ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೇವಲ ನಾಲ್ಕು ಜನರನ್ನು ಸೇರಿಸಿ ಸಪ್ತ ಸ್ವರ ಸಮೂಹ ಅನ್ನೋ ವಾಟ್ಸ್ಆಪ್ ಗ್ರೂಪ್ ಕ್ರಿಯೆಟ್ ಮಾಡಿದರು. ಇದೀಗ ಅದು 250 ಕ್ಕೆ ತಲುಪಿದೆ.
ಕೊಪ್ಪಳ(ಅ.16): ನೀವು ಸಾಮಾನ್ಯವಾಗಿ ವಿವಾಹ ವಾರ್ಷಿಕೋತ್ಸವ ನೋಡಿದ್ದೀರಿ. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳನ್ನು ನೋಡಿದ್ದೀರಿ. ಆದರೆ ವಾಟ್ಸ್ ಗ್ರೂಪ್ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಿದ್ದೀರಾ? ಅರೇ ಇದೇನಪ್ಪ ವಾಟ್ಸ್ಅಪ್ ಗ್ರೂಪ್ನ ವಾರ್ಷಿಕೋತ್ಸವ ಕಾರ್ಯಕ್ರಮ ಅಂತೀರಾ? ಅಷ್ಟಕ್ಕೂ ಇದು ನಡೆದದ್ದು ಎಲ್ಲಿ? ಅಂತೀರಾ? ಇದು ವಾಟ್ಸ್'ಅಪ್ ವಿಶೇಷ .
ಕೊಪ್ಪಳದ ಗರೀಶ್ ಕುಲಕರ್ಣಿ ಅನ್ನೋರು, ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೇವಲ ನಾಲ್ಕು ಜನರನ್ನು ಸೇರಿಸಿ ಸಪ್ತ ಸ್ವರ ಸಮೂಹ ಅನ್ನೋ ವಾಟ್ಸ್ಆಪ್ ಗ್ರೂಪ್ ಕ್ರಿಯೆಟ್ ಮಾಡಿದರು. ಇದೀಗ ಅದು 250 ಕ್ಕೆ ತಲುಪಿದೆ. ಅಂದಿನಿಂದ ಇಂದಿನವರೆಗೂ ಈ ಗ್ರೂಪ್ ನಲ್ಲಿ ದಾಸ ಸಾಹಿತ್ಯ ಸೇರಿದಂತೆ ವಿವಿಧ ಸಂಗೀತ, ಸಾಂಸ್ಕೃತಿಕ ವಿಷಯಗಳನ್ನು ಮಾತ್ರ ಈ ಗ್ರೂಪ್ ನಲ್ಲಿ ಚರ್ಚೆ ಮಾಡಲಾಗುತ್ತಿದೆ.ಹೀಗಾಗಿ ಸದಸ್ಯರೆಲ್ಲರೂ ಸೇರಿಕೊಂಡು ಸಪ್ತಸ್ವರ ಸಮೂಹದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಿದರು. ಇದಕ್ಕೆ ಕೊಪ್ಪಳದ ಶ್ರೀರಾಘವೇಂದ್ರ ಮಠ ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಯ್ತು. ಕೊಪ್ಪಳದ ಸಪ್ತಸ್ವರ ಸಮೂಹ ವಾಟ್ಸ್ಅಪ್ ಗ್ರೂಪ್ ನವರು, ಕೇವಲ ಸಂಗೀತದ ವಿಷಯಕ್ಕೆ ಗ್ರೂಪ್ ಮಾಡಿಕೊಂಡು, ಅದರ ವಾರ್ಷಿಕೋತ್ಸವ ಮಾಡಿದ್ದು ನಿಜಕ್ಕೂ ಪ್ರಶಂಸನಿಯ.
ವರದಿ: ದೊಡ್ಡೇಶ್ ಯಲಿಗಾರ್, ಸುವರ್ಣ ನ್ಯೂಸ್
