ಗಾಂಧೀನಗರ[ಸೆ.17]: ಯಾರಾದರೂ ಹೂಸು (ಅಪಾನವಾಯು) ಬಿಟ್ಟರೆ ಕೂಡಲೇ ಮೂಗು ಮುಚ್ಚಿಕೊಳ್ಳುತ್ತೇವೆ. ಅಂಥದ್ದರಲ್ಲಿ ಹೂಸು ಬಿಡುವ ಸ್ಪರ್ಧೆ ಏರ್ಪಡಿಸಿದರೆ ಕತೆ ಏನಾಗಬೇಡ?

ಹೌದು, ಗುಜರಾತಿನ ಸೂರತ್‌ನಲ್ಲಿ ಸೆ.22ರಂದು ಹೂಸು ಬಿಡುವ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನವನ್ನೂ ನೀಡಲಾಗುತ್ತದೆ. ಅತಿ ಹೆಚ್ಚು ಹೊತ್ತು, ದೊಡ್ಡದಾಗಿ ಮತ್ತು ರಾಗಬದ್ಧವಾಗಿ ಹೂಸು ಬಿಡುವ ವಿಭಾಗದಲ್ಲಿ ವಿಜೇತರಾದವರಿಗೆ ಟ್ರೋಫಿಯನ್ನು ನೀಡಲಾಗುತ್ತದೆ.

ಪ್ರತಿಯೊಬ್ಬರಿಗೂ ತೀರ್ಪುಗಾರರ ಮುಂದೆ ತಮ್ಮ ಪ್ರತಿಭೆ ತೋರಿಸಲು 60 ಸೆಕೆಂಡ್‌ಗಳ ಕಾಲಾವಕಾಶ ನೀಡಲಾಗುತ್ತದೆ. ವಿದೇಶಗಳಲ್ಲಿ ಈ ರೀತಿಯ ಸ್ಪರ್ಧೆಗಳು ಸಾಮಾನ್ಯ. ಆದರೆ, ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು. ಈ ಸ್ಪರ್ಧೆಗೆ ಈಗಾಗಲೇ 200 ಮಂದಿ ಸ್ಪರ್ಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರಂತೆ.