Asianet Suvarna News Asianet Suvarna News

ದೇವರಿಗೂ ವಿಮೆ.. ಈ ಶ್ರೀಮಂತ ಗಣೇಶನ ಶಕ್ತಿಯೇ ಹಾಗೆ..

ದೇವರಿಗೂ ಇಲ್ಲಿ ವಿಮೆ ಮಾಡಿಸಲಾಗುತ್ತದೆ/ ವಿಮೆ ಮೊತ್ತ ಬರೋಬ್ಬರಿ 266 ಕೋಟಿ ರೂ./  ಮುಂಬೈನ ಈ ಗಣೇಶನ ಶಕ್ತಿಯೇ ಅಂಥಹುದು/ ಬರುವ ಭಕ್ತರಿಗೂ ವಿಮೆ ಮಾಡಲಾಗುತ್ತದೆ/

This Mumbai richest Ganpati insured for Rs 266.65 crore
Author
Bengaluru, First Published Aug 28, 2019, 9:51 PM IST
  • Facebook
  • Twitter
  • Whatsapp

ಮುಂಬೈ[ಆ. 28] ಮುಂಬೈನ ಕಿಂಗ್ ಸರ್ಕಲ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ [ಜಿಎಸ್‌ಬಿ] ಗಣಪತಿಯನ್ನು ಅತಿ ಶ್ರೀಮಂತ ಗಣಪತಿ ಎಂದು ಕರೆಯಬಹುದಾಗಿದೆ.

ಈ ಸಾರಿ ಗಣೇಶನಿಗೆ ಬರೋಬ್ಬರಿ 266.65 ಕೋಟಿ ರೂ. ವಿಮೆ ಮಾಡಿಸಲಾಗಿದೆ. 2017 ಮತ್ತು 2018ರಲ್ಲಿ ಕ್ರಮವಾಗಿ 264.25 ಮತ್ತು 265 ಕೋಟಿ ರೂ. ವಿಮೆ ಮಾಡಿಸಲಾಗಿತ್ತು.

ಆಗಮಿಸುವ ಪ್ರತಿಯೊಬ್ಬ ಭಕ್ತ ಸಹ 20 ಕೋಟಿಯ ವಿಮೆಗೆ ಒಳಪಡುತ್ತಾರೆ. ಪೆಂಡಾಲ್, ಮೂರ್ತಿ, ಸಲಕರೆಣೆಗಳು, ಕೆಲಸಗಾರರು ಸಹ ಿಇನ್ಸೂರೆನ್ಸ್ ಗೆ ಒಳಪಡುತ್ತಾರೆ.

ಹಣ್ಣುಗಳು, ತರಕಾರಿ, ಕಿರಾಣಿ ಸಾಮಗ್ರಿ ಸೇರಿದಂತೆ 2200 ಕೆಲಸಗಾರರಿಗೂ ವಿಮಾ ಸೌಲಭ್ಯವಿದೆ. ಸ್ವಯಂಸೇವಕರಿಗೆ ಮೀಸಲಿರುವ ವಿಮೆಯ ಮೊತ್ತ 224 ಕೋಟಿ ರೂ.  ಇದೇ ಅತಿ ದೊಡ್ಡ ಪಾಲು.

5 ದಿನ ಕಾಲ ಸಮಿತಿ ಗಣೇಶ ಹಬ್ಬ ಆಚರಿಸುತ್ತದೆ. ದಿನವೊಂದಕ್ಕೆ 53.33 ಕೋಟಿ ವಿಮಾ ಮೊತ್ತದ ನಿಗದಿ ಮಾಡಿಕೊಳ್ಳಲಾಗಿದೆ. ಬೆಂಕಿ ಅವಘಡ, ಕಳ್ಳತನ, ದಾಳಿ, ಅಪಘಾತ, ಡ್ಯಾಮೇಜ್ ಗಳನ್ನು ಇದು ಒಳಗೊಂಡಿರುತ್ತದೆ.

ಸಿಸಿಟಿವಿ ಕ್ಯಾಮರಾ, ಫರ್ನಿಚರ್ ಗಳು, ಕಂಪ್ಯೂಟರ್ ಗಳಿಗೂ ವಿಮಾ ಸುರಕ್ಷತೆ ಇದ್ದು ಅಪಘಾತ, ಕೋಮು ಸಂಘರ್ಷದಿಂದ ಹಾನಿಯಾದರೆ ಹಣ ದೊರೆಯಲಿದೆ. ಪಾರದರ್ಶಕವಾಗಿಯೇ ಎಲ್ಲ ವ್ಯವಸ್ಥೆಗಳನ್ನು, ಹಣಕಾಸು ವಿಚಾರಗಳನ್ನು ಮುಂದೆ ಇಡಲಾಗುತ್ತದೆ ಎಂದು ಸಮಿತಿಯ ಟ್ರಸ್ಟಿ ಆರ್. ಜಿ. ಭಟ್ ಮಾಹಿತಿ ನೀಡುತ್ತಾರೆ.

Follow Us:
Download App:
  • android
  • ios