ನವದೆಹಲಿ(ಸೆ.29): ಉರಿ ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆಯ ದಿಟ್ಟಕ್ರಮವನ್ನು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೊಂಡಾಡಿದ್ದಾರೆ.
ಭಾರತದ ಗಡಿ ನಿಯಂತ್ರಣ ರೇಖೆ ದಾಟಿ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೈನಿಕರು ಇಬ್ಬರು ಪಾಕ್ ಸೈನಿಕರು ಸೇರಿದಂತೆ ಒಟ್ಟು 40 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಭಾರತೀಯ ಸೈನಿಕರ ಕೆಚ್ಚೆದೆಯ ಕಾರ್ಯಾಚರಣೆಯನ್ನು ಟ್ವಿಟ್ಟರ್'ನಲ್ಲಿ ಕೊಂಡಾಡಿರುವ ಸೆಹ್ವಾಗ್, ಭಾರತೀಯ ಸೇನೆಗೆ ಅಭಿನಂದನೆಗಳು. 'ನಮ್ಮ ಹುಡುಗರು ನಿಜಕ್ಕೂ ಚೆನ್ನಾಗಿ ಆಟವಾಡಿದ್ದಾರೆ' ಎಂದು ಹೇಳಿದ್ದಾರೆ.
ಬುಧವಾರ ರಾತ್ರಿ 12.30 ರಿಂದ 4.30 ರವರೆಗೆ ಗಡಿನಿಯಂತ್ರಣ ರೇಖೆ ದಾಟಿ ಏಳು ಉಗ್ರಗಾಮಿಗಳ ಕ್ಯಾಂಪ್'ನಲ್ಲಿ ಅವಿತಿದ್ದ ಉಗ್ರರನ್ನು ಭಾರತೀಯ ಸೇನೆ ಸದೆ ಬಡಿದಿದೆ.
