Asianet Suvarna News Asianet Suvarna News

ದೇವಾಲಯ ಪ್ರವೇಶಕ್ಕೆ ಇಬ್ಬರು ಮಹಿಳೆಯರ ಇಂಟರೆಸ್ಟಿಂಗ್ ಮಾಸ್ಟರ್ ಪ್ಲಾನ್ !

ಇಬ್ಬರು ಮಹಿಳೆಯರು ಶಬರಿಮಲೆ ದೇಗುಲವನ್ನು ಪ್ರವೇಶಿಸಿದ್ದಾರೆ. ದೇಗುಲ ಪ್ರವೇಶಕ್ಕೂ ಮುನ್ನ ಮಾಸ್ಟರ್ ಪ್ಲಾನ್ ಮಾಡಿ ಯಾರಿಗೂ ತಿಳಿಯದಂತೆ ಪೊಲೀಸ್ ಭದ್ರತೆಯಲ್ಲಿ ದರ್ಶನ  ಪಡೆದಿದ್ದಾರೆ. ಅವರ ಪ್ಲಾನ್ ಹೇಗಿತ್ತು ಎನ್ನುವ ಇಂಟರೆಸ್ಟಿಂಗ್ ಫ್ಯಾಕ್ಟ್ ಇಲ್ಲಿದೆ. 

this is how two kerala women planned entry into sabarimala
Author
Bengaluru, First Published Jan 2, 2019, 3:16 PM IST

ಶಬರಿಮಲೆ : ಶಬರಿಮಲೆಗೆ  ಅಯ್ಯಪ್ಪನ ದೇಗುಲಕ್ಕೆ  ರಾತ್ರೋ ರಾತ್ರಿ ಮಹಿಳೆಯರಿಬ್ಬರು ಪ್ರವೇಶ ಮಾಡಿದ್ದಾರೆ. ಭಾರಿ ವಿರೋಧ ಪ್ರತಿಭಟನೆಯ ನಡುವೆಯೂ ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ಬಿಗಿ ಭದ್ರತೆಯಲ್ಲಿ ಕನಕದುರ್ಗಾ ಹಾಗೂ ಬಿಂದು ಎಂಬ ಮಹಿಳೆಯರಿಬ್ಬರು ದೇಗುಲ ಪ್ರವೇಶ ಮಾಡಿದ್ದಾರೆ. 

ರಾತ್ರಿ 3.45ರ ಸುಮಾರಿಗೆ ಇಬ್ಬರು ದೇವಾಲಯ ಪ್ರವೇಶ ಮಾಡಿದ್ದಾರೆ. ಇಬ್ಬರು ಮಹಿಳೆಯರು ದೇವಾಲಯ ಪ್ರವೇಶ ಮಾಡುವ ಮುನ್ನ ವಿಶೇಷ ರೀತಿಯಾಗಿ ಪ್ಲಾನ್ ಮಾಡಿ ತೆರಳಿದ್ದಾರೆ. 

ಫೇಸ್ ಬುಕ್ ಮೂಲಕ ಪರಿಚಿತರಾದ ಇಬ್ಬರೂ ಕೂಡ ಇಲ್ಲಿಯೇ ದೇವಾಲಯಕ್ಕೆ ತೆರಳುವ ಪ್ಲಾನ್ ಮಾಡುತ್ತಾರೆ. ಬಳಿಕ ಇಬ್ಬರೂ ತಮ್ಮ ಕುಟುಂಬದ ಬಳಿ ದೇವಾಲಯಕ್ಕೆ ತೆರಳುವ ಬಗ್ಗೆ ಯಾವುದೇ ಸಣ್ಣ ಗುಟ್ಟನ್ನೂ ಕೂಡ ಬಿಟ್ಟು ಕೊಡುವುದಿಲ್ಲ. 
ಬಳಿಕ ತಿರುವನಂತಪುರದಲ್ಲಿ ಸಭೆಯೊಂದು ನಡೆಯುತ್ತಿದೆ, ಅಲ್ಲಿಗೇ ಹೋಗುತ್ತೇವೆ ಎಂದು ಆಗಮಿಸಿ ದೇವಾಲಯಕ್ಕೆ ಬರುತ್ತಾರೆ. ನಂತರ ಒಂದರ ನಂತರ ಒಂದರ ಬಳಿಕ ಯಾರಿಗೂ ತಿಳಿಯದೇ ಮಾಸ್ಟರ್ ಪ್ಲಾನ್ ಮೂಲಕ ದೇವಾಲಯ ಪ್ರವೇಶಿಸುತ್ತಾರೆ. 

ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಪೋಟಕ ಮಾಹಿತಿ

ಪಕ್ಕಾ ಸಾಂಪ್ರದಾಯಿಕ ಕುಟುಂಬದಿಂದ ಬಂದ ಕನಕದುರ್ಗಾ ಹಾಗೂ ಸಿಪಿಐಎಂ ಹಿನ್ನೆಲೆಯ ಬಿಂದು ದೇವಾಲಯಕ್ಕೆ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದಾರೆ.  ಬಿಂದು ಹಾಗೂ ಕನಕದುರ್ಗಾ ದೇಗುಲ ಪ್ರವೇಶಿಸಲು ಯೋಜನೆ ರೂಪಿಸಿದ್ದರು. ತಮ್ಮ ಯೋಜನೆ ಅನ್ವಯ ಇಬ್ಬರು ಮಹಿಳೆಯರು ಮೊದಲು ಮಧ್ಯರಾತ್ರಿ ಸುಮಾರು 12.30ಕ್ಕೆ ಪಂಪಾ ಪ್ರದೇಶಕ್ಕೆ ಬಂದಿಳಿಯುತ್ತಾರೆ.  

ಇದಾದ ಬಳಿಕ ಪೊಲೀಸರ ಬಳಿ ತೆರಳಿದ ಮಹಿಳೆಯರು 15 ನಿಮಿಷಗಳ ಕಾಲ ಚರ್ಚೆ ನಡೆಸಿ ದೇಗುಲ ಪ್ರವೇಶಿಸುವಾಗ ಭದ್ರತೆ ನೀಡುವಂತೆ ಕೇಳಿಕೊಂಡಿದ್ದಾರೆ.  ಎಲ್ಲರೂ ಮಾಲೆ ಹಾಕಿದ್ದರಿಂದ ಇವರು ಮಹಿಳೆಯರು ಎನ್ನುವ ಅನುಮಾನ ಬರಲಿಲ್ಲ. ಬೇರೆ ಭಕ್ತರಿಗೆ ಅನುಮಾನ ಬಾರದಂತೆ ತಡೆಯಲು 30ಕ್ಕೂ ಹೆಚ್ಚು ಪೊಲೀಸರು ಸಿವಿಲ್ ಡ್ರೆಸ್ನಲ್ಲಿ ಭದ್ರತೆ ನೀಡಿದ್ದಾರೆ. 

ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾ ಇನ್ನೊಂದು ರೂಪವಿದು

2.45ಕ್ಕೆ ಪಂಪಾ ಬಿಟ್ಟು ಪಾದಯಾತ್ರೆ ಮೂಲಕ 2.45ಕ್ಕೆ ಸನ್ನಿಧಿಗೆ ಎಂಟ್ರಿ ಕೊಟ್ಟ ಮಹಿಳೆಯರು, 2.45ರಿಂದ 3.15ರವರೆಗೆ ಆಡಳಿತ ಮಂಡಳಿ ಕಚೇರಿಯಲ್ಲಿ ಉಳಿದುಕೊಳ್ಳುತ್ತಾರೆ. ಬಳಿಕ ಸುಮಾರು ಬೆಳಗಿನ ಜಾವ 3.30ಕ್ಕೆ ಈ ಮಹಿಳೆಯರು ವಿವಿಐಪಿ ಲೈನ್ ಮೂಲಕ ದೇಗುಲ ಪ್ರವೇಶಿಸಿದ ಮಹಿಳೆಯರು ಕೇವಲ 2 ನಿಮಿಷದ ದರ್ಶನ ಪಡೆಯುತ್ತಾರೆ.

ಈ ಹಿಂದೆ ರೆಹನಾ ಫಾತಿಮಾ, ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿಯೂ ಕೂಡ ದೇವಾಲಯ ಪ್ರವೇಶಕ್ಕೆ ಯತ್ನಿಸಿ ವಿಫಲರಾಗಿದ್ದು, ಇದೀಗ ಇಬ್ಬರು ಮಹಿಳೆಯರು ಮಾತ್ರ ದೇವಾಲಯ ಪ್ರವೇಶಿಸಿ ಇತಿಹಾಸ ಸೃಷ್ಟಿ ಮಾಡಿದ್ದಾರೆ.

Follow Us:
Download App:
  • android
  • ios