಉಗ್ರವಾದ ಶಾಕ್

news | Thursday, June 7th, 2018
Suvarna Web Desk
Highlights

ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ನಗರಗಳು ‘ಉಗ್ರವಾದದಿಂದ ಆರ್ಥಿಕತೆಗೆ ಭೀತಿ’ ಜಾಗತಿಕ ಪಟ್ಟಿಯ ಟಾಪ್‌-10 ನಗರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ಕ್ರಮವಾಗಿ 5, 6 ಹಾಗೂ 7ನೇ ಸ್ಥಾನ ಪಡೆದುಕೊಂಡಿವೆ. 

ಮುಂಬೈ: ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ನಗರಗಳು ‘ಉಗ್ರವಾದದಿಂದ ಆರ್ಥಿಕತೆಗೆ ಭೀತಿ’ ಜಾಗತಿಕ ಪಟ್ಟಿಯ ಟಾಪ್‌-10 ನಗರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ಕ್ರಮವಾಗಿ 5, 6 ಹಾಗೂ 7ನೇ ಸ್ಥಾನ ಪಡೆದುಕೊಂಡಿವೆ. 

ಲಾಯ್ಡ್ಸ್ ಇಂಡಿಯಾ ಸಿಟಿ ರಿಸ್ಕ್‌ ಇಂಡೆಕ್ಸ್‌’ ಈ ಸೂಚ್ಯಂಕವನ್ನು ಅಧ್ಯಯನ ನಡೆಸಿ ಸಿದ್ಧಪಡಿಸಿದೆ. ಭಾರತದ ಆರ್ಥಿಕತೆಯ ಅರ್ಧಕ್ಕಿಂತ ಹೆಚ್ಚು (ಶೇ.58) ಪ್ರಮಾಣವು ಭಯೋತ್ಪಾದನೆ ಹಾಗೂ ಕಲಹಗಳಿಂದ ಅಪಾಯ ಎದುರಿಸುತ್ತಿದೆ. ಇದು ವಾರ್ಷಿಕ 9 ಶತಕೋಟಿ ಡಾಲರ್‌ಗೆ ಸಮ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ಲಾಯ್ಡ್ಸ್ ಇಂಡಿಯಾ ಹೇಳಿಕೊಂಡಿದೆ. 

279 ವಿಶ್ವ ನಗರಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ ಭಾರತದ ಅಹ್ಮದಾಬಾದ್‌, ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕಾನ್‌ಪುರ, ಕೋಲ್ಕತಾ, ಮುಂಬೈ, ಪುಣೆ ಹಾಗೂ ಸೂರತ್‌- ಅಧ್ಯಯನಕ್ಕೆ ಒಳಪಟ್ಟ ಭಾರತದ ನಗರಿಗಳು.

ಭಾರತದ ಆರ್ಥಿಕತೆ ಉತ್ತಮವಾಗಿ ಬೆಳವಣಿಗೆ ಆಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಕಲಹಗಳು ಹಾಗೂ ಭಯೋತ್ಪಾದನೆಯು ಇದಕ್ಕೆ ಸವಾಲಾಗಿವೆ. ಇವುಗಳಿಂದ ಆರ್ಥಿಕತೆ ಭೀತಿಯಲ್ಲಿದೆ ಎಂದು ಅಧ್ಯಯನ ಕಳವಳ ವ್ಯಕ್ತಪಡಿಸಿದೆ.

Comments 0
Add Comment

  Related Posts

  IPL Team Analysis Delhi Daredevils Team Updates

  video | Saturday, April 7th, 2018

  Customs Officer Seize Gold

  video | Saturday, April 7th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Sujatha NR