ನವದೆಹಲಿ[ಆ.19]: 2014ರ ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ದಿನದಿಂದಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಕಟು ಟೀಕಾರರಾಗಿದ್ದ ಬಿಜೆಪಿಯ ಮಾಜಿ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಶತ್ರುಘ್ನ ಸಿನ್ಹಾ ಅವರು ಒಮ್ಮಿಂದೊಮ್ಮೆಗೆ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿ ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೂಂ ಬೂಂ: ಮೋದಿ ಬೆಂಬಲಕ್ಕೆ ದೌಡಾಯಿಸಿದ ಚಿದಂಬರಂ!

ಈ ಬಗ್ಗೆ ಭಾನುವಾರ ಟ್ವೀಟ್‌ ಮಾಡಿದ ಸಿನ್ಹಾ, ‘ಸ್ವಾತಂತ್ರ್ಯ ದಿನದ ನಿಮ್ಮ (ಮೋದಿ) ಭಾಷಣ ಸಾಹಸ, ಭಾರೀ ಸಂಶೋಧನೆಯ ಹಾಗೂ ಯೋಚನೆಗಳಿಗೆ ಪ್ರೇರಣೆಯಾಗುವಂತಿತ್ತು.

ಬ್ರಾವೋ! ಕ್ಯುಡೋಸ್‌! ಭಾರತದ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಪ್ರಸ್ತಾಪಿಸಿದ ನಿಮ್ಮ ಭಾಷಣ ಅದ್ಭುತ ಹಾಗೂ ಅಭಿನಂದನೆಗೆ ಅರ್ಹ’ ಎಂದಿದ್ದಾರೆ. ಇತ್ತೀಚೆಗಷ್ಟೇ ಸ್ವಾತಂತ್ರ್ಯ ದಿನದ ಮೋದಿ ಭಾಷಣಕ್ಕೆ ಹಿರಿಯ ಕಾಂಗ್ರೆಸ್ಸಿಗ ಪಿ. ಚಿದಂಬರಂ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.