ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರವಾಗಿ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಉಗ್ರ ಬಲಪಂಥೀಯ ವಿಚಾರಧಾರೆಯನ್ನು ವಿರೋಧಿಸುವರು ಅಪಾಯದಲ್ಲಿದ್ದಾರೆಂದು ಹೇಳಿದ್ದಾರೆ.
ಮುಂಬೈ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ವಿಚಾರವಾಗಿ ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ, ಉಗ್ರ ಬಲಪಂಥೀಯ ವಿಚಾರಧಾರೆಯನ್ನು ವಿರೋಧಿಸುವರು ಅಪಾಯದಲ್ಲಿದ್ದಾರೆಂದು ಹೇಳಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಚಿದಂಬರಂ, ಉಗ್ರ ಬಲಪಂಥೀಯ ವಿಚಾರಧಾರೆಯನ್ನು ವಿರೋಧಿಸುವರು ಅಪಾಯದಲ್ಲಿದ್ದಾರೆಂಬುವುದು ವಾಸ್ತವ. ಗೌರಿ ಲಂಕೇಶ್ ಹತ್ಯೆಗಾಗಿ ರಾಹುಲ್ ಗಾಂಧಿ ಯಾರನ್ನು ದೂಷಿಸುತ್ತಿಲ್ಲ. ಅಪರಾಧಿ ಯಾರೆಂದು ಪತ್ತೆಹಿಡಿಯುವುದು ಪೊಲೀಸರ ಕೆಲಸ. ಓರ್ವ ನಿರ್ಭೀತ ಪತ್ರಕರ್ತೆಯ ಹತ್ಯೆಯಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಶೀಘ್ರವೇ ಪ್ರಕರಣವನ್ನು ಭೇದಿಸಬೇಕು ಎಂದು ಹೇಳಿದ್ದಾರೆ.
ರಾಜಕಾರಣಿಗಳು ನೀಡುವ ಹೇಳಿಕೆಗಳು ಬರೇ ರಾಜಕೀಯ ಹೇಳಿಕೆಗಳಾಗಿವೆಯೇ ಹೊರತು ಅವುಗಳಿಗೆ ಹೆಚ್ಚು ಪ್ರಾಮುಖ್ಯತೆಯಿಲ್ಲ. ಗೌರಿ ಲಂಕೇಶ್ ಹತ್ಯೆಯನ್ನು ರಾಜಕೀಯಕರಣಗೊಳಿಸಬಾರದೆಂದು ಅವರು ಹೇಳಿದ್ದಾರೆ.
ಏ.ಆರ್. ರಹಮಾನ್ ಹೇಳಿಕೆಯನ್ನು ಬೆಂಬಲಿಸಿದ ಚಿದಂಬರಂ, ಇದು ನಮ್ಮ ಪೂರ್ವಜರು ನಿರ್ಮಿಸಿದ ಭಾರತವಲ್ಲ, ನಮ್ಮ ಮುಂದಿನ ಪೀಳಿಗೆಯು ಜೀವಿಸಬೇಕಾದ ಭಾರತವೂ ಅಲ್ಲ. ದು ಬದಲಾಗಬೇಕು, ಎಂದು ಅವರು ಹೇಳಿದ್ದಾರೆ.
