ಗೆಳತಿಗಾಗಿ ತಂದೆ ಆಗೋ ಬಾಯ್ ಫ್ರೆಂಡ್ : ಸೌಭಾಗ್ಯವೋ, ದೌರ್ಭಾಗ್ಯವೋ?

This Girl living as an adult baby
Highlights

ಈ ಯುವತಿಗೆ ಮಕ್ಕಳಂತೆ ಬದುಕಲು ಇಷ್ಟ

ಡೈಪರ್ ಧರಿಸಿ ತೊಟ್ಟಿಲಲ್ಲಿ ಮಲಗೋ ಯುವತಿ

ಈಕೆಯ ಬಾಯ್ ಫ್ರೆಂಡ್ ಗೆ ಈಕೆಯ ತಂದೆ ಪಾತ್ರ

ನಿತ್ಯವೂ ಜ್ಯಾಸ್ ಡೈಪರ್ ಬದಲಿಸೋ ಡೆವಿಡ್    
 

ವಾಷಿಂಗ್ಟನ್(ಜೂ.27): ಜಗತ್ತಿನಲ್ಲಿ ಅದೆಂತಾ ವಿಚಿತ್ರ ಸಂಬಂಧಗಳು ಇರುತ್ತವೆ ನೋಡಿ. ತಾವಲ್ಲದ ವ್ಯಕ್ತಿತ್ವವನ್ನು ತಮ್ಮವರಿಗಾಗಿ ಕೆಲವೊಮ್ಮೆ ಅಳವಡಿಸಿಕೊಳ್ಳಬೇಕಾಗುತ್ತದೆ. ಈ ವಿಡಿಯೋದಲ್ಲಿರುವ ಇಬ್ಬರ ಕತೆಯೂ ಸ್ವಲ್ಪ ಇದೇ ತರಹದ್ದು. ೨೧ ವರ್ಷದ ಜ್ಯಾಸ್ ಎಂಬ ಯುವತಿ ಮತ್ತು ಆಕೆಯ ಬಾಯ್ ಫ್ರೆಂಡ್ ಡೆವಿಡ್ ಎಂಬಾತನ ಕತೆ ಇದು.

ಜ್ಯಾಸ್ ಪುಟ್ಟ ಮಕ್ಕಳಂತೆ ಇರಲು ಇಷ್ಟಪಡುವ ಯುವತಿ. ನಿತ್ಯವೂ ಪುಟ್ಟ ಕಂದಮ್ಮನಂತೆ ಡ್ರೆಸ್ ಮಾಡಿಕೊಂಡು, ಮಕ್ಳಳು ಮಲಗುವ ತೊಟ್ಟಿಲಿನಲ್ಲೇ ಜ್ಯಾಸ್ ಆಟವಾಡುತ್ತಾಳೆ. ಆಕೆಯ ನಡತೆ ಕೂಡ ಕೂಡ ಪುಟ್ಟ ಮಕ್ಕಂತೆಯೇ ಇರುತ್ತದೆ. ಅಷ್ಟೇ ಅಲ್ಲ ಜ್ಯಾಸ್ ನಿತ್ಯವೂ ಮಕ್ಕಳಿಗಾಗಿ ಇರುವ ಡೈಪರ್ ಹಾಕಿಕೊಳ್ಳುತ್ತಾಳೆ. ಡೈಪರ್ ನಲ್ಲಿ ಇರುವುದು ತನಗೆ ಬಹಳ ಸಂತೋಷ ಕೊಡುತ್ತದೆ ಎನ್ನುತ್ತಾಳೆ ಜ್ಯಾಸ್.

ಇನ್ನು ಜ್ಯಾಸ್ ಬಾಯ್ ಫ್ರೆಂಡ್ ಡೆವಿಡ್, ತನ್ನ ಗೆಳತಿಯ ಈ ನಡೆತೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಬದಲಿಗೆ ಜ್ಯಾಸ್ ಇಷ್ಟದಂತೆ ಆಕೆಯ ತಂದೆಯಾಗಿ ಆಕೆಯ ಆರೈಕೆ ಮಾಡುತ್ತಾನೆ. 

ನಿತ್ಯವೂ ಜ್ಯಾಸ್ ಳ ಡೈಪರ್ ಬದಲಿಸುತ್ತಾನೆ ಡೆವಿಡ್. ಜ್ಯಾಸ್ ಹಠ ಮಾಡಿದಾಗ ತಂದೆಯಂತೆ ಮುದ್ದು ಮಾಡಿ ಸಂತೈಸುತ್ತಾನೆ. ತಾನು ಜ್ಯಾಸ್ ಳನ್ನು ಅತಿಯಾಗಿ ಪ್ರೀತಿಸುತ್ತಿದ್ದು, ಆಕೆಯ ಬಯಕೆಯಂತೆ ಆಕೆಯ ತಂದೆಯಾಗಿ ಅವಳೊಂದಿಗೆ ಜೀವನ ನಡೆಸುತ್ತಿದ್ದೇನೆ ಎನ್ನುತ್ತಾನೆ ಜ್ಯಾಸ್.

loader