Asianet Suvarna News Asianet Suvarna News

ಈ ಬಾರಿ ಅಕ್ಷಯ ತೃತೀಯ ಶುಭವೋ? ಅಶುಭವೋ?: ಚಿನ್ನ ಖರೀದಿ ಗ್ರಾಹಕರಲ್ಲಿ ಗೊಂದಲ

ಈ ಬಾರಿ ಶುಕ್ರವಾರ ಅಕ್ಷಯ ತೃತೀಯ ಬಂದಿರುವುದರಿಂದ ಹೆಚ್ಚು ಶುಭಕರ ಎಂಬುದು ಗ್ರಾಹಕರ ನಂಬಿಕೆ. ಆದರೆ ಕೆಲ ಜ್ಯೋತಿಷ್ಯರು ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಿದ್ರೆ, ಅಶುಭ ಎಂಬ ಸಂದೇಶ ರವಾನಿಸಿದರು. ಹೀಗಾಗಿ ಗ್ರಾಹಕರಲ್ಲಿ ಚಿನ್ನ ಖರೀದಿ ಮಾಡಬೇಕಾ? ಬೇಡವಾ? ಎಂದು ಗೊಂದಲವುಂಟಾಗಿತ್ತು. ಹೀಗಾಗಿ ಅಕ್ಷಯ ತೃತೀಯದಂದು ಗ್ರಾಹಕರು ಚಿನ್ನಾಭರಣ ಖರೀದಿಸಿದ ನಂತರ ಮಳಿಗೆಗಳಲ್ಲೇ ಗ್ರಾಹಕರ ಆಭರಣಗಳಿಗೆ ಪೂಜೆ ನಡೆಸಲು ರಾಜ್ಯ ಆಭರಣ ಒಕ್ಕೂಟ ನಿರ್ಧರಿಸಿದೆ.

This Time Akshaya Tritiya Is Good Or Bad

ಬೆಂಗಳೂರು(ಎ.26): ಈ ಬಾರಿ ಶುಕ್ರವಾರ ಅಕ್ಷಯ ತೃತೀಯ ಬಂದಿರುವುದರಿಂದ ಹೆಚ್ಚು ಶುಭಕರ ಎಂಬುದು ಗ್ರಾಹಕರ ನಂಬಿಕೆ. ಆದರೆ ಕೆಲ ಜ್ಯೋತಿಷ್ಯರು ಅಕ್ಷಯ ತೃತೀಯದಂದು ಚಿನ್ನ ಖರೀದಿ ಮಾಡಿದ್ರೆ, ಅಶುಭ ಎಂಬ ಸಂದೇಶ ರವಾನಿಸಿದರು. ಹೀಗಾಗಿ ಗ್ರಾಹಕರಲ್ಲಿ ಚಿನ್ನ ಖರೀದಿ ಮಾಡಬೇಕಾ? ಬೇಡವಾ? ಎಂದು ಗೊಂದಲವುಂಟಾಗಿತ್ತು. ಹೀಗಾಗಿ ಅಕ್ಷಯ ತೃತೀಯದಂದು ಗ್ರಾಹಕರು ಚಿನ್ನಾಭರಣ ಖರೀದಿಸಿದ ನಂತರ ಮಳಿಗೆಗಳಲ್ಲೇ ಗ್ರಾಹಕರ ಆಭರಣಗಳಿಗೆ ಪೂಜೆ ನಡೆಸಲು ರಾಜ್ಯ ಆಭರಣ ಒಕ್ಕೂಟ ನಿರ್ಧರಿಸಿದೆ.

ಅಂದು ಗ್ರಾಹಕರು ಕೊಂಡುಕೊಳ್ಳುವ ಚಿನ್ನಕ್ಕೆ ಮಳಿಗೆಗಳಲ್ಲೆ ಪೂಜೆ ನಡೆಸಲಾಗುತ್ತದೆ. ಗ್ರಾಹಕರಿಗೆ ಮಜ್ಜಿಗೆ, ನೀರಿನ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ತಪ್ಪು ಸಂದೇಶ ರವಾನೆ ಬಗ್ಗೆ ಹಾಗೂ ಅಕ್ಷಯ ತೃತೀಯದ ಮಹತ್ವವನ್ನು ವಿಡಿಯೊ ಮಾಡಿ, ವಾಟ್ಸ್ಯಾಪ್‌, ಫೇಸ್‌'ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದೆ ರಾಜ್ಯ ಆಭರಣ ಒಕ್ಕೂಟ.

ಇನ್ನು 28 ಹಾಗೂ 29ರಂದು ಎರಡೂ ದಿನ ಅಕ್ಷಯ ತೃತಿಯ ಎಂಬ ಸಂಶಯವಿತ್ತು. ಆದರೆ 28ರಂದು ಶುಕ್ರವಾರ ಸೂರ್ಯೊದಯಕ್ಕೆ ಅಕ್ಷಯ ತೃತೀಯ ಇಲ್ಲ. ಬದಲಾಗಿ ಶುಕ್ರವಾರ ಬೆಳಗ್ಗೆ 10.30ಕ್ಕೆ ಅಕ್ಷಯ ತೃತಿಯ ತಿಥಿ ಆರಂಭವಾಗಿ 29ರಂದು ಬೆಳಗ್ಗೆ 6.55ಕ್ಕೆ ಮುಗಿಯುವುದರಿಂದ ಶುಕ್ರವಾರವೇ ಎಲ್ಲಾ ಪೂಜೆಯೂ ನೆರವೇರುತ್ತವೆ.

ಒಟ್ಟಾರೆ ಈ ಬಾರಿ 28ರಂದೇ ಅಕ್ಷಯ ತೃತಿಯ ಆಚರಣೆ ನಡೆಯಲಿದ್ದು, ಗ್ರಾಹಕರು ಎಲ್ಲಾ ಗೊಂದಲಗಳನ್ನು ಕಿವಿಗಾಕಿಕೊಳ್ಳದೆ ಚಿನ್ನ ಖರೀದಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಅಕ್ಷಯ ತೃತೀಯ  ಎಲ್ಲರಿಗೂ ಶುಭ ತರಲಿ.

Follow Us:
Download App:
  • android
  • ios