ಈ ಬ್ಯಾಂಕ್ ಎನ್‌ಪಿಐ ಝಿರೋ: ಇಲ್ಲಿನ ಸಿಬ್ಬಂದಿಯೇ ಹಿರೋ..!

This 30-year-old bank in city has zero NPA
Highlights

ಇಲ್ಲಿನ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯು ಶೂನ್ಯ ಅನುತ್ಪಾದಕ ಆಸ್ತಿ(ಎನ್‌ಪಿಎ) ಮೌಲ್ಯವನ್ನು ಹೊಂದುವ ಮೂಲಕ ದಾಖಲೆ ಬರೆದಿದೆ. ಮಂಗಳೂರಿನ ಅಳಕೆಯ ಹಮೀದ್ ಕಾಂಪ್ಲೆಕ್ಸ್ ನಲ್ಲಿರುವ ಈ ಶಾಖೆ ಆರಂಭವಾಗಿ 30 ವರ್ಷಗಳಾಗಿದ್ದು ಇಲ್ಲಿ 4 ಸಾವಿರ ಖಾತೆಗಳಿವೆ. ಅವುಗಳಲ್ಲಿ 400 ಸಾಲ ಪಡೆದ ಖಾತೆದಾರರದ್ದಾಗಿದೆ ಎನ್ನಲಾಗಿದೆ. 

ಮಂಗಳೂರು(ಜೂ.5): ಇಲ್ಲಿನ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯು ಶೂನ್ಯ ಅನುತ್ಪಾದಕ ಆಸ್ತಿ(ಎನ್‌ಪಿಎ) ಮೌಲ್ಯವನ್ನು ಹೊಂದುವ ಮೂಲಕ ದಾಖಲೆ ಬರೆದಿದೆ. ಮಂಗಳೂರಿನ ಅಳಕೆಯ ಹಮೀದ್ ಕಾಂಪ್ಲೆಕ್ಸ್ ನಲ್ಲಿರುವ ಈ ಶಾಖೆ ಆರಂಭವಾಗಿ 30 ವರ್ಷಗಳಾಗಿದ್ದು ಇಲ್ಲಿ 4 ಸಾವಿರ ಖಾತೆಗಳಿವೆ. ಅವುಗಳಲ್ಲಿ 400 ಸಾಲ ಪಡೆದ ಖಾತೆದಾರರದ್ದಾಗಿದೆ ಎನ್ನಲಾಗಿದೆ. 

ಕಳೆದ 5 ವರ್ಷಗಳಿಂದ ಸತತವಾಗಿ ಎಲ್ಲ ಸಾಲ ಹಿಂಪಡೆಯಲು ಬ್ಯಾಂಕ್ ಯಶಸ್ವಿಯಾಗಿದ್ದು, ಅನುತ್ಪಾದಕ ಆಸ್ತಿಗಳ ಮೌಲ್ಯ ತೋರಿಸುತ್ತಿರುವುದು ಪ್ರತಿಯೊಬ್ಬರಲ್ಲಿಯೂ ಅಚ್ಚರಿಯನ್ನುಂಟುಮಾಡಿದೆ. ಸಾಲ ತೆಗೆದುಕೊಂಡವರು 90 ದಿನಗಳಿಗಿಂತ ಹೆಚ್ಚು ಸಮಯ ಸಾಲವನ್ನು ತೀರಿಸದಿದ್ದರೆ ಬ್ಯಾಂಕ್ ಅಧಿಕಾರಿಗಳು ಯಾವುದೇ ಬೆದರಿಕೆ ಒಡ್ಡಿರುವ ಪ್ರಕರಣಗಳು ಕೂಡ ನಡೆದಿಲ್ಲ. 

ಬ್ಯಾಂಕಿನ ಅಧಿಕಾರಿಗಳಿಂದ ನಮಗೆ ತೊಂದರೆಯಾಗಿದೆ ಎಂದು ಯಾವ ಗ್ರಾಹಕರೂ ಆರೋಪಿಸಿಲ್ಲ ಎಂಬುದು ಮತ್ತೊಂದು ವಿಶೇಷ. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಿಬ್ಬಂದಿಯ ಆಡಳಿತ ಕ್ಷಮತೆಯಿಂದ ಕಳೆದ 5 ವರ್ಷಗಳಿಂದ ಬ್ಯಾಂಕ್ ಶೂನ್ಯ ಅನುತ್ಪಾದಕ ಆಸ್ತಿ ಸಾಧನೆ ಮಾಡಿದೆ.
 

loader