ಒಮ್ಮೆ ಪೊಲೀಸ್ ಕಮಿಷನರ್ ಪುತ್ರನೆಂದು ದರ್ಪ ತೋರಿದ್ದ ಯುವಕನಿಗೆ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರ್ರಿಕರ್ ಶಾಕ್ ನೀಡಿದ್ದರು. ಅದೇನದು..?
ಪಣಜಿ: ಕೆಲ ವರ್ಷಗಳ ಹಿಂದೆ ಗೋವಾದ ರಸ್ತೆಯೊಂದರಲ್ಲಿ ಯುವಕನೋರ್ವ ಚಲಾಯಿಸುತ್ತಿದ್ದ ದುಬಾರಿ ಬೆಲೆಯ ಕಾರೊಂದು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆಯುತ್ತದೆ.
ಈ ಸಂದರ್ಭದಲ್ಲಿ ಸಿಟ್ಟಿನಲ್ಲಿ ಕಾರು ಇಳಿದುಬಂದ ಯುವಕ, ಸ್ಕೂಟರ್ ಸವಾರನನ್ನು ತಾನು ಪೊಲೀಸ್ ಕಮಿಷನರ್ ಪುತ್ರ ಎಂಬ ಗತ್ತಿನಲ್ಲಿ ನಿಂದಿಸಲು ಮುಂದಾಗುತ್ತಾನೆ.
ತಾನು ಪೊಲೀಸ್ ಕಮೀಷನರ್ ಮಗ ಎಂದು ಗೊತ್ತಾ ಎಂದು ಆಕ್ರೋಶಭರಿತವಾಗಿ ಯುವಕ ಹೇಳುತ್ತಾನೆ. ಈ ವೇಳೆ ಯುವಕನತ್ತ ನಸು ನಗೆ ಬೀರಿ ತಾನು ಗೋವಾದ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಅಲ್ಲಿಗೆ ಕಮೀಷನರ್ ಪುತ್ರನ ಕೊಬ್ಬು ಧಸಕ್ಕನೇ ಇಳಿದುಹೋಗಿರುತ್ತದೆ.
