ಭಾರತ ಮಾತಾ ಕೀ ಜೈ’ ಎಂದು ಹೇಳಲು ನಿರಾಕರಿಸಿದವರು ಪಾಕಿಸ್ತಾನಿಗಳು ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಲಿಯಾ: ‘ಭಾರತ ಮಾತಾ ಕೀ ಜೈ’ ಎಂದು ಹೇಳಲು ನಿರಾಕರಿಸಿದವರು ಪಾಕಿಸ್ತಾನಿಗಳು ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್‌ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸಕ ಸುರೇಂದ್ರ ಸಿಂಗ್‌ ‘ಯಾರು ‘ಭಾರತ ಮಾತಾ ಕೀ ಜೈ’ ‘ವಂದೇ ಮಾತರಂ’ ಎಂದು ಹೇಳಲು ನಿರಾಕರಿಸುತ್ತಾರೋ ಅವರು ಪಾಕಿಸ್ತಾನಿಗಳು. ಅವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ. ಯಾರು ಮಾತೃಭೂಮಿಗೆ ಗೌರವ ನೀಡುವುದಿಲ್ಲವೋ, ಅವರ ದೇಶಪ್ರೇಮವೂ ಸಂದೇಹಾತ್ಮಕವಾದುದು’ ಎಂದಿದ್ದಾರೆ. 

ಕಳೆದ ತಿಂಗಳು 2024ರೊಳಗೆ ಭಾರತ ಹಿಂದುಗಳ ದೇಶವಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು.