24 ಗಂಟೆಯಲ್ಲಿ 3ನೇ ಇಂಡಿಗೋ ವಿಮಾನದ ತುರ್ತು ಭೂ ಸ್ಪರ್ಶ

First Published 19, Mar 2018, 12:22 PM IST
Third Indigo aircraft Grounded in last 24 hours
Highlights

ಈಗಾಗಲೇ ಇಂಜಿನ್ ಸಮಸ್ಯೆಯಿಂದ ಅನೇಕ ಇಂಡಿಗೋ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದ್ದು, ಇದೀಗ ಮತ್ತೊಂದು ಇಂಡಿಗೋ ವಿಮಾನವನ್ನು ತುರ್ತು ಭೂ ಸ್ಪರ್ಶ  ಮಾಡಲಾಗಿದೆ. 

ನವದೆಹಲಿ :  ಈಗಾಗಲೇ ಇಂಜಿನ್ ಸಮಸ್ಯೆಯಿಂದ ಅನೇಕ ಇಂಡಿಗೋ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದ್ದು, ಇದೀಗ ಮತ್ತೊಂದು ಇಂಡಿಗೋ ವಿಮಾನವನ್ನು ತುರ್ತು ಭೂ ಸ್ಪರ್ಶ  ಮಾಡಲಾಗಿದೆ.  ಜಮ್ಮು  ವಿಮಾನ ನಿಲ್ದಾಣದಲ್ಲಿ ಭಾನುವಾರ ಇಂಧನ ಲೀಕೇಜ್ ಸಮಸ್ಯೆಗೆ ಒಳಗಾಗಿದ್ದ ವಿಮಾನವನ್ನು ತುರ್ತು ಭೂ ಸ್ಪರ್ಶ  ಮಾಡಲಾಗಿದೆ.

ಇದರಿಂದ ಕಳೆದ 24 ಗಂಟೆಗಳಲ್ಲಿ  ಮೂರು  ವಿಮಾನಗಳ ತುರ್ತು ಭೂಸ್ಪರ್ಶ ಮಾಡಿದಂತಾಗಿದೆ. ಶನಿವಾರವೂ ಕೂಡ 2 ಇಂಡಿಗೋ ವಿಮಾನಗಳಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಪೈಲಟ್’ಗಳು ಪತ್ತೆ ಮಾಡಿ ತುರ್ತು ಭೂ ಸ್ಪರ್ಶ ಮಾಡಿದ್ದರು.

ಬೆಂಗಳೂರಿನಿಂದ ದಿಲ್ಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಇಂಜಿನ್ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ  ಭೂಸ್ಪರ್ಶ ಮಾಡಲಾಗಿತ್ತು. ಅದಾದ ಬಳಿಕ  ಇದೀಗ ಮತ್ತೆ ಅಂತಹದ್ದೇ  ಘಟನೆ ಬೆಳಕಿಗೆ ಬಂದಿದ್ದು, ಆತಂಕಕ್ಕೆ ಎಡೆ ಮಾಡಿದೆ.

loader