ಕಾಂಗ್ರೆಸ್’ಗೆ ಬಿಹಾರದಲ್ಲಿ ಆದ ಹಿನ್ನಡೆ ಬೆನ್ನಲ್ಲೇ ಗುಜರಾತ್’ನಲ್ಲಿ ಕೂಡಾ ಹಿನ್ನಡೆಯಾಗಿದೆ. ಮೂವರು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಿದ್ದು ಬಿಜೆಪಿ ಸೇರಲಿದ್ದಾರೆ.

ಅಹ್ಮದಾಬಾದ್ (ಜು.27): ಕಾಂಗ್ರೆಸ್’ಗೆ ಬಿಹಾರದಲ್ಲಿ ಆದ ಹಿನ್ನಡೆ ಬೆನ್ನಲ್ಲೇ ಗುಜರಾತ್’ನಲ್ಲಿ ಕೂಡಾ ಹಿನ್ನಡೆಯಾಗಿದೆ. ಮೂವರು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಿದ್ದು ಬಿಜೆಪಿ ಸೇರಲಿದ್ದಾರೆ.

ಕಾಂಗ್ರೆಸ್ ಮುಖ್ಯ ಸಂಚಾಲಕ ಬಲವಂತ್ ಸಿನ್ಹಾ, ತೇಜಶ್ರೀ ಪಟೇಲ್ ಮತ್ತು ಪ್ರಹ್ಲಾದ್ ಪಟೇಲ್ ರಾಜಿನಾಮೆ ನೀಡಿದ ಶಾಸಕರು. ಸ್ಪೀಕರ್ ರಮನ್’ಲಾಲ್ ವೋಹ್ರಾಗೆ ಇಂದು ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ. ತೇಜಶ್ರೀ ಪಟೇಲ್ ಮತ್ತು ಪ್ರಹ್ಲಾದ್ ಪಟೇಲ್ ಬಿಜೆಪಿ ಸೇರಲಿದ್ದಾರೆ. ಮುಂದಿನ ತಿಂಗಳು ರಾಜ್ಯಸಭಾ ಚುನಾವಣೆ ಇರುವುದರಿಂದ ಕಾಂಗ್ರೆಸ್ ಶಾಸಕರ ರಾಜಿನಾಮೆಯಿಂದ ಪಕ್ಷದಲ್ಲಿ ಸಂಚಲನ ಉಂಟಾಗಲಿದೆ.

ಬಲವಂತ್ ಸಿನ್ಹಾ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಸ್ಮೃತಿ ಇರಾನಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.