ಮೈಸೂರು(ಅ.15): ಸಾಕ್ಷಾತ್ ಕೃಷ್ಣ ಪರಮಾತ್ಮ ಹಾಗೂ ಈಶ್ವರನ ದರ್ಶನವನ್ನು ಮಾಡಿಸುತ್ತಾರೆ ಇವರು, ಇಲ್ಲಿ ಒಬ್ಬೊಬ್ಬ ದೇವರು ಒಬ್ಬೊಬ್ಬರ ಮೈಮೇಲೆ ಬರುತ್ತಾರೆ. ದೇವರು ಮೈ ಮೇಲೆ ಬಂದರೆ ಕುಣಿಯುವುದು ಕುಪ್ಪಳಿಸುವುದು ನೋಡಿರುತ್ತೇವೆ, ಆದರೆ ಇಲ್ಲಿ ದೇವಮಾನವರ ಮೇಲೆ ದೇವರು ಬಂದರೆ ನಡೆಯುವುದು ಏನು ಗೊತ್ತಾ? ಇದು ಸುವರ್ಣನ್ಯೂಸ್​ನ ಎಕ್ಸ್​'ಕ್ಲೂಸೀವ್ ಸ್ಟೋರಿ..!

ಅಮಿತಾಬ್ ಮತ್ತು ರಘುರಾಮ್ ಇಬ್ಬರೂ ಮೈಸೂರಿನವರು. ಇವರಲ್ಲಿ ತಲೆಗೆ ಗರಿ ಸಿಕ್ಕಿಸಿಕೊಂಡವನ ಮೇಲೆ ಶ್ರೀಕೃಷ್ಣ, ಹಾವು ಬಿಟ್ಟುಕೊಂಡಿರುವವನ ಮೇಲೆ ಈಶ್ವರ ಬರುತ್ತಾರಂತೆ. ಹಾಗಂತ ಈ ಡಬಲ್ ದೇವರು ಪ್ರತಿದಿನ ಬರುವುದಿಲ್ಲ. ಪ್ರತಿ ಅಮಾವಾಸ್ಯ ಮತ್ತು ಹುಣ್ಣಿಮೆಯ ದಿನಗಳಲ್ಲಿ ಮೈ ಮೇಲೆ ಪ್ರವೇಶ ಮಾಡುತ್ತಾರಂತೆ. ಕಷ್ಟ ಅಂತಾ ಯಾರೇ ಇವರ ಬಳಿ ಬಂದರೂ, ವಿಶೇಷ ದಿನಗಳಲ್ಲಿ ಅದೂ ಮಧ್ಯರಾತ್ರಿಯಲ್ಲಿ ಪರಕಾಯ ಪ್ರವೇಶಿಸಿ ಕ್ಷಣಾರ್ಧದಲ್ಲಿ ಸಮಸ್ಯೆ ಪರಿಹರಿಸುತ್ತಾರಂತೆ..!. ಆದರೆ ಈ ಸಮಸ್ಯೆ ಪರಿಸಲು ಹೋಗಿಯೇ ಇದೀಗ ಒದೆ ತಿಂದಿದ್ದಾರೆ.

ನಾನೇ ಶ್ರೀ ಕೃಷ್ಣ ಪರಮಾತ್ಮ: ನಾನೇ ಈಶ್ವರ ಅಹಂ ಬ್ರಹ್ಮಾಸ್ಮಿ..!

ಓದಿನಲ್ಲಿ ಎಂಬಿಎ ಪಧವೀದರರಾಗಿರುವ ಇವರು, ಇದ್ದಕಿದ್ದಂತೆ ಒಮ್ಮೊಮ್ಮೆ ಶ್ರೀಕೃಷ್ಣ ಪರಮಾತ್ಮ ಮತ್ತು ಈಶ್ವರ ಭಗವಾನ್ ಆಗುವ ಮೂಲಕ ಪರಸ್ತ್ರೀಯರ ದೇಹ ಪ್ರವೇಶಿಸುತ್ತಾರಂತೆ. ಇವರ ಬಳಿ ಕಷ್ಟ ಹೇಳಿಕೊಂಡು ಯಾರೇ ಬಂದರೂ ಅವರ ಸಮಸ್ಯೆಯನ್ನ ಪರಿಹಾರ ಮಾಡುತ್ತಾರಂತೆ. ಸ್ವತಃ ದೈವ ಮಾನವರಂತೆ ತಮ್ಮನ್ನ ತಾವು ಬಿಂಬಿಸಿಕೊಳ್ಳುವ ಈ ಗುರು-ಶಿಷ್ಯರ ಮೈ ಮೇಲೆ ಸದಾ ಆವಧಾನಿಗಳಂತೆ ವೇಷ ಭೂಷಣ ಧರಿಸಿಕೊಂಡಿರುತ್ತಾರೆ.

ಹೆಣ್​ ಮಕ್ಕಳೇ ಬೇಕಂತೆ...!

ಅಷ್ಟಕ್ಕೂ ಇವರು ಈ ರೀತಿ ಜನರಿಗೆ ಹೇಳುವುದರ ಹಿಂದೆ ಒಂದು ಮರ್ಮ ಅಡಗಿದೆ. ಇವರು ಎಲ್ಲರ ಸಮಸ್ಯೆಗಳನ್ನೂ ಪರಿಹರಿಸುತ್ತಾರಂತೆ. ಅದರಲ್ಲೂ ಹೆಣ್ಣು ಮಕ್ಕಳೆಂದರೆ, ಸ್ವಲ್ಪ ಜಾಸ್ತಿಯೇ ಮುತುವರ್ಜಿ ವಹಿಸಿ, ಪರಿಹಾರಕ್ಕೆ ದೊರಕಿಸಿ ಕೊಡುತ್ತಾರಂತೆ. ಫೇಸ್​ ಬುಕ್​ನಲ್ಲಿ ಯಾವುದಾದರೂ ಸುಂದರ ಹುಡುಗಿ ಕಣ್ಣಿಗೆ ಕಂಡರೆ, ಫ್ರೆಂಡ್​ ರಿಕ್ವೆಸ್ಟ್ ಕಳಿಸಿ ಆಕೆಯನ್ನು ಫ್ರೆಂಡ್​ ಮಾಡಿಕೊಳ್ಳುತ್ತಾರೆ. ಆ ಬಳಿಕ ಅವರ ಕಷ್ಟ ಮತ್ತು ಆಸೆಗಳನ್ನ ಪೂರೈಸುವುದಾಗಿ ಹೇಳಿ, ನಾವೇ ಅಹಂ ಬ್ರಹ್ಮಾಸ್ಮಿ ಅಂಥಾ ಹೇಳಿಕೊಂಡು ಕಷ್ಟಗಳ ನಿವಾರಣೆಗೆ ಸಹಕರಿಸುವ ಭರವಸೆ ನೀಡುತ್ತಾರೆ. ಅದೆಷ್ಟೋ ಹೆಣ್ಣು ಮಕ್ಕಳನ್ನು ರಾಜಸೂಯ ಯಾಗದ ನೆಪದಲ್ಲಿ ಈತ ಕರೆದುಕೊಂಡು ಹೋಗುವುದು ಸ್ಮಶಾನಕ್ಕೆ..!

ಈತನಿಗೆ ದೇವರು ಎಲ್ಲೆಂದರಲ್ಲಿ ಮೈ ಮೇಲೆ ಬರುವುದಿಲ್ಲವಂತೆ. ಸ್ಮಶಾನದ ಘೋರಿಗಳ ಮಧ್ಯ ಕೂತಾಗ ಮಾತ್ರ ದೇವರು ಇವರಿಗೆ ಆವರಿಸುತ್ತಾರಂತೆ. ಹೀಗೆ ಮೈಸೂರಿನ ಹಳ್ಳಿಯೊಂದರ ಜಮೀನಿನಲ್ಲಿ ಹೀಗೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದು ರಾಜಸೂಯ ಯಾಗ ಮಾಡುತ್ತಿದ್ದಾಗ ಊರಿನವರು ಈ ಶ್ರೀಕೃಷ್ಣ ಪರಮಾತ್ಮ ಮತ್ತು ಈಶ್ವರ ಸಂಭವೀಭೂತರಿಗೆ ಸಾರ್ವಜನಿಕರು ಸರಿಯಾಗಿ ಥಳಿಸಿದ್ದಾರೆ..!

ಮಾತೆತ್ತಿದರೆ, ಎಸ್ಪಿಗೆ ಕರೆ ಮಾಡಿ ಅನ್ನುವ ಈ ಭೂಪರ ಹಿಂದೆ ಖಾಕಿಯ ರಕ್ಷಣೆ ಬೆಂಗಾವಲಾಗಿ ನಿಂತಿದೆಯಾ..? ಅನ್ನುವ ಪ್ರಶ್ನೆ ಕೂಡಾ ಕಾಡ್ತಿದೆ. ಈ ನಕಲಿ ದೈವಾಂಶ ಸಂಭೂತರ, ಕೃಪಾಪೋಷಿತಕ್ಕೆ ಅದೆಷ್ಟೋ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ. ಆದರೆ, ಅವಱರು ಈ ಭೂಪರ ವಿರುದ್ದ ತಿರುಗಿ ಬೀಳೋಕೆ ಮುಂದಾಗುತ್ತಿಲ್ಲ. ಮಾನ ಮಾರ್ಯಾದೆಯ ಅಂಜಿಕೆಯೇ ಇದಕ್ಕೆ ಕಾರಣವಾಗಿದ್ದು, ಇಂಥವರ ಆಟಕ್ಕೆ ಸಾರ್ವಜನಿಕರೇ ಬ್ರೇಕ್ ಹಾಕಿದ್ದಾರೆ...!!!