ಪಾಕಿಸ್ತಾನದ ದೆಹಲಿ ರಾಯಭಾರಿ ಕಚೇರಿಗೆ ಒಂದು ಜೊತೆ ಚಪ್ಪಲಿ ರವಾನಿಸಿರುವುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ನವದೆಹಲಿ (ಡಿ.30): ಪಾಕಿಸ್ತಾನದ ದೆಹಲಿ ರಾಯಭಾರಿ ಕಚೇರಿಗೆ ಒಂದು ಜೊತೆ ಚಪ್ಪಲಿ ರವಾನಿಸಿರುವುದಾಗಿ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಭಾರತೀಯ ಸೇನಾಧಿಕಾರಿ ಕುಲಭೂಷಣ್ ಜಾಧವ್‌ರ ಪತ್ನಿ ಮತ್ತು ತಾಯಿಗೆ ಇಸ್ಲಾಮಾಬಾದ್‌ನಲ್ಲಿ ಅವರ ಚಪ್ಪಲಿ ತೆಗೆಸಿ, ಅದನ್ನು ಹಿಂದಿರುಗಿಸದೆ ಅವಮಾನಿಸಿದ ಪಾಕಿಸ್ತಾನದ ವರ್ತನೆಗೆ ಪ್ರತಿಯಾಗಿ ದೆಹಲಿ ಬಿಜೆಪಿ ವಕ್ತಾರ ತೇಜೀಂದರ್ ಬಗ್ಗಾ ಈ ರೀತಿ ಮಾಡಿದ್ದಾರೆ.
ಆನ್ ಲೈನ್‌ನಲ್ಲಿ ಚಪ್ಪಲಿ ಆರ್ಡರ್ ಮಾಡಿರುವುದರ ಸ್ಕ್ರೀನ್ ಶಾಟ್ ತೆಗೆದು ಬಗ್ಗಾ ಟ್ವೀಟ್ ಮಾಡಿದ್ದಾರೆ. ಜಾಧವ್ ಕುಟುಂಬಕ್ಕೆ ಅವಮಾನಿಸಿದುದಕ್ಕೆ ಪ್ರತಿಯಾಗಿ ಚಪ್ಪಲಿ ಖರೀದಿಸಿ ಪಾಕಿಸ್ತಾನ ರಾಯಭಾರಿ ಕಚೇರಿಗೆ ರವಾನಿಸುವಂತೆ ತಮ್ಮ ಬೆಂಬಲಿಗರಿಗೂ ಅವರು ವಿನಂತಿಸಿದ್ದಾರೆ.
