ದೆವ್ವವನ್ನು ವಿವಾಹವಾಗಿ ಉತ್ತಮ ಲೈಂಗಿಕ ಜೀವನ ನಡೆಸುತ್ತಿದ್ದಾಳಂತೆ ಈಕೆ

First Published 24, Jan 2018, 12:38 PM IST
This woman married a 300 year old ghost
Highlights

ಐರಿಶ್ ಮಹಿಳೆ ಅಮಂಡಾ ಟೀಗೂ ಹೇಳಿದ್ದನ್ನು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದು ಗ್ಯಾರಂಟಿ. ಅಮಂಡಾ  ತಾನು ಕಾನೂನಾತ್ಮಕವಾಗಿ  ದೆವ್ವವನ್ನು ವಿವಾಹವಾಗಿದ್ದಾಗಿ ಹೇಳಿಕೊಳ್ಳುತ್ತಿದ್ದಾಳೆ.  ಜಾಕ್ ಟೀಗು ಎನ್ನುವ  ವ್ಯಕ್ತಿ 1700ನೇ ಇಸವಿಯಲ್ಲಿ ಮೃತಪಟ್ಟಿದ್ದ. ಆತ ದೆವ್ವವಾಗಿದ್ದು, ತಾನು ಆ ದೆವ್ವವನ್ನೇ ವಿವಾಹವಾಗಿದ್ದಾಗಿ ಹೇಳಿದ್ದಾರೆ. 

ನವದೆಹಲಿ (ಜ.24): ಐರಿಶ್ ಮಹಿಳೆ ಅಮಂಡಾ ಟೀಗೂ ಹೇಳಿದ್ದನ್ನು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದು ಗ್ಯಾರಂಟಿ. ಅಮಂಡಾ  ತಾನು ಕಾನೂನಾತ್ಮಕವಾಗಿ  ದೆವ್ವವನ್ನು ವಿವಾಹವಾಗಿದ್ದಾಗಿ ಹೇಳಿಕೊಳ್ಳುತ್ತಿದ್ದಾಳೆ.  ಜಾಕ್ ಟೀಗು ಎನ್ನುವ  ವ್ಯಕ್ತಿ 1700ನೇ ಇಸವಿಯಲ್ಲಿ ಮೃತಪಟ್ಟಿದ್ದ. ಆತ ದೆವ್ವವಾಗಿದ್ದು, ತಾನು ಆ ದೆವ್ವವನ್ನೇ ವಿವಾಹವಾಗಿದ್ದಾಗಿ ಹೇಳಿದ್ದಾರೆ. 

ಇಷ್ಟೇ ಅಲ್ಲದೇ ಆಕೆ ಹೇಳಿದ ಮತ್ತೊಂದು ವಿಚಾರ  ಕೇಳಿದರೆ ನೀವು ಬೆರಗಾಗುತ್ತೀರಾ.  ಆಕೆ ಆ ದೆವ್ವದೊಂದಿಗೆ ಉತ್ತಮ ಸೆಕ್ಸ್’ನ್ನು ಕೂಡ ನಡೆಸಿದ್ದಾಳಂತೆ.ಟೀಗೂ ಕಳೆದ ಅಕ್ಟೋಬರ್ 2017ರಲ್ಲಿ ಅಟ್ಲಾಂಟಿಕ್ ಓಶಿಯನ್ನಲ್ಲಿ ಮತ್ತೆ ಆ ದೆವ್ವದೊಂದಿಗೆ ವಿವಾಹವಾಗಿದ್ದು, ಈ ಸಂದರ್ಭವನ್ನು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಂಭ್ರಮಾಚರಣೆ ಮಾಡಿದ್ದಾಗಿಯೂ ಕೂಡ ಹೇಳಿದ್ದಾಳೆ.

ನಾಲ್ಕು ಮಕ್ಕಳ ತಾಯಿಯಾಗಿರುವ ಈಕೆ ವಿಚ್ಛೇದನ ಪಡೆದುಕೊಂಡಿದ್ದು, 300 ವರ್ಷಗಳ ಹಿಂದಿನ ತನ್ನ ಪ್ರಿಯತಮನ ದೆವ್ವವನ್ನು ವಿವಾಹವಾಗಿದ್ದಾಗಿ ಹೇಳಿದ್ದಾಳೆ.

loader