ಎಲ್ಲರ ಆರೋಗ್ಯ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ನಮ್ಮ ಹೊಣೆ.  ಖಾಸಗಿ ವೈದ್ಯರಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ನಮಗಿಲ್ಲ. ಜನಸಾಮಾನ್ಯರಿಗೆ ಒಳ್ಳೆಯದಾಗಬೇಕೆಂಬುದೇ ಸರ್ಕಾರದ ಗುರಿ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರು (ನ.17): ಎಲ್ಲರ ಆರೋಗ್ಯ ಸುರಕ್ಷತೆಗೆ ಕ್ರಮ ಕೈಗೊಳ್ಳುವುದು ನಮ್ಮ ಹೊಣೆ. ಖಾಸಗಿ ವೈದ್ಯರಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ನಮಗಿಲ್ಲ. ಜನಸಾಮಾನ್ಯರಿಗೆ ಒಳ್ಳೆಯದಾಗಬೇಕೆಂಬುದೇ ಸರ್ಕಾರದ ಗುರಿ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡುವುದು ತಪ್ಪಲ್ಲ. ತಪ್ಪು ಗ್ರಹಿಕೆಯಿಂದ ಈ ರೀತಿಯ ಮುಷ್ಕರದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವೂ ಗೆದ್ದಿಲ್ಲ. ವೈದ್ಯರೂ ಗೆದ್ದಿಲ್ಲ. ಇದು ಜನಸಾಮಾನ್ಯರ ಗೆಲುವು ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ವಿಧೇಯಕದಲ್ಲಿ ಯಾವುದೇ ಗೊಂದಲಗಳು ಸಹ ಈಗ ಇಲ್ಲ. ಎಲ್ಲವೂ ಇತ್ಯರ್ಥವಾಗಿದೆ. ವಿಧೇಯಕದಲ್ಲಿ ಹೇಳಿಕೊಳ್ಳುವ ರೀತಿಯಲ್ಲಿ ಯಾವುದೇ ಬದಲಾವಣೆಗಳು ಇಲ್ಲ. ನನ್ನ ರಾಜಕೀಯ ಬದುಕಿನ ಐತಿಹಾಸಿಕ ಕಾರ್ಯ ಇದಾಗಿದೆ. ರೋಗಿಯ ಸಾವಿನ ನಂತರ ಬಿಲ್ ಕಟ್ಟಿಲ್ಲವೆಂದು ಶವ ಹಸ್ತಾಂತರಕ್ಕೆ ನಿರಾಕರಿಸುವಂತಿಲ್ಲ ಎಂಬ ಅಂಶವನ್ನು ಹೊಸ ವಿಧೇಯಕದಲ್ಲಿ ಸೇರಿಸಲಾಗಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.