ರೈತರಿಗೆ ಸಿಹಿ ಸುದ್ದಿ : ವಾರದ ಮೊದಲೇ ಆರಂಭವಾಗುತ್ತದೆ ಮುಂಗಾರು ಮಳೆ

This Year Rain Appear Very early
Highlights

ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುತ್ತಿದ್ದ ಮುಂಗಾರು ಮಾರುತಗಳು ಈ ಬಾರಿ ಮೇ 25ರಂದೇ ಪ್ರವೇಶಿಸುವ ಸಾಧ್ಯತೆಯಿದ್ದು, ಕರ್ನಾಟಕದಲ್ಲೂ ಒಂದು ವಾರ ಮೊದಲು ಮುಂಗಾರು ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ. 

ನವದೆಹಲಿ : ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುತ್ತಿದ್ದ ಮುಂಗಾರು ಮಾರುತಗಳು ಈ ಬಾರಿ ಮೇ 25ರಂದೇ ಪ್ರವೇಶಿಸುವ ಸಾಧ್ಯತೆಯಿದ್ದು, ಕರ್ನಾಟಕದಲ್ಲೂ ಒಂದು ವಾರ ಮೊದಲು ಮುಂಗಾರು ಮಳೆ ಪ್ರಾರಂಭವಾಗುವ ನಿರೀಕ್ಷೆಯಿದೆ. ಅರಬ್ಬಿ ಸಮುದ್ರದ ಮೇಲೆ ಮುಂಗಾರು ಮಾರುತಗಳ ಸಂಚಾರವನ್ನು ಗಮನಿಸಿದರೆ ಈ ಬಾರಿ ಮೇ 25ಕ್ಕೆ ಅವು ಕೇರಳವನ್ನು ಪ್ರವೇಶಿಸಲಿವೆ. 

ಸಾಮಾನ್ಯವಾಗಿ ಮುಂಗಾರು ಮಾರುತಗಳು ಜೂನ್ 1ರಂದು ಕೇರಳದಲ್ಲಿ ಮಳೆ ಸುರಿಸುತ್ತಿದ್ದವು. ಈ ಬಾರಿ ನಮ್ಮ ಲೆಕ್ಕಾಚಾರದಂತೆ ಮೇ 25ಕ್ಕೆ ಕೇರಳ ಪ್ರವೇಶಿಸಿದರೆ ಕಳೆದ 7 ವರ್ಷಗಳಿಂದೀಚೆಗೆ ಇದು ಮೊದಲ ಬಾರಿ ಬಹಳ ಬೇಗ ಆರಂಭವಾದ ಮುಂಗಾರು ಮಳೆ ಯಾಗಲಿದೆ.

ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಮಾರುತಗಳು ಪ್ರವೇಶಿಸಿದ 2-3 ದಿನದ ನಂತರ ಕರ್ನಾಟಕದ ಕರಾವಳಿಯಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತದೆ. ನಂತರ ಒಳನಾಡುಗಳಿಗೆ ಪ್ರವೇಶಿಸುತ್ತದೆ. ಈ ಬಾರಿ ಕೇರಳದಲ್ಲಿ 25ಕ್ಕೆ ಮುಂಗಾರು ಮಳೆ ಆರಂಭವಾದರೆ ಕರ್ನಾಟಕದಲ್ಲಿ 27-28ರಂದೇ ಮಳೆ ಪ್ರಾರಂಭವಾಗಲಿದೆ.

loader