ದಕ್ಷಿಣ ಆಫ್ರಿಕಾದ ವರ್ಣಬೇಧ ವಿರೋಧಿ ನೆಲ್ಸನ್ ಮಂಡೇಲಾರನ್ನು ಕೋಟ್ ಮಾಡಿ ಆಗಸ್ಟ್ 12ರಂದು ಬರಾಕ್ ಒಬಾಮಾ ಟ್ವೀಟ್ ಒಂದನ್ನು ಮಾಡಿದ ಟ್ವೀಟ್ 28 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಈ ಮೂಲಕ ಈ ಟ್ವಿಟರ್'ನಲ್ಲಿ ಅತಿ ಹೆಚ್ಚು ಮಂದಿಯಿಂದ ಲೈಕ್ ಪಡೆದು ಈ ಟ್ವೀಟ್ ಇತಿಹಾಸ ನಿರ್ಮಿಸಿದೆ.

ವಾಷಿಂಗ್ಟನ್(ಆ.16): ದಕ್ಷಿಣ ಆಫ್ರಿಕಾದ ವರ್ಣಬೇಧ ವಿರೋಧಿ ನೆಲ್ಸನ್ ಮಂಡೇಲಾರನ್ನು ಕೋಟ್ ಮಾಡಿ ಆಗಸ್ಟ್ 12ರಂದು ಬರಾಕ್ ಒಬಾಮಾ ಟ್ವೀಟ್ ಒಂದನ್ನು ಮಾಡಿದ ಟ್ವೀಟ್ 28 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಈ ಮೂಲಕ ಈ ಟ್ವಿಟರ್'ನಲ್ಲಿ ಅತಿ ಹೆಚ್ಚು ಮಂದಿಯಿಂದ ಲೈಕ್ ಪಡೆದು ಈ ಟ್ವೀಟ್ ಇತಿಹಾಸ ನಿರ್ಮಿಸಿದೆ.

ಟ್ವೀಟ್'ನಲ್ಲೇನಿದೆ?

ಟ್ವೀಟ್ ಮಾಡಿರುವ ಒಬಾಮಾ "ಯಾರೊಬ್ಬರೂ ಕೂಡಾ ತಾವು ಹುಟ್ಟುವಾಗ ಮತ್ತೊಬ್ಬ ವ್ಯಕ್ತಿಯನ್ನು ಆತನ ಮೈ ಬಣ್ಣದಿಂದ, ಆತನ ಹಿನ್ನೆಲೆ ಮತ್ತು ಆತನ ಧರ್ಮವನ್ನು ದ್ವೇಷಿಸುತ್ತಾ ಹುಟ್ಟಿರುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.

Scroll to load tweet…

ಶನಿವಾರದಂದು ಮಾಡಿರುವ ಈ ಟ್ವೀಟ್'ನೊಂದಿಗೆ 56 ವರ್ಷದ ಬರಾಕ್ ಒಬಾಮಾ ತಮ್ಮದೊಂದು ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಇದರಲ್ಲಿ ಅವರು ಒಂದೇ ಕೋಣೆಯಲ್ಲಿರುವ ವಿವಿಧ ಜಾತಿಯ ಮಕ್ಕಳನ್ನು ಕಿಟಕಿ ಮೂಲಕ ನೋಡುತ್ತಿದ್ದಾರೆ.

 28ಲಕ್ಷಕ್ಕೂ ಅಧಿಕ ಮಂದಿಯಿಂದ ಲೈಕ್ ಪಡೆದ ಟ್ವೀಟ್

ಸಿಲಿಕಾನ್ ವ್ಯಾಲಿಯಲ್ಲಿರುವ ಸೋಷಲ್ ಮೀಡಿಯಾ ಕಂಪೆನಿಯೊಂದು 'ಬರಾಕ್ ಒಬಾಮಾರ ಈ ಟ್ವೀಟ್ ಈವರೆಗಿನ ಅತಿ ಹೆಚ್ಚು ಲೈಕ್ಸ್ ಪಡೆದ ಟ್ವೀಟ್ ಆಗಿದೆ. ಇದನ್ನು 28 ಲಕ್ಷಕ್ಕೂ ಅಧಿಕ ಮಂದಿ ಇಷ್ಟಪಟ್ಟಿದ್ದಾರೆ. ಅಲ್ಲದೇ ಈ ಟ್ವೀಟ್'ನ್ನು 12 ಲಕ್ಷಕ್ಕೂ ಅಧಿಕ ಬಾರಿ ರೀಟ್ವೀಟ್ ಮಾಡಲಾಗಿದೆ. ಈ ಮೂಲಕ ಒಬಾಮಾರ ಈ ಪೋಸ್ಟ್ ಅತಿ ಹೆಚ್ಚು ರೀಟ್ವೀಟ್ ಆದ ಟ್ವೀಟ್'ಗಳ್ಲಲಿ 5ನೇ ಸ್ಥಾನದಲ್ಲಿದೆ' ಎಂದು ತಿಳಿಸಿದೆ.