ಚೆನ್ನೈ(ಜು.18): ಕಾಂಚಿಪುರಂನ ವರದರಾಜ ಪೇರುಮಾಳ್ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮೂವರು ಭಕ್ತರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ದೀರ್ಘಕಾಲ ಕ್ಯೂನಲ್ಲಿ ನಿಂತ ಪರಿಣಾಮ ಇಬ್ಬರು ಮಹಿಳೆ ಸೇರಿದಂತೆ ಮೂವರು ಭಕ್ತರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಅಸ್ವಸ್ಥರಾದ ಕೂಡಲೇ ಅವರನ್ನು ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೂವರು ಮೃತಪಟ್ಟಿದ್ದಾರೆ. 

ಮೃತರನ್ನು ಸೇಲಂ ಮೂಲದ ಆನಂದನ್(56), ಆವಡಿ ಮೂಲದ ಜಯಂತಿ(62) ಹಾಗೂ ಆಂಧ್ರ ಪ್ರದೇಶದ ಗುಂಟೂರ್ ಮೂಲದ ನಾರಾಯಣಿ(65) ಎಂದು ಗುರುತಿಸಲಾಗಿದೆ.