ಕಾಮುಕ ಪೊಲೀಸ್ ಅಧಿಕಾರಿಯ ಹಾವಳಿ: ಠಾಣೆಗೆ ಹೋದ್ರೆ ನೀನ್ ಸಖತ್ ಸೆಕ್ಸಿಯಾಗಿದ್ಯಾ ಅಂತಾನೆ ಪೊಲೀಸಪ್ಪ
ಕಷ್ಟ ಅಂತ ನಾವು ಪೊಲೀಸ್ರ ಬಳಿ ಹೊಗೋದು ಕಾಮನ್,ಆದ್ರೆ ಪೊಲೀಸರೇ ಕಷ್ಟ ಕೊಟ್ರೆ ಯಾರ ಹತ್ರ ಹೊಗಬೇಕು? ಕಷ್ಟ ಅಂತ ಮಹಿಳೆಯೊಬ್ರು ಪೊಲೀಸಪ್ಪನ ಹತ್ರ ಹೊದ್ರೆ ಆ ಪೊಲೀಸಪ್ಪ ತನ್ನ ಪೋಲಿ ಬುದ್ಧಿ ತೋರಿಸಿ ನೀಚನಂತೆ ವರ್ತಿಸಿದ್ದಾನೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಪೊಲೀಸ್ ಸ್ಟೇಷನ್ ನ ಪಿಎಸ್ಐ ಪ್ರಕಾಶ್ ರಾಠೋಡನೇ ಆ ಪೋಲಿ, ಪೊಲೀಸಪ್ಪ.
ಠಾಣೆಗೆ ದೂರು ನೀಡೋಕೆ ಬರೋ ಹೆಣ್ಣುಮಕ್ಕಳ ಫೋನ್ ನಂಬರ್ ಈ ಕಾಮುಕ ಪಿಏಸ್ಐ ನೀನ್ ನೋಡೋಕೆ ಸೂಪರ್ ಫಿಗರ್ರು ನೀನ್ ಮೇಲೆ ನನಗೆ ಕ್ರಶ್ ಆಗಿದೆ ಅಂತ ಮಿಡ್ ನೈಟ್ ನಲ್ಲಿ ಚಾಟಿಂಗ್ ಶುರುಮಾಡೋ ಇವ್ನು, ನೀನ್ ಸಖತ್ ಸೆಕ್ಸಿಯಾಗಿದ್ಯಾ ನೋಡೋಕೆ ಮಾಡೆಲ್ ಥರ ಇದ್ಯಾ, ಅಂತಾ ದಿನಕ್ಕೆ ಹತ್ತಿಪ್ಪತ್ತು ಬಾರಿ ಮೆಸೇಜ್ ಮಾಡ್ತಾನೆ.ಇನ್ನು ಇದಕ್ಕೆ ಮಹಿಳೆ, ಸರ್ ನೀವು ಸಮಾಜ ಕಾಯೋ ಪೊಲೀಸ್ರು, ನೀವು ಈ ರೀತಿ ಮಾಡೋದು ತಪ್ಪು ಅಂದ್ರೂ, ಈ ಚಪಲಚನ್ನಿಗರಾಯ ಮಾತ್ರ ಡೊಂಟ್ ಕೇರ್ ಅಂದಿದ್ದಾನೆ. ಸದ್ಯ ಈ ಕಾಮುಕನಿಂದ ನೊಂದ ಮಹಿಳೆ ದಾಖಲೆ ಸಮೇತ ಎರಡು ಜಿಲ್ಲೆಗಳ ಎಸ್ಪಿಗಳಿಗೆ ದೂರು ಸಲ್ಲಿಸಿದ್ದಾಳೆ.
