Asianet Suvarna News Asianet Suvarna News

ಮೋದಿ ಸರಕಾರದ ಬಗ್ಗೆ ಜನರಿಗಿಲ್ಲ ವಿಶ್ವಾಸ: ಆರ್‌ಬಿಐ ಸೀಕ್ರೆಟ್ ಸರ್ವೆ

ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿದೆ. ಜಿಎಸ್‌ಟಿ ಹಾಗೂ ನೋಟ್ ಬ್ಯಾನ್‌ನಂಥ ಕ್ರಾಂತಿಕಾರಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಲು ಕೈ ಹಾಕಿದ ಮೋದಿ ಕ್ರಮಕ್ಕೆ ಜನರಿಂದ ವಿಪರೀತ ಶ್ಲಾಘನೆ ವ್ಯಕ್ತವಾಗಿದ್ದು  ಸುಳ್ಳಲ್ಲ. ಆದರೆ, ಅದೇ ಜನರು ಇಂದು ಮೋದಿ ಆಡಳಿತದ ಬಗ್ಗೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿರುವುದು ಆರ್‌ಬಿಐ ನಡೆಸಿದ ರಹಸ್ಯ ಸಮಿಕ್ಷೆಯಿಂದ ಬಹಿರಂಗಗೊಂಡಿದೆ.

This is what RBI Consumer Confidence survey says about 4 years of Narendra Modi government

ಬೆಂಗಳೂರು: ದೇಶದ ಆರ್ಥಿಕ ಪರಿಸ್ಥಿತಿ ಕುರಿತಂತೆ ಜನರ ಮೂಡ್ ತಿಳಿಯೋದಕ್ಕೆ ಆರ್‌ಬಿಐ ನಡೆಸಿದ್ದ ಸೀಕ್ರೆಟ್ ಸರ್ವೆ ಬಹಿರಂಗವಾಗಿದೆ. ಸರ್ವೆ ಪ್ರಕಾರ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತಿಲ್ಲವೆಂದು ಜನರು ನಿರಾಶೆಗೊಳಗಾಗಿದ್ದಾರೆ.  

ದೇಶದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಮುಂಬೈ, ನವದೆಹಲಿಯಲ್ಲಿ ವಿವಿಧ ವರ್ಗಗಳ ಜನರನ್ನು ಆರ್‌ಬಿಐ ಈ ಸಮಿಕ್ಷೆಗೆ ಬಳಸಿಕೊಂಡಿದೆ. ಸುಮಾರು 5 ಸಾವಿರದ 77 ಜನರನ್ನು ಸಮಿಕ್ಷೆಗೆ ಆರ್‌ಬಿಐ ಬಳಸಿಕೊಂಡಿದೆ.

ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿ, ಸರ್ಕಾರದಿಂದ ಉದ್ಯೋಗ ಸೃಷ್ಟಿ ಕ್ರಮಗಳು, ದಿನ ಬಳಕೆ ವಸ್ತುಗಳು ಸೇರಿ ಬೆಲೆ ಏರಿಕೆ ಹಾಗೂ ಜನರ ಆದಾಯ ಹಾಗೂ ವೆಚ್ಚದ ಕುರಿತು ಅಭಿಪ್ರಾಯ ತಿಳಿಯಲು ನಡೆಸಿದ್ದ ರಹಸ್ಯ ಸಮಿಕ್ಷೆ ಇದು.

ಸಮೀಕ್ಷೆ ಒಟ್ಟಾರೆ ಅಭಿಪ್ರಾಯ....

- ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ ಎಂತಿದ್ದ ಜನರ ನಿರೀಕ್ಷೆ ದಿನೇದಿನೇ ಕ್ಷೀಣಿಸುತ್ತಿದೆ.

- ನೋಟ್ ಬ್ಯಾನ್ ಸೇರಿ ಹಲವು ಕ್ರಮ ಕೈಗೊಂಡ ಬಳಿಕ 100ರಲ್ಲಿ 45 ಜನರು ಆರ್ಥಿಕ ಸ್ಥಿತಿ ಸುಧಾರಣೆ ನಿರೀಕ್ಷಿಸಿದ್ದರು. ಆದರೆ ಈಗ ಕೇಳಲು ಹೋದರೆ 100ರಲ್ಲಿ ಕೇವಲ 30 ಜನಕ್ಕೆ ಮಾತ್ರ ಆರ್ಥಿತಿ ಸ್ಥಿತಿ ಸುಧಾರಿಸ್ತಿದೆ ಅಂತಾ ಹೇಳಿದ್ದಾರೆ.

- ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ ಅಂತಾ ಹೇಳುವವರ ಸ್ಥಿತಿ ದಿನೆ ದಿನೇ ಕಡಿಮೆಯಾಗುತ್ತಿದೆ. 

ಇನ್ನು ದೇಶದಲ್ಲಿ ಉದ್ಯೋಗ ಸೃಷ್ಟಿ ನಿರೀಕ್ಷೆ ಪ್ರಮಾಣದಲ್ಲಿ ಆಗ್ತ ಇದೆಯಾ ಅಂತಾ ಕೇಳಿದರೂ ಇಲ್ಲ ಎಂಬುವುದೇ ಉತ್ತರ ಸಿಕ್ಕಿದೆ.  ಉದ್ಯೋಗ ಸೃಷ್ಟಿ ಆಗಬಹುದು ಅಂತಾ ಈ ಹಿಂದೆ 100ಕ್ಕೆ 40ಕ್ಕೂ ಹೆಚ್ಚು ಜನ ನಿರೀಕ್ಷೆ ಇಟ್ಟುಕೊಂಡಿದ್ದರು . ಆದರೆ ಈಗ ಕೇಳಲು ಹೋದರೆ 100ಕ್ಕೆ ಕೇವಲ 30 ಮಂದಿ ಮಾತ್ರ ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

- ಬೆಲೆ ಏರಿಕೆ ಕುರಿತು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ನೋಟ್ ಬ್ಯಾನ್, ಜಿಎಸ್ ಟಿ ಸೇರಿ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳು ಕೈಗೊಂಡಿದ್ದರೂ ಪ್ರಯೋಜನವಾಗಿಲ್ಲ. ಬೆಲೆ ಏರಿಕೆ ನಿಯಂತ್ರಣವಾಗ್ತಿಲ್ಲವೆಂದು 100ಕ್ಕೆ 73 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೀದ ಅದೇ ಅಭಿಪ್ರಾಯ ವ್ಯಕ್ತಪಡಿಸುತ್ತಿರುವವರ ಸಂಖ್ಯೆ 100ಕ್ಕೆ 88 ಮಂದಿಯಾಗಿದ್ದಾರೆ.

- ನೋಟ್ ಬ್ಯಾನ್ ಸೇರಿ ಆರ್ಥಿಕ ಸುಧಾರಣಾ ಕ್ರಮಗಳ ನಂತರ ಖರ್ಚು ಹೆಚ್ಚಾಗುತ್ತಾ ಅಂತಾ ಕೇಳಿದಾಗ 100ಕ್ಕೆ 73 ಜನರು ಹೌದು ಖರ್ಚು ಹೆಚ್ಚಾಗುತ್ತೆ ಅಂತಾ ಹೇಳಿದ್ರು.
ಆದರೆ ಈಗ ಖರ್ಚಿನ ಪ್ರಮಾಣ ಕೇಳಿದರೆ 100ಕ್ಕೆ 83 ಜನರು ಹೇಳ್ತಿದ್ದಾರೆ, ಇಷ್ಟೆಲ್ಲಾ ಆರ್ಥಿಕ ಕ್ರಮ ಕೈಗೊಳ್ಳುತ್ತಿದ್ದರೂ ಖರ್ಚು ಮಾಡುವುದು ಹೆಚ್ಚಾಗಿದೆ ಅಂತಾ ಅಭಿಪ್ರಾಯ ತಿಳಿಸಿದ್ದಾರೆ. ದೈನಂದಿನ ಬಳಕೆ ವಸ್ತುಗಳ ಖರ್ಚೂ ಹೆಚ್ಚಾಗಿದೆ, ಎಂದು ಅಭಿಪ್ರಾಯಪಟ್ಟಿದ್ದಾರೆ.

- ನಿಮ್ಮ ಆದಾಯ ಹೆಚ್ಚಾಗುತ್ತಾ ಅಂತಾ ಪ್ರಶ್ನೆ ಕೇಳಿದರೆ ಈ ಹಿಂದೆ 100ಕ್ಕೆ 27 ಜನರು ಆದಾಯ ಹೆಚ್ಚಾಗಬಹುದೆಂದು ಹೇಳಿದ್ದರು. ಆದರೆ ಈಗಲೂ ಸಹ ತಮ್ಮ ಆದಾಯ ಹೆಚ್ಚಬಹುದೆಂದು 100ಕ್ಕೆ ಅದೇ 27ರಷ್ಟು ಮಂದಿ ಮಾತ್ರ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಇದರರ್ಥ ತಮ್ಮ ಆದಾಯ ಹೆಚ್ಚಾಗಬಹುದು ಅಂತಾ ಬಹುತೇಕ ಜನರಿಗೆ ನಿರೀಕ್ಷೆಯೂ ಇಲ್ಲ.

ಒಟ್ಟಾರೆ ದೇಶದ ಆರ್ಥಿಕ ಪರಿಸ್ಥಿತಿ, ಬೆಲೆ ಏರಿಕೆಗೆ ನಿಯಂತ್ರಣ ಮಾಡದಿರುವುದು, ಖರ್ಚು ದುಬಾರಿಯಾಗಿ, ಆದಾಯ ಹೆಚ್ಚಾಗದಿರುವುದಕ್ಕೆ ಜನ ಸಾಮಾನ್ಯ ಬೇಸರ ವ್ಯಕ್ತಪಡಿಸುತ್ತಿದ್ದಾರೆಂದು RBI ರಹಸ್ಯ ಸಮಿಕ್ಷೆ ಬಹಿರಂಗಗೊಳಿಸಿದೆ.
 

Follow Us:
Download App:
  • android
  • ios