2010ರಲ್ಲಿ ಸುಮಾರು 450 ಕಿಲೋ ಬಾಂಬ್'ವೊಂದನ್ನು ಡಿಫ್ಯೂಸ್ ಮಾಡಲು ಹೋಗಿ ಮೂವರು ಸ್ಫೋಟಕ ತಜ್ಞರು ಬಲಿಯಾಗಿದ್ದರು. ಈಗ ಅಂಥದ್ದೇ ದುರಂತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಸಲ ಬಾಂಬ್ ನಿಷ್ಕ್ರಿಯಗೊಳಿಸಲು ವಿಶೇಷ ಪರಿಕರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಪರಿಕರಗಳ ಸಹಾಯದಿಂದ ಸುರಕ್ಷಿತ ಅಂತರದಿಂದಲೇ ಬಾಂಬ್'ನ ಫ್ಯೂಸ್'ಗಳನ್ನು ಕೀಳಲು ಯೋಜಿಸಲಾಗಿದೆ. ಇದರಲ್ಲಿ ಯಶಸ್ವಿಯಾಗದಿದ್ದಲ್ಲಿ ವಾಟರ್ ಜೆಟ್ ಬಳಸಿ ಫ್ಯೂಸ್'ಗಳನ್ನು ಕಿತ್ತುಹಾಕಲು ನಿರ್ಧರಿಸಲಾಗಿದೆ.
ಫ್ರಾಂಕ್'ಫರ್ಟ್, ಜರ್ಮನಿ(ಸೆ. 03): ಎರಡನೇ ವಿಶ್ವ ಮಹಾಯುದ್ಧದ ವೇಳೆ ಹಾಕಲಾಗಿದ್ದ ಬಾಂಬುಗಳು ಜರ್ಮನಿಯಲ್ಲಿ ಪ್ರತೀ ವರ್ಷ ಪತ್ತೆಯಾಗುತ್ತಲೇ ಇವೆ. ವಾರದ ಹಿಂದಷ್ಟೇ ಕಟ್ಟಡವೊಂದರಲ್ಲಿ ಅಂಥ ಎರಡು ಬಾಂಬ್'ಗಳು ಸಿಕ್ಕಿವೆ. ಈ ಬಾಂಬುಗಳನ್ನು ನಿಷ್ಕ್ರಿಯಗೊಳಿಸಲು ಜರ್ಮನಿ ಸರಕಾರ ಸಕಲ ರೀತಿಯಲ್ಲಿ ತಯಾರಿ ಮಾಡಿಕೊಂಡಿದೆ. ಬಾಂಬ್'ಗಳಿರುವ ಜಾಗದಿಂದ ಒಂದೂವರೆ ಕಿಮೀ ವ್ಯಾಸದ ಸುತ್ತಲಿನ ಪ್ರದೇಶಗಳಿಂದ ಎಲ್ಲಾ ಜನರನ್ನು ತೆರವುಗೊಳಿಸಲಾಗುತ್ತಿದೆ. ಸುಮಾರು 60 ಸಾವಿರ ಜನರನ್ನು ದೂರದ ಸುರಕ್ಷಿತ ಜಾಗಕ್ಕೆ ಕಳುಹಿಸಲಾಗುತ್ತಿದೆ. ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿರುವ ಕೆಲ ಜನರನ್ನು ಬಲವಂತವಾಗಿ ಕಳುಹಿಸಲು ಸರಕಾರ ಅಣಿಯಾಗಿದೆ. ಇದಕ್ಕಾಗಿ ಹೀಟ್ ಸೆನ್ಸಿಂಗ್ ಕ್ಯಾಮರಾಗಳಿರುವ ಹೆಲಿಕಾಪ್ಟರ್'ಗಳನ್ನು ಬಳಸಲಾಗುತ್ತಿದೆ. ಇವು ಜನರ ಇರುವಿಕೆಯನ್ನ ಪತ್ತೆ ಮಾಡಲ್ಲುವು.
ಬಾಂಬ್ ನಿಷ್ಕ್ರಿಯಗೊಳಿಸಲು ವಿಶೇಷ ತಂತ್ರಜ್ಞಾನ:
2010ರಲ್ಲಿ ಸುಮಾರು 450 ಕಿಲೋ ಬಾಂಬ್'ವೊಂದನ್ನು ಡಿಫ್ಯೂಸ್ ಮಾಡಲು ಹೋಗಿ ಮೂವರು ಸ್ಫೋಟಕ ತಜ್ಞರು ಬಲಿಯಾಗಿದ್ದರು. ಈಗ ಅಂಥದ್ದೇ ದುರಂತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಸಲ ಬಾಂಬ್ ನಿಷ್ಕ್ರಿಯಗೊಳಿಸಲು ವಿಶೇಷ ಪರಿಕರಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಪರಿಕರಗಳ ಸಹಾಯದಿಂದ ಸುರಕ್ಷಿತ ಅಂತರದಿಂದಲೇ ಬಾಂಬ್'ನ ಫ್ಯೂಸ್'ಗಳನ್ನು ಕೀಳಲು ಯೋಜಿಸಲಾಗಿದೆ. ಇದರಲ್ಲಿ ಯಶಸ್ವಿಯಾಗದಿದ್ದಲ್ಲಿ ವಾಟರ್ ಜೆಟ್ ಬಳಸಿ ಫ್ಯೂಸ್'ಗಳನ್ನು ಕಿತ್ತುಹಾಕಲು ನಿರ್ಧರಿಸಲಾಗಿದೆ.
ಯಾರು ಹಾಕಿದ್ದು ಈ ಬಾಂಬು?
ಎಚ್'ಸಿ 4000 ಎಂದು ಗುರುತಿಸಲಾಗಿರುವ ಈ ಬಾಂಬುಗಳನ್ನ 1939-45ರ 2ನೇ ಮಹಾಯುದ್ಧದ ವೇಳೆ ಬ್ರಿಟನ್ ದೇಶದವರು ಹಾಕಿದ್ದರು. ಆರು ವರ್ಷಗಳ ಆ ಮಹಾಯುದ್ಧದಲ್ಲಿ ಬ್ರಿಟನ್ ಮತ್ತು ಅಮೆರಿಕದ ಯುದ್ಧವಿಮಾನಗಳು ಜರ್ಮನಿಯ ಮೇಲೆ 15 ಲಕ್ಷ ಟನ್'ಗಳಷ್ಟು ಬಾಂಬ್'ಗಳನ್ನು ಹಾಕಿದ್ದವು. ಈ ಭೀಕರ ಪ್ರಹಾರಕ್ಕೆ 6 ಲಕ್ಷ ಜರ್ಮನ್ನರು ಬಲಿಯಾಗಿದ್ದರು. ಈ ಬಾಂಬುಗಳ ಪೈಕಿ ಶೇ.15ರಷ್ಟು ಬಾಂಬುಗಳು ಸಿಡಿದಿರಲಿಲ್ಲ.
ಎಲ್ಲೆಂದರಲ್ಲಿ ಬಿದ್ದಿವೆ ಬಾಂಬುಗಳು:
ಯುದ್ಧದ ವೇಳೆ ಸ್ಫೋಟವಾಗದೇ ಉಳಿದಿರುವ ಬಾಂಬುಗಳೇ ಈಗ ದೊಡ್ಡ ತಲೆನೋವಾಗಿರುವುದು. ಎಲ್ಲೆಂದರಲ್ಲಿ ಇವು ಪತ್ತೆಯಾಗುತ್ತಿವೆ. ಕಟ್ಟಡಗಳ ನೆಲಮಾಳಿಗೆಯಲ್ಲಿ ಕೆಲವು ಸಿಕ್ಕಿವೆ. ಭೂಮಿಯಲ್ಲಿ ಹುದುಗಿ ಹೋಗಿರುವ ಬಾಂಬುಗಳು ಅದೆಷ್ಟೋ ಇವೆ. ಎರಡು ತಿಂಗಳ ಹಿಂದಷ್ಟೇ ಕಿಂಡರ್'ಗಾರ್ಟನ್ ಶಾಲೆಯೊಂದರಲ್ಲಿ ಮಕ್ಕಳ ಆಟದ ಸಾಮಾನಿನಲ್ಲಿ ಎರಡು ಜೀವಂತ ಬಾಂಬುಗಳು ಸಿಕ್ಕಿದ್ದುಂಟು.