ಈ ವರ್ಷದ ಎಷ್ಟು ಲಾಂಗ್ ವೀಕೆಂಡ್ಸ್ ಇದೆ..? ಈಗಲೇ ಟ್ರಿಪ್ ಪ್ಲಾನ್ ಮಾಡಿ

ಬೆಂಗಳೂರು( ಜ.1): ಈ ವರ್ಷದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ನಿಮಗೆ ಗೊತ್ತಾ. ನೀವು ಹೆಚ್ಚು ದಿನಗಳ ಕಾಲ ಟೂರ್ ಮಾಡಬಹದಾಗಿದೆ. ಯಾಕೆ ಗೊತ್ತಾ..? ಈ ವರ್ಷ ಬರೋಬ್ಬರಿ 16 ಲಾಂಗ್ ವೀಕೆಂಡ್’ಗಳು ಇದೆ. ಆದ್ದರಿಂದ ಈಗಲೇ ನೀವು ರಜೆ ಪ್ಲಾನ್ ಮಾಡಿಕೊಳ್ಳಿ. ಎಲ್ಲೆಲ್ಲಿ ತೆರಳಬಹುದು ಎನ್ನುವ ಯೋಜನೆಯನ್ನು ರೂಪಿಸಿಕೊಳ್ಳಿ. ಯಾವಾಗ ಲಾಂಗ್ ವೀಕೆಂಡ್’ಗಳು ನಿಮಗೆ ಸಿಗುತ್ತೆ ಗೊತ್ತಾ..?

ಜನವರಿ : ಜನವರಿ ತಿಂಗಳಲ್ಲಿ 2 ಬಾರಿ ಲಾಂಗ್ ವೀಕೆಂಡ್ ಸಿಗಲಿದೆ. 13, 14, 15ರಂದು ಮೂರು ದಿನಗಳ ಕಾಲ ರಜೆ ಸಿಗಲಿದೆ. 15ರಂದು ಸಕ್ರಾಂತಿಗೆ ರಜೆ ದ್ದುಮ 26ರಂದು ಗಣರಾಜ್ಯೋತ್ಸವಕ್ಕೆ ರಜೆ ಇದ್ದು, 27ರಂದು ಶನಿವಾರ 28 ಭಾನುವಾರದ ರಜೆ ಸಿಗಲಿದೆ.

ಫೆಬ್ರವರಿ : ಈ ತಿಂಗಳಲ್ಲಿ 10, 11, 13ರಂದು ನಾಲ್ಕು ದಿನಗಳ ಕಾಲ ರಜೆ ಸಿಗಲಿದ್ದು, ದೂರ ಪ್ರಯಾಣ ಮಾಡಬಹುದಾಗಿದೆ. 113 ರಂದು ಮಹಾ ಶಿವರಾತ್ರಿ ಪ್ರಯುಕ್ತ ರಜೆ ಸಿಗುತ್ತಿದೆ. ಅಲ್ಲದೇ 12ರಂದು ಒಂದು ದಿನ ರಜೆ ತೆಗೆದುಕೊಂಡಲ್ಲಿ ನಾಲ್ಕು ದಿನ ರಜೆ ಎಂಜಾಯ್ ಮಾಡಬಹುದಾಗಿದೆ.

ಮಾರ್ಚ್ : ಈ ತಿಂಗಳಲ್ಲಿ ಅಲ್ಲದೇ 29, 30, 31, 1 ರಂದು ಮತ್ತೆ ನಾಲ್ಕು ದಿನ ರಜೆ ಸಿಗುತ್ತಿದೆ.

ಏಪ್ರಿಲ್ : 14 ರಂದು ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ರಜೆ ಇದ್ದು, 15 ಭಾನುವಾರ ಬಂದಿದೆ. ಇನ್ನು 18ರಂದು ಬಸವ ಜಯಂತಿ ಇದ್ದು, 16 17 ರಂದು ರಜೆ ತೆಗೆದುಕೊಂಡಲ್ಲಿ ನಿಮಗೆ ಹೆಚ್ಚು ದಿನ ಲಾಂಗ್ ವೀಕೆಂಡ್ ಸಿಕ್ಕಿದಂತಾಗಲಿದೆ.

ಮೇ : ಈ ತಿಂಗಳಲ್ಲಿ ಮಾತ್ರ ನಿಮಗೆ ಲಾಂಗ್ ವೀಕೆಂಡ್ ಸಿಗುತ್ತಿಲ್ಲ. ಮೇ 1ರಂದು ಕಾರ್ಮಿಕ ಜಯಂತಿ ಮಂಗಳವಾರ ಬಂದಿದೆ.

ಜೂನ್ : ಈ ತಿಂಗಳಲ್ಲಿ ನಿಮಗೆ 16, 17 ರಂದು 2 ರಜೆ ಸಿಗಲಿದೆ.

ಜುಲೈ : ಜುಲೈ ತಿಂಗಳಲ್ಲಿಯೂ ಕೂಡ ಯಾವುದೇ ವಿಶೇಷ ರಜೆಗಳು ಇರುವುದಿಲ್ಲ.

ಆಗಸ್ಟ್ : ಆಗಸ್ಟ್ ತಿಂಗಳಲ್ಲಿಯೂ ಕೂಡ ಯಾವುದೇ ಹೆಚ್ಚಿನ ರಜೆ ಸಿಗುತ್ತಿಲ್ಲ. 15ರಂದು ಸ್ವಾತಂತ್ರ್ಯ ದಿನಾಚರಣೆ ರಜೆ ಇದ್ದು, ಇದು ಬುಧವಾರ ಬಂದಿದೆ. ಇನ್ನು 22 ರಂದು ಬಕ್ರೀದ್ ಪ್ರಯುಕ್ತ ಇನ್ನೊಂದು ರಜೆ ಇದ್ದು ಇದು ಕೂಡ ಬುಧವಾರವೇ ಬಂದಿದೆ.

ಸೆಪ್ಟೆಂಬರ್ : ಈ ತಿಂಗಳು ನಿಮಗೆ 2 ಲಾಂಗ್ ವೀಕೆಂಡ್ ಸಿಗುತ್ತಿದೆ. 13ರಂದು ಗಣೇಶ ಹಬ್ಬದ ಪ್ರಯುಕ್ತ ರಜೆ ಇದ್ದು ಇದು ಗುರುವಾರ ಬಂದಿದೆ. ಒಂದು ದಿನ ರಜೆ ತೆಗೆದುಕೊಂಡಲ್ಲಿ 4 ದಿನ ರಜೆ ದೊರಕುತ್ತಿದೆ.

ಇನ್ನೊಂದು 21 ರಂದು ಮೊಹರಂ ಪ್ರಯುಕ್ತ ಶುಕ್ರವಾರ ರಜೆ ಇದ್ದು ರಜೆ ಇದ್ದು, ಮೂರು ದಿನಗಳ ಲಾಂಗ್ ವೀಕೆಂಡ್ ಸಿಗುತ್ತಿದೆ.

ಅಕ್ಟೋಬರ್ : ಅಕ್ಟೋಬರ್ ತಿಂಗಳಲ್ಲಿಯೂ ನಿಮಗೆ ಹೆಚ್ಚಿನ ಸಾಲು ರಜೆಗಳು ಸಿಗುತ್ತಿದೆ. ಸೆಪ್ಟೆಂಬರ್ 30ನೇ ತಾರೀಕು ಭಾನುವಾರ ಬಂದಿದ್ದು, 2 ರಂದು ಮಂಗಳವಾರ ಗಾಂಧಿ ಜಯಂತಿ ಪ್ರಯುಕ್ತ ರಜೆ ಸಿಗುತ್ತಿದೆ. ಇದು ಕೂಡ ನಿಮಗೆ ಲಾಂಗ್ ವೀಕೆಂಡ್ ಆಗಲಿದೆ. ಇನ್ನು 6,7,8ರಂದು ಕೂಡ ಲಾಂಗ್ ವೀಕೆಂಡ್ ಸಿಗುತ್ತಿದೆ. 8 ರಂದು ಮಹಾಲಯ ಇದ್ದು, ಇದು ಸೋಮವಾರದಂದು ಬಂದಿದೆ.

ಮತ್ತೆ 18, 19ರಂದು ಆಯುಧ ಪೂಜೆ, ವಿಜಯ ದಶಮಿಯಂದು ರಜೆ ಸಿಗುತ್ತಿದೆ. ಇದು ಲಾಂಗ್ ವೀಕೆಂಡ್ ಆಗಿರಲಿದೆ. 18 ಗುರುವಾರ 19 ಶುಕ್ರವಾರ ಬಂದಿದ್ದು, ಶನಿವಾರ ಭಾನುವಾರ ಸೇರಿ ನಾಲ್ಕು ದಿನ ರಜೆ ಸಿಗುತ್ತಿದೆ. ಮತ್ತೆ 24ರಂದು ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಬುಧವಾರ ರಜೆ ಸಿಗುತ್ತಿದೆ.

ನವೆಂಬರ್ : ನವೆಂಬರ್ ತಿಂಗಳಲ್ಲಿಯೂ ಕೂಡ ನಿಮಗೆ ಹೆಚ್ಚಿನ ರಜೆಗಳು ಸಿಗುತ್ತಿವೆ. 1ನೆ ತಾರೀಕು ಗುರುವಾರ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಜೆ ಸಿಗುತ್ತಿದ್ದರೆ ಒಂದು ರಜೆ ತೆಗೆದುಕೊಂಡು ಲಾಂಗ್ ವೀಕೆಂಡ್ ಪ್ಲಾನ್ ಮಾಡಬಹುದು.

ಮತ್ತೆ 6ನೇ ತಾರೀಕು ಮಂಗಳವಾರ ನರಕ ಚತುರ್ದಶಿ, 8 ಗುರುವಾರ ಬಲಿಪಾಡ್ಯಮಿ ರಜೆ ಸಿಗಲಿದೆ. ಮತ್ತೆ 21 ರಂದು ಈದ್ ಮಿಲಾದ್ ಪ್ರಯುಕ್ತ ಬುಧವಾರ ರಜೆ ಸಿಗುತ್ತಿದೆ. ಮತ್ತೆ 24 ರಿಂದ ಶನಿವಾರ ಭಾನುವಾರ ಸೋಮವಾರ ರಜೆ ಸಿಗುತ್ತಿದೆ. 26ರಂದು ಕನಕದಾಸ ಜಯಂತಿಗಾಗಿ ರಜೆ ಇರಲಿದೆ.

ಡಿಸೆಂಬರ್ : ಈ ತಿಂಗಳಲ್ಲಿ ಒಂದೇ ಲಾಂಗ್ ವೀಕೆಂಡ್ ಸಿಗಲಿದೆ. 22 ಶನಿವಾರ 23 ಮತ್ತು 24ರಂದು ಸೋಮವಾರ ರಜೆ ತೆಗೆದುಕೊಂಡರೆ 25 ಮಂಗಳವಾರ ಕ್ರಿಸ್ಮಸ್ ರಜೆ ಸಿಗಲಿದೆ.