ಕೈ ಕಮರಿತು- ಕಮಲ ಅರಳಿತು : ಸ್ವಾಮೀಜಿ ಭವಿಷ್ಯ

This Year BJP Win In Karnataka Saya Swamiji
Highlights

ಪರೋಕ್ಷವಾಗಿ ಈ ಬಾರಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಸ್ವಾಮೀಜಿ  ಭವಿಷ್ಯ ನುಡಿದಿದ್ದಾರೆ

ಕೊಪ್ಪಳ : ಪರೋಕ್ಷವಾಗಿ ಈ ಬಾರಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಸ್ವಾಮೀಜಿ  ಭವಿಷ್ಯ ನುಡಿದಿದ್ದಾರೆ. ಕಾಲಜ್ಞಾನ ಶರಣಬಸವ ಮಾಹಾ ಸ್ವಾಮಿಜಿ  ಕರ್ನಾಟಕ ಚುನಾವಣಾ ಭವಿಷ್ಯ‌ ನುಡಿದಿದ್ದಾರೆ.   ಕೊಪ್ಪಳ ತಾಲೂಕಿನ ಟನಕನಕಲ್ ಕಾಲಜ್ಞಾನ ಮಠದ ಸ್ಚಾಮೀಜಿ ಅವರು ಭವಿಷ್ಯ ಹೇಳಿದ್ದು,  ಯಡಿಯೂರಪ್ಪ ಹಾಗೂ ಕುಮರಸ್ವಾಮಿ ಮುನ್ನಡೆ ಕಾಯ್ದುಕೊಳ್ಳುತ್ತಾರೆ.

ಸಿದ್ದರಾಮಯ್ಯ ಭವಿಷ್ಯ ಅತಂತ್ರವಾಗಲಿದೆ.  ಸಿದ್ದರಾಮಯ್ಯ ಈ ಬಾರಿ ಸೋಲಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.   ಈ ಬಾರಿ ದಕ್ಷತೆಯ ಅಧಿಕಾರ ಜಾರಿಗೆ ಬರುತ್ತದೆ‌‌‌.  ಮುಂಬರೋ ಚುನಾವಣೆಯಲ್ಲಿ ಪಕ್ಷೇತರರು ಪ್ರಮುಖ ಪಾತ್ರ ವಹಿಸಲಿದ್ದಾರೆ.  11 ರಿಂದ ,12 ಸ್ಥಾನದಲ್ಲಿ ಪಕ್ಷೇತರು ಜಯಿಸಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.

 ಪ್ರತಿ ಚುನಾವಣೆ ಸಮಯದಲ್ಲಿ ಭವಿಷ್ಯ ನುಡಿಯೋ ಸ್ವಾಮೀಜಿಯವರು ಮತ್ತೊಂದು ಭವಿಷ್ಯವನ್ನು ನುಡಿದಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ಅನುಮಾನ ಎಂದೂ ಕೂಡ ಹೇಳಿದ್ದಾರೆ. ಇನ್ನು  ಹೈದ್ರಾಬಾದ್ ಕರ್ನಾಟಕ ಅಥವಾ ಹುಬ್ಬಳ್ಳಿಯವರು ಮುಖ್ಯಮಂತ್ರಿ ಆಗುತ್ತಾರೆ.  ಯಡಿಯೂರಪ್ಪ ಸಿಎಂ ಆಗಲು ಕಾನೂನು ತೊಡಕಾಗಬಹುದು ಎಂದು ಹೇಳಿದ್ದಾರೆ.

loader