Asianet Suvarna News Asianet Suvarna News

ವಾಹನಗಳಿಗೆ ಸುರಕ್ಷತಾ ದೃಷ್ಟಿಯಿಂದ ಹೊಸ ನಿಯಮ

ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಇದೀಗ ನಾಲ್ಕು-ಚಕ್ರಗಳ ವಾಹನಗಳು ಮತ್ತು ದ್ವಿಚಕ್ರ  ವಾಹನಗಳಿಗೆ ಸುಪ್ರೀಂ ಕೋರ್ಟ್ ಇದೀಗ ಹೊಸ ನಿಯಮವೊಂದನ್ನು ರೂಪಿಸಿದೆ. ತೃತೀಯ ಪಕ್ಷಗಾರರ ವಿಮೆ ಕಡ್ಡಾಯಗೊಳಿಸಬೇಕು ಹೇಳಿದೆ.

Third Party Insurance Mandatory Says Supreme Court
Author
Bengaluru, First Published Jul 21, 2018, 12:32 PM IST

ನವದೆಹಲಿ:  ನಾಲ್ಕು-ಚಕ್ರಗಳ ವಾಹನಗಳು ಮತ್ತು ದ್ವಿಚಕ್ರ  ವಾಹನಗಳಿಗೆ ತೃತೀಯ ಪಕ್ಷಗಾರರ ವಿಮೆ ಕಡ್ಡಾಯಗೊಳಿಸಬೇಕು ಎಂದು ಸುಪ್ರೀಂ ಕೊರ್ಟ್ ಶುಕ್ರವಾರ ತಿಳಿಸಿದೆ. 

ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಇದನ್ನು ಮಾಡಬೇಕಾಗಿದೆ ಮತ್ತು ವಿಮಾ ಕಂಪೆನಿಗಳನ್ನು ಇದನ್ನು ಮಾನವೀಯ ನೆಲೆಯಲ್ಲಿ ನೋಡಬೇಕೇ ವಿನಹ ವಾಣಿಜ್ಯ ನೆಲೆಯಲ್ಲಿ ಅಲ್ಲ ಎಂದು ಕೋರ್ಟ್ ಹೇಳಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸುಪ್ರೀಂ ಸಮಿತಿಯ ಶಿಫಾರಸುಗಳನ್ನು ಉಲ್ಲೇಖಿಸಿದ ಕೋರ್ಟ್ ಈ ನಿರ್ದೇಶನ ನೀಡಿದೆ. 

ದೇಶದಲ್ಲಿರುವ ಸುಮಾರು 18  ಕೋಟಿ ವಾಹನಗಳಲ್ಲಿ ಆರು ಕೋಟಿ ವಾಹನಗಳು ಮಾತ್ರ ತೃತೀಯ ಪಕ್ಷಗಾರರ ವಿಮೆ ಹೊಂದಿವೆ ಎಂದು ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ. ಕೊಯಮತ್ತೂರು ಮೂಲದ ಸರ್ಜನ್ ಆರ್.ರಾಜಶೇ ಖರನ್ ಎಂಬವರು ಸಲ್ಲಿಸಿದ್ದ ಪಿಐಎಲ್‌ಗೆ ಸಂಬಂಧಿಸಿದ ವಿಚಾರಣೆಯ ವೇಳೆ ಕೋರ್ಟ್ ಈ ವಿಷಯ ತಿಳಿಸಿದೆ.

Follow Us:
Download App:
  • android
  • ios