Asianet Suvarna News Asianet Suvarna News

ಸರ್ಪ ಸಂಬಂಧದ ರೋಚಕ ಕಥೆಯಿದು; ಇವರ ಮನೆಯಲ್ಲಿ 2 ವರ್ಷದ ಪುಟಾಣಿಯು ಹಾವು ಹಿಡಿತಾಳೆ!

ಎಪ್ರಿಲ್ ಮೇ ಹಾವುಗಳ ಮಿಲನದ ಸಮಯ. ಆಗ ಅವು ಬಹಳ ಅಗ್ರೆಸ್ಸಿವ್  ಆಗಿರುತ್ತವೆ. ಒಮ್ಮೆ 2 ಕಿಂಗ್‌ ಕೋಬ್ರಾಗಳಿವೆ ಅಂತ ಕಾಲ್ ಬಂತು. ಹೋಗಿ ನೋಡಿದ್ರೆ ಒಂದು ಹಾವು ಕೆಳಗಿತ್ತು. ಇನ್ನೊಂದು ಮನೆ ಹೆಂಚಿನ ಮೇಲಿತ್ತು. ಹೆಂಚನ್ನು ತೆಗೆದು ಹತ್ತಿರ ಹೋಗಿದ್ದೇ ಓಡತೊಡಗಿತು. ಹೆಂಚಿನ ಮೇಲೆ ಬ್ಯಾಲೆನ್ಸ್ ಮಾಡೋದು ಕಷ್ಟ, ಆದರೂ ಕಷ್ಟಪಟ್ಟು ಅದರ ಹಿಂದೆ ಓಡಿದೆ. ಬಾಲವನ್ನು ಎಳೆಯೋಣ ಅಂತ ಟಚ್ ಮಾಡಿದೆ ಅಷ್ಟೇ! ಅದು ಎಷ್ಟು ಸ್ಪೀಡ್‌ನಿಂದ ಮುಂದೆ ಓಡ್ತಿತ್ತೋ ಅದಕ್ಕಿಂತ ಹೆಚ್ಚು ಸ್ಪೀಡ್‌ನಲ್ಲಿ ಹಿಂದಕ್ಕೆ ಬಂತು. ಮುಖದ ಎದುರಿಗೆ ಅಷ್ಟಗಲ ಹೆಡೆ ತೆಗೆದು ನಿಂತಿತು. ಅಲ್ಲಾಡದೇ ನಿಂತೆ. ಒಂಚೂರು ಕದಲಿದರೂ ಅಟ್ಯಾಕ್ ಮಾಡಿಬಿಡುತ್ತೆ, ಸ್ವಲ್ಪ ಹೊತ್ತಿನ ನಂತ್ರ ತಿರುಗಿ ಓಡಿ ಹೋಯ್ತು, ನನ್ನ ಲೈಫ್‌ನಲ್ಲಿ ಮುಟ್ಟಿದ ಹಾವನ್ನು ಹಿಡಿಯದೇ ಬಿಟ್ಟಿದ್ದು ಅದೇ ಮೊದಲು ..’

This is Family Interesting Story

ಬೆಂಗಳೂರು (ಜ.22): ಎಪ್ರಿಲ್ ಮೇ ಹಾವುಗಳ ಮಿಲನದ ಸಮಯ. ಆಗ ಅವು ಬಹಳ ಅಗ್ರೆಸ್ಸಿವ್  ಆಗಿರುತ್ತವೆ. ಒಮ್ಮೆ 2 ಕಿಂಗ್‌ ಕೋಬ್ರಾಗಳಿವೆ ಅಂತ ಕಾಲ್ ಬಂತು. ಹೋಗಿ ನೋಡಿದ್ರೆ ಒಂದು ಹಾವು ಕೆಳಗಿತ್ತು. ಇನ್ನೊಂದು ಮನೆ ಹೆಂಚಿನ ಮೇಲಿತ್ತು. ಹೆಂಚನ್ನು ತೆಗೆದು ಹತ್ತಿರ ಹೋಗಿದ್ದೇ ಓಡತೊಡಗಿತು. ಹೆಂಚಿನ ಮೇಲೆ ಬ್ಯಾಲೆನ್ಸ್ ಮಾಡೋದು ಕಷ್ಟ, ಆದರೂ ಕಷ್ಟಪಟ್ಟು ಅದರ ಹಿಂದೆ ಓಡಿದೆ. ಬಾಲವನ್ನು ಎಳೆಯೋಣ ಅಂತ ಟಚ್ ಮಾಡಿದೆ ಅಷ್ಟೇ! ಅದು ಎಷ್ಟು ಸ್ಪೀಡ್‌ನಿಂದ ಮುಂದೆ ಓಡ್ತಿತ್ತೋ ಅದಕ್ಕಿಂತ ಹೆಚ್ಚು ಸ್ಪೀಡ್‌ನಲ್ಲಿ ಹಿಂದಕ್ಕೆ ಬಂತು. ಮುಖದ ಎದುರಿಗೆ ಅಷ್ಟಗಲ ಹೆಡೆ ತೆಗೆದು ನಿಂತಿತು. ಅಲ್ಲಾಡದೇ ನಿಂತೆ. ಒಂಚೂರು ಕದಲಿದರೂ ಅಟ್ಯಾಕ್ ಮಾಡಿಬಿಡುತ್ತೆ, ಸ್ವಲ್ಪ ಹೊತ್ತಿನ ನಂತ್ರ ತಿರುಗಿ ಓಡಿ ಹೋಯ್ತು, ನನ್ನ ಲೈಫ್‌ನಲ್ಲಿ ಮುಟ್ಟಿದ ಹಾವನ್ನು ಹಿಡಿಯದೇ ಬಿಟ್ಟಿದ್ದು ಅದೇ ಮೊದಲು ..’

ಕಿಂಗ್‌ಕೋಬ್ರಾ ಜೊತೆಗಿನ ರೋಚಕ ಸನ್ನಿವೇಶವನ್ನು ನಿರ್ಲಿಪ್ತ ದನಿಯಲ್ಲಿ ಹೇಳುತ್ತಿದ್ದರು ಮಹೇಶ್ ಹುಲೇಕಲ್. ಅವರೊಬ್ಬ ಉರಗ ಸಂರಕ್ಷಕ. ಈವರೆಗೆ 12,000 ಕ್ಕೂ ಅಧಿಕ ಸರ್ಪಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅವುಗಳಲ್ಲಿ 70 ರಷ್ಟು ಕಾಳಿಂಗ ಸರ್ಪಗಳು! 8 ಬಾರಿ ಕಿಂಗ್ ಕೋಬ್ರಾದಿಂದ ಕಚ್ಚಿಸಿಕೊಂಡಿದ್ದಾರೆ. ನಾಲ್ಕು ದಿನ ಕೋಮಾದಲ್ಲಿದ್ದರು. ಎರಡು ಬಾರಿ ಜೀವನ್ಮರಣ  ಹೋರಾಟ ಮಾಡಿ ಬದುಕುಳಿದಿದ್ದಾರೆ. ಕಾಳಿಂಗವನ್ನು ಬಿಟ್ಟು ಬೇರೆ  ವಿಷ ಜಂತುಗಳು ಕಚ್ಚಿದರೂ ಅದನ್ನು ಹಾವಿನ ಕಡಿತ ಅಂತಲೇ ಕರೆಯಲ್ಲ! ಕಿಂಗ್ ಕೋಬ್ರಾದ ಮನಸ್ಥಿತಿ, ಅದು ದಾಳಿ ಮಾಡುವ ಕ್ರಮ ಎಲ್ಲವನ್ನೂ ನಿಖರವಾಗಿ ಅರಿತಿದ್ದಾರೆ. ಇವರಿಗೊಬ್ಬ ಪುಟ್ಟ ಮಗಳಿದ್ದಾಳೆ, ಅವಳಿಗೀಗ ಎರಡೂವರೆ ವರ್ಷ ಪ್ರಾಯ. ಈ ಬಾಲೆ ಆಟ ಆಡುವುದು ಹಾವುಗಳ ಜೊತೆಗೆ!

ಪ್ರಶಾಂತ್ ಅವರ ತಂದೆ ಸುರೇಶ್ ಹುಲೇಕಲ್ ಹಾವು ಸಂರಕ್ಷಣೆಯಲ್ಲಿ ದೊಡ್ಡ ಹೆಸರು. ಒಂದು ಕಾಲದಲ್ಲಿ ಇಡೀ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಏಕೈಕ ಹಾವು ಸಂರಕ್ಷಕರಾಗಿದ್ದರು. ‘ನಾನು ಹುಟ್ಟಿದ ಕೂಡಲೇ ನೋಡಿದ್ದು ಹಾವುಗಳನ್ನು. ಆಗ ಮನೆಯಲ್ಲೇ ಹಾವುಗಳನ್ನಿಟ್ಟುಕೊಳ್ಳಲು ಅಪ್ಪನಿಗೆ ಸರ್ಕಾರ ವಿಶೇಷ ಅನುಮತಿ ಇತ್ತು. ಅಪ್ಪ ರಕ್ಷಿಸಿ ತಂದ ಹಾವುಗಳಲ್ಲಿ ಕೆಲವನ್ನು ಮನೆಯಲ್ಲೂ ಇಡುತ್ತಿದ್ದರು ..’ ಎನ್ನುವ ಪ್ರಶಾಂತ್, ತನ್ನ ಐದನೇ ವಯಸ್ಸಿನಲ್ಲೇ ಮೊದಲ ಹಾವು ಹಿಡಿದಾಗ ಗುರುವಾಗಿದ್ದವರು ಅಪ್ಪನೇ. ಇವರು ಅಂತಲ್ಲ ಮನೆಯಲ್ಲಿದ್ದ ಮೂರು ಮಕ್ಕಳು ಹಾಗೂ ಪತ್ನಿಗೂ ಹಾವು ಹಿಡಿಯೋದನ್ನು ಸುರೇಶ್ ಕಲಿಸಿದ್ದರಂತೆ. ಆದರೆ ಸುರೇಶ್ ಅವರಿಗೆ ಗುರುಗಳ್ಯಾರೂ ಇರಲಿಲ್ಲ.

ಒಮ್ಮೆ ನದಿಯಲ್ಲಿ ನೀರು ಹಾವು ಹಿಡಿದದ್ದೇ ಉಳಿದ ಹಾವುಗಳನ್ನು ಹಿಡಿಯಲು ಪ್ರೇರಣೆಯಾಯಿತಂತೆ. ಸುರೇಶ್ ಅವರು ಹಿಡಿದ ಹಾವುಗಳಿಗೆ ಲೆಕ್ಕವಿಲ್ಲ. 32 ಬಾರಿ ಕಾಳಿಂಗ ಸರ್ಪದಿಂದ ಕಚ್ಚಿಸಿಕೊಂಡು ಬದುಕುಳಿದವರು, ಹಾಗಿದ್ದರೂ ಧೃತಿಗೆಡದೇ ಹಾವು ಸಂರಕ್ಷಣಾ ಕೈಂಕರ್ಯವನ್ನು ಮುಂದುವರಿಸಿದವರು. ಇವರಿಂದ ಬಹಳ ಮಂದಿ ಹಾವು ಹಿಡಿಯೋದು ಕಲಿತಿದ್ದಾರೆ. ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ ಹೆಗ್ಗಳಿಕೆಯೂ ಇವರದ್ದು. ಪ್ರಶಾಂತ್ ಹುಲೇಕಲ್ ಅಪ್ಪನ ಪರಂಪರೆಯನ್ನು ಮುಂದುವರಿಸಿದವರು. ಇವರ ಹಾವು ಹಿಡಿಯುವ ಸಾಹಸ ಉತ್ತರ ಕನ್ನಡದಲ್ಲೆಲ್ಲ ಮನೆಮಾತು. ಇವರು ಓದಿದ್ದು ಎಸ್‌ಎಸ್‌ಎಲ್‌ಸಿ. ಒಂಚೂರು ಪ್ರಯತ್ನ ಪಟ್ಟರೆ ಅಂತಾರಾಷ್ಟ್ರೀಯ ಚಾನೆಲ್‌ಗಳಲ್ಲಿ ಕೆಲಸ ಮಾಡಬಹುದಾದಷ್ಟು ಪ್ರಾವಿಣ್ಯ ಇರುವ ವ್ಯಕ್ತಿ ಅಂತ ಸ್ಥಳೀಯರು ಹೇಳುತ್ತಾರೆ. ಎಂಥಾ ಘಟಸರ್ಪವನ್ನಾದರೂ ಹಿಡಿದು ಪಳಗಿಸಿ ಕಾಡಿಗೆ ಬಿಡುತ್ತಾರೆ. ‘ ಹಾವುಗಳಲ್ಲಿ ಮನುಷ್ಯರ ಹಾಗೆ ನಾನಾ ಸ್ವಭಾವದವು ಇರುತ್ತವೆ. ಅವುಗಳನ್ನು ಹಿಡಿದ ಕೂಡಲೇ ಚಲನೆ, ಕಣ್ಣು, ಬುಸುಗುಡುವ ರೀತಿಯಲ್ಲೇ ಅದು ಸಿಟ್ಟಿನ ಹಾವಾ, ಕೂಲ್ ಹಾವಾ ಅಂತ ಗೊತ್ತಾಗಿಬಿಡುತ್ತದೆ’ ಅಂತ ವಿವರಿಸುತ್ತಾರೆ ಪ್ರಶಾಂತ್. ‘ಹಿಡಿದ ಹಾವುಗಳನ್ನು ಎಲ್ಲಿ ಬಿಡುತ್ತೀರಿ?’ ಅಂದರೆ, ‘ ಹಾವುಗಳಿಗೂ ಅವುಗಳದೇ  ಸರಹದ್ದು ಅಂತಿರುತ್ತೆ, ಆ ಹಾವು ಹಿಡಿದ 5 ಕಿ.ಮೀ ಒಳಗೆ ಬಿಡಬೇಕು. ಬೇರೆ ಜಾಗದಲ್ಲಿ ಬಿಟ್ಟರೆ ಅಲ್ಲಿನ ಹಾವುಗಳು ಇವನ್ನು ಸೇರಿಸಿಕೊಳ್ಳದೇ ಇವುಗಳೊಂದಿಗೆ ಕಾದಾಡುತ್ತವೆ. ಆದರೆ ಈಗ ಮನೆಗಳು ಹೆಚ್ಚಾಗಿರುವ ಕಾರಣ ಸಾಧ್ಯವಾದಷ್ಟು ಸಮೀಪದಲ್ಲಿ, ಕಾಡು ನೀರಿರುವ ಜಾಗದಲ್ಲಿ ಬಿಡುತ್ತೇವೆ’ ಎನ್ನುತ್ತಾರೆ. ಇವರು ಶಾಲಾ ಮಕ್ಕಳಿಗೆ ಪಿಪಿಟಿ ಮೂಲಕ ಹಾವು ಸಂರಕ್ಷಣೆಯ ಪಾಠ ಮಾಡ್ತಾರೆ.

ಆಕರ್ಷ ಹುಲೇಕಲ್

ಇದು ಎರಡೂವರೆ ವರ್ಷದ ಪುಟಾಣಿ. ಅಪ್ಪನಂತೆ ಹಾವು ಹಿಡಿಯೋದ್ರಲ್ಲಿ ಎಲ್ಲಿಲ್ಲದ ಆಸಕ್ತಿ. ವಿಷವಿಲ್ಲದ ಸರ್ಪಗಳನ್ನು ಹಿಡಿಯೋ ಕಲೆ ಈಗಾಗಲೇ ಕರಗತವಾಗಿದೆ. ಮಲೆನಾಡಿನಲ್ಲಿ ಕಿಲೋಮೀಟರ್‌ಗಟ್ಟಲೆ ದೂರ ದೂರ ಮನೆಗಳು. ಹಾಗಾಗಿ ಆಟ ಆಡಲು ಈ ಕಂದಮ್ಮನಿಗೆ ಜೊತೆಗಾರರಿಲ್ಲ. ಅಪ್ಪನೇ ಫ್ರೆಂಡ್, ಅಪ್ಪ ಏನು ಮಾಡ್ತಾರೋ ಅದನ್ನೇ ತಾನೂ ಮಾಡ್ಬೇಕು. ಅಪ್ಪಂಗೆ ಹಾವು ಬಂದಿದೆ ಅಂತ ಕಾಲ್ ಬಂದ ತಕ್ಷಣ ರೆಡಿಯಾಗ್ತಾಳೆ. ಅಪ್ಪನಿಂತ ಮೊದಲೇ ಸ್ಕೂಟರ್ ಏರಿ ಬಿಡ್ತಾಳೆ. ಅಲ್ಲಿ ಹೋದ ಕೂಡ್ಲೇ,‘ಎಲ್ಲಿ ಹಾವು?’ ಅಂತ ಅಲ್ಲಿದ್ದವರನ್ನು ವಿಚಾರಿಸುತ್ತಾಳೆ. ಈ ಪುಟ್ಟ ಮಗುವಿನ ಮಾತಿಗೆ ಬೇಸ್ತುಬೀಳುವ ಸರದಿ ಅವರದು. ‘ಮಗುವನ್ಯಾಕೆ ಕರೆತಂದ್ರಿ, ನಮ್ಮನೆಯಲ್ಲೇ ಬಿಡಿ’ ಅಂದ್ರೆ ಅವರ್ಯಾರ  ಮಾತನ್ನೂ ಕೇಳೋಲ್ಲ. ಅಪ್ಪ ಹಾವು ಹಿಡಿಯುವಾಗ ಅವರ ಜೊತೆಯಲ್ಲೇ ಇದ್ದು ತನ್ನಿಂತಾದ ಸಹಾಯ ಮಾಡ್ತಾಳೆ. ಮನೆಗೆ ಬಂದಮೇಲೆ ಸಂಪೂರ್ಣ ಸನ್ನಿವೇಶವನ್ನು ಅಭಿನಯದ ಸಮೇತ ಅಮ್ಮನಿಗೆ ವರದಿ ಒಪ್ಪಿಸುತ್ತಾಳೆ. ‘ಹಾವು ಅಂತಲ್ಲ, ಯಾವ ಪ್ರಾಣಿ ಕಂಡರೂ ಸ್ನೇಹ ಬೆಳೆಸುತ್ತಾಳೆ. ಅದೇನಾದ್ರೂ ಗುರ್ರ‌ರ್  ಅಂದ್ರೆ, ಅದನ್ನೇ ಹೆದರಿಸಿ ಪಳಗಿಸಿಕೊಳ್ತಾಳೆ. ಹಾವಿನ ಹೆಸರು ಹೇಳೋದಕ್ಕೆ ಸರಿಯಾಗಿ ಬರಲ್ಲ, ಆದರೆ ನಾಗರಹಾವು ಈ ಪರಿಸರದಲ್ಲಿ ಹೆಚ್ಚಾಗಿರುವ ಕಾರಣ ಅದರ ಹೆಸರು ಹೇಳೋದ್ರಿಂದ ಹಿಡಿದು, ಅದನ್ನು ಹೇಗೆ ಹಿಡಿಯೋದು ಅನ್ನುವ ಜ್ಞಾನವೂ ಈಕೆಗಿದೆ’ ಅಂತಾರೆ ಪ್ರಶಾಂತ್.

ಒಂದೊಂದು ಹಾವನ್ನು ನಿಭಾಯಿಸುವ ಬಗೆ ಭಿನ್ನ. ಆ ಜ್ಞಾನ ಈ ಮಗುವಿಗಿದೆ. ರೆಸ್ಕ್ಯುವಿನಲ್ಲಿ ಹಾವು ಹಿಡಿಯೋದಕ್ಕೆ ಇವಳನ್ನಿನ್ನೂ ಬಿಟ್ಟಿಲ್ಲ. ಆದರೆ ರಕ್ಷಣೆ ಮಾಡಿದ ಹಾವನ್ನು ತಂದು ಬಿಟ್ಟರೆ ಅದನ್ನು  ಚಾಕಚಕ್ಯತೆಯಿಂದ ಹಿಡೀತಾಳೆ ಆಕರ್ಷ. ಹಾವನ್ನು ಹಿಡಿಯಲು ಬೇಕಾದ ಏಕಾಗ್ರತೆ, ಚುರುಕುತನ, ಜಾಣ್ಮೆ ಎಲ್ಲವೂ ಈಕೆಗಿದೆ. ಇವಳಿಗೆ 1 ವರ್ಷದ ತಮ್ಮನಿದ್ದಾನೆ. ಮಕ್ಕಳಿಗೆ ಆಸ್ತಿ ಮಾಡಿಡೋದಕ್ಕಿಂತಲೂ ಮಕ್ಕಳನ್ನೇ ಸಮಾಜ ಆಸ್ತಿ ಮಾಡಬೇಕು ಅಂತ ನಂಬಿರೋ ಪ್ರಶಾಂತ್‌ಗೆ, ತಮ್ಮ ಮಕ್ಕಳಿಬ್ಬರಿಂದ  ಗಿನ್ನೆಸ್ ರೆಕಾರ್ಡ್ ಮಾಡಿಸಬೇಕು ಅನ್ನೋ ಕನಸಿದೆ. ಪ್ರಶಾಂತ್ ಫೇಸ್‌ಬುಕ್ ಪೇಜ್‌ನಲ್ಲಿ ಇವಳ ಬಗ್ಗೆ ಇನ್ನಷ್ಟು ವಿವರಗಳಿವೆ.

ಪ್ರಶಾಂತ್ ಫೇಸ್'ಬುಕ್ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಪ್ರಶಾಂತ್ ಮೊಬೈಲ್ ಸಂಖ್ಯೆ, 9980284081

 

Follow Us:
Download App:
  • android
  • ios