ಈ ಬಾರಿಯ 71ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಜ್ಯದಲ್ಲಿನ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯವಿಲ್ಲ! ಮೂಲಗಳ ಪ್ರಕಾರ ಜೈಲು ಹಕ್ಕಿಗಳ ಬಿಡುಗಡೆಗೆ ತಡೆಯಾಗಿರುವುದು ಇತ್ತೀಚಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲ್ ಡೀಲ್ ಪ್ರಕರಣ.
ಬೆಂಗಳೂರು(ಆ.15): ಈ ಬಾರಿಯ 71ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಜ್ಯದಲ್ಲಿನ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯವಿಲ್ಲ!
ಮೂಲಗಳ ಪ್ರಕಾರ ಜೈಲು ಹಕ್ಕಿಗಳ ಬಿಡುಗಡೆಗೆ ತಡೆಯಾಗಿರುವುದು ಇತ್ತೀಚಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಜೈಲ್ ಡೀಲ್ ಪ್ರಕರಣ.
ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ತಂಡ ಜೈಲು ಅಕ್ರಮದ ಪ್ರಕರಣದ ತನಿಖೆ ನಡೆಸುತ್ತಿರುವುದು, ಮತ್ತೊಂದೆಡೆ ಕೈದಿಗಳ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಜೈಲು ಅಧಿಕಾರಿಗಳಿಗೆ ನೋಟಿಸ್ ನೀಡಿ ತನಿಖೆಗೆ ಆದೇಶಿಸಿರುವುದು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಹೀಗಾಗಿ ಕಠಿಣ ಶಿಕ್ಷೆ ಅನುಭವಿಸಿ ಬಿಡುಗಡೆಗೆ ಕಾಯುತ್ತಿದ್ದ ಜೈಲು ಹಕ್ಕಿಗಳು ಇನ್ನಷ್ಟು ದಿನ ಜೈಲಿನಲ್ಲಿ ಇರುವಂತಾಗಿದೆ.
ಕಾರಾಗೃಹ ಇಲಾಖೆಯ ಮೂಲಗಳ ಪ್ರಕಾರ, 93 ಸಜಾ ಕೈದಿಗಳ ಪಟ್ಟಿಯ ಹೆಸರನ್ನು ಬಿಡುಗಡೆಗೆ ಶಿಾರಸು ಮಾಡಲಾಗಿದೆ. ಆದರೆ ಸರ್ಕಾರದಿಂದ ಇದುವರೆಗೂ ಯಾವುದೇ ನಿರ್ದೇಶನ ಇಲಾಖೆಗೆ ಬಂದಿಲ್ಲ. ಕಾರಾಗೃಹ ಇಲಾಖೆಯಿಂದ ಕೈದಿಗಳ ಬಿಡುಗಡೆ ಶಿಾರಸು ಪಟ್ಟಿಯನ್ನು ಸರ್ಕಾರ ಸ್ವೀಕರಿಸಿದ್ದು, ಈ ಬಗ್ಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಅಲ್ಲದೆ, ಇದುವರೆಗೆ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ಪಟ್ಟಿ ತಮ್ಮ ಬಳಿ ಬಂದಿಲ್ಲ ಎಂದು ರಾಜ‘ವನದ ಮೂಲಗಳು ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿವೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 2016ರಲ್ಲಿ 284 ಕೈದಿಗಳು, 2015ರಲ್ಲಿ ರಾಜ್ಯ ಸರ್ಕಾರ 252, ಕಳೆದ ಗಣಜ್ಯೋತ್ಸವದ ವೇಳೆ 144 ಸಜಾ ಕೈದಿಗಳ ಬಿಡುಗಡೆ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ 2016ರಲ್ಲಿ ರಾಜ್ಯ ಸರ್ಕಾರ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ನೂತನ ನಿಯಮವನ್ನು ಜಾರಿಗೆ ತಂದಿತ್ತು.433 -ಎ ಪ್ರಕಾರ ಜೀವವಾಧಿ ಶಿಕ್ಷೆಗೆ ಒಳಪಟ್ಟ ಆರೋಪಿ 14 ವರ್ಷ ಕಠಿಣ ಶಿಕ್ಷೆಯನ್ನು ಹಾಗೂ ಮಹಿಳಾ ಆರೋಪಿ 10 ವರ್ಷ ಕಠಿಣ ಶಿಕ್ಷೆ ಕಡ್ಡಾಯವಾಗಿ ಪೂರೈಸಬೇಕೆಂದು ಹೇಳಿತ್ತು. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಶಿಕ್ಷೆಗೆ ಗುರಿಯಾಗಿರುವವರನ್ನು ಶಿಕ್ಷೆ ಅವಧಿ ಪೂರ್ಣಗೊಳ್ಳುವ ತನಕ ಬಿಡುಗಡೆ ಮಾಡುವಂತಿಲ್ಲ ಎಂದು ತಿಳಿಸಿತ್ತು.
ಈ ಬಗ್ಗೆ ‘ಕನ್ನಡಪ್ರಭ’ ರಾಜ್ಯ ಬಂಧೀಖಾನೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಎಲ್ಲವೂ ಸರ್ಕಾರದ ತೀರ್ಮಾನಂದಂತೆ ನಡೆಯಲಿದೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಒಟ್ಟಾರೆ ಜೈಲು ಅಧಿಕಾರಿಗಳ ವಿವಾದದಿಂದ ಕಠಿಣ ಶಿಕ್ಷೆ ಅನಭವಿಸಿ ಬಿಡುಗಡೆಗೆ ಕಾಯುತ್ತಿದ್ದ ಸಜಾ ಕೈದಿಗಳು ನಿರಾಶೆಗೊಂಡಿದ್ದಾರೆ.
