ನಮ್ಮ ಸೈನಿಕರು ಹಸಿವು ನಿದ್ದೆ ಇಲ್ಲದೇ ದೇಶದ ಗಡಿಯನ್ನು ಶತ್ರುಗಳಿಂದ ರಕ್ಷಿಸುತ್ತಾರೆ, ಶತ್ರುಗಳ ಗುಂಡೇಟಿಗೆ ಎದೆಯೊಡ್ಡುತ್ತಾರೆ. ಇನ್ನು ಸ್ವದೇಶದಲ್ಲೇ ಇರುವ ನಕ್ಸಲೀಯರನ್ನೂ ಇವರು ಎದುರಿಸುತ್ತಾರೆ. ಆದರೆ ಇವರಿಗೆ ಗೌರವ ನೀಡುವವರ ಸಂಖ್ಯೆ ಮಾತ್ರ ಕಡಿಮೆ ಇಲ್ಲ, ಹೀಗೆ ವಿಭಿನ್ನವಾಗಿ ಗೌರವ ನೀಡುತ್ತಿರುವವರಲ್ಲಿ ಛತ್ತೀಸ್'ಗಡ್'ನ ರಾಜಧಾನಿ ರಾಯ್ಪುರದ ನಿವಾಸಿ ಮನೋಜ್ ದೂಬೆ ಕೂಡಾ ಒಬ್ಬರು.

ಜಮ್ಮು ಕಾಶ್ಮೀರ(ಜೂ.17): ನಮ್ಮ ಸೈನಿಕರು ಹಸಿವು ನಿದ್ದೆ ಇಲ್ಲದೇ ದೇಶದ ಗಡಿಯನ್ನು ಶತ್ರುಗಳಿಂದ ರಕ್ಷಿಸುತ್ತಾರೆ, ಶತ್ರುಗಳ ಗುಂಡೇಟಿಗೆ ಎದೆಯೊಡ್ಡುತ್ತಾರೆ. ಇನ್ನು ಸ್ವದೇಶದಲ್ಲೇ ಇರುವ ನಕ್ಸಲೀಯರನ್ನೂ ಇವರು ಎದುರಿಸುತ್ತಾರೆ. ಆದರೆ ಇವರಿಗೆ ಗೌರವ ನೀಡುವವರ ಸಂಖ್ಯೆ ಮಾತ್ರ ಕಡಿಮೆ ಇಲ್ಲ, ಹೀಗೆ ವಿಭಿನ್ನವಾಗಿ ಗೌರವ ನೀಡುತ್ತಿರುವವರಲ್ಲಿ ಛತ್ತೀಸ್'ಗಡ್'ನ ರಾಜಧಾನಿ ರಾಯ್ಪುರದ ನಿವಾಸಿ ಮನೋಜ್ ದೂಬೆ ಕೂಡಾ ಒಬ್ಬರು.

ಈ ದೂಬೆ ಕೂಡಾ ಭಾರತೀಯ ಸೇನೆಗೆ ಸೇರುವ ಕನಸು ಕಂಡಿದ್ದರು, ಆದರೆ ಅವರ ಕನಸು ಮಾತ್ರ ಈಡೇರಲೇ ಇಲ್ಲ. ಆದರೆ ಅವರು ತಮ್ಮ ಈ ಕನಸನ್ನು ವಿಭಿನ್ನವಾಗಿ ಸಾಕಾರಗೊಳಿಸಿದರು. ರಾಯ್ಪುರದಲ್ಲಿ ರೆಸ್ಟೋರೆಂಟ್ ಹೊಂದಿದ್ದು, ಈ ರೆಸ್ಟೋರೆಂಟ್'ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಊಟದಲ್ಲಿ ವೆಚ್ಚದಲ್ಲಿ ರಿಯಾಯಿತಿ ನೀಡುತ್ತಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ದೂಬೆ 'ನಾನು ಹಾಗೂ ನನ್ನ ಕಿರಿಯ ಸಹೋದರ ಭಾರತೀಯ ಸೇನೆಗೆ ಸೇರಿ ದೇಶದ ಸೇವೆ ಮಾಡ ಬಯಸಿದ್ದೆವು. ಆದರೆ ನಮ್ಮ ಕನಸು ಸಾಕಾರವಾಗಲಿಲ್ಲ. ಇಂದು ನಾವು ರೆಸ್ಟೋರೆಂಟ್ ಮೂಲಕ ಸೈನಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಭೋಜನದ ವ್ಯವಸ್ಥೆ ಮಾಡುವ ಮೂಲಕ ನಮ್ಮ ಕನಸು ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ' ಎಂದಿದ್ದಾರೆ.

ನೀಲಕಂಠ ಹಸರಿನ ಇವರ ರೆಸ್ಟೋರೆಂಟ್ ಎದುರುಗಡೆ ತ್ರಿವರ್ಣ ಬಣ್ಣದಲ್ಲಿ(ಕೇಸರಿ, ಬಿಳಿ, ಹಸಿರು) ತಯಾರು ಮಾಡಿರುವ ಬ್ಯಾನರ್ ಒಂದರಲ್ಲಿ 'ರಾಷ್ಟ್ರಹಿತ ಸರ್ವ ಪ್ರಥಮ' ಎಂದು ಬರೆದಿದ್ದಾರೆ. ಆದರೆ ಗುರುತಿನ ಚೀಟಿಯೊಂದಿಗೆ ಬರುವ ಯೋಧರಿಗೆ ಊಟದಲ್ಲಿ 25% ರಿಯಾಯಿತಿಯಾದರೆ, ಸಮವಸ್ತ್ರ ಧರಿಸಿ ಗುರುತಿನ ಚೀಟಿಯೊಂದಿಗೆ ಆಗಮಿಸುವ ಯೋಧರಿಗೆ ಊಟದಲ್ಲಿ ಒಟ್ಟು 50% ರಿಯಾಯಿತಿ ನೀಡುತ್ತಾರೆ. ಇನ್ನು ದೇಶಕ್ಕಾಗಿ ಪ್ರಾಣತೆತ್ತ ಯೋಧರ ಕುಟುಂಬಸ್ಥರು ಇಲ್ಲಿ ಊಟಕ್ಕೆ ಆಗಮಿಸಿದರೆ ಅವರಿಂದ ಒಂದು ಪೈಸೆಯೂ ತೆಗೆದುಕೊಳ್ಳುವುದಿಲ್ಲ.

ಈ ಕುರಿತಾಘಿ ಮಾತನಾಡಿದ ದೂಬೆ 'ನಮ್ಮ ಇಲಾಖೆಯಲ್ಲಿ CRPF ಹಾಗೂ BSF ಯೋಧರು ಹೆಚ್ಚಾಗಿ ನಡೆದಾಡುತ್ತಿರುತ್ತಾರೆ. ಹೀಗಾಗಿ ಅವರಿಗೆ ಉಚಿತ ಊಟದ ವ್ಯವಸ್ಥೆ ಮಾಡಬೇಕೆಂಬ ಇಚ್ಛೆ ಇತ್ತು. ಆದರೆ ನಮ್ಮಿಂದ ಅವರ ಸ್ವಾಭಿಮಾನಕ್ಕೂ ದಕ್ಕೆಯುಂಟಾಗಬಾರದಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ನಾವು ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮಾಡಿದ್ದೇವೆ' ಎಂದಿದ್ದಾರೆ