ಒಮ್ಮೆ ದೇಶದ ಇತಿಹಾಸದ ಒಳಗೆ ಹೋಗಿ ಬರಬೇಕಾಗುತ್ತದೆ. ಅಖಂಡ ಭಾರತ ಹಾಗಿತ್ತು-ಹೀಗಿತ್ತು ಎಂದು ವೈಭವ ನೆನೆಯುವ ನಾವು ಅದರ ಕಲ್ಪನೆಯನ್ನು ಮಾತ್ರ ಮಾಡಿಕೊಳ್ಳುತ್ತೇವೆ. ಅದನ್ನೇ  ಒಮ್ಮೆ ನೋಡಿಕೊಂಡು ಬಂದರೆ ಹೇಗೆ?

ವಾರಣಾಸಿ[ಆ.1] ಅಖಂಡ ಭಾರತವನ್ನು ನಿಮ್ಮ ಮುಂದೆ ಕಟ್ಟಿಕೊಡುವ ಅಮೃತ ಶಿಲೆಯಲ್ಲಿ ನಿರ್ಮಾಣವಾದ ‘ಭಾರತ ಮಾತೆಯ ಮಂದಿರ’ ವಾರಣವಾಸಿಯಲ್ಲಿದೆ. 1918 ರಿಂದ 1924ರ ಅವಧಿಯಲ್ಲಿ ನಿರ್ಮಾಣದವಾದ ಈ ಅಮೃತ ಶಿಲೆಯ ನಕಾಶೆಯಲ್ಲಿ ಬಲುಚಿಸ್ತಾನ, ಅಪಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ ಮತ್ತು ಶ್ರೀಲಂಕಾ ಇದೆ.

ಮುಂದಿನ ಸಾರಿ ವಾರಣಾಸಿಗೆ ತೆರಳಿದಾಗ ಯಾವುದೇ ಕಾರಣಕ್ಕೂ ಭಾರತದ ಸಾರ ಹೇಳುವ ಈ ದೇವಾಲಯಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ. ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ ಕ್ಯಾಂಪಸ್ ನಲ್ಲಿ ಈ ದೇವಾಲಯ ಇದೆ. 1936 ರ ಅಕ್ಟೋಬರ್ 25 ರಂದು ಮಹಾತ್ಮ ಗಾಂಧೀಜಿ ಈ ದೇವಾಲಯದ ಉದ್ಘಾಟನೆ ಮಾಡಿದ್ದರು ಎನ್ನುವುದು ಮತ್ತೂ ವಿಶೇಷ.

450 ಪರ್ವತಗಳು, ಸರೋವರ, ನದಿ, ಮುಖಜಭೂಮಿ, ಪ್ರಸ್ಥಭೂಮಿ ಸೇರಿದಂತೆ ಎಲ್ಲ ಭೌಗೋಳಿಕ ಚಿತ್ರಣವನ್ನು ಕಾಣಬಹುದು. ಸ್ವಾತಂತ್ರ್ಯದಿನ ಮತ್ತು ಗಣರಾಜ್ಯದಿನದ ವೇಳೆ ನದಿ ಎಂದು ಗುರುತಿಸಿರುವ ಪ್ರದೇಶಕ್ಕೆ ನೀರು ತುಂಬಿಸುತ್ತೇವೆ ಜತೆಗೆ ಹೂವಿನ ಅಲಂಕಾರ ಮಾಡುತ್ತೇವೆ ಎಂದು ಉಸ್ತುವಾರಿ ವಹಿಸಿಕೊಂಡಿರುವ ರಾಜು ಸಿಂಗ್ ತಿಳಿಸಿದ್ದಾರೆ.