ಬೆಂಗಳೂರು(ನ.11): ಸಮಯ ಸರಿ ಇಲ್ಲದಿದ್ದರೆ ಒದೆ ತಿನ್ನುವುದು ಖಚಿತ ಎನ್ನುವುದಕ್ಕೆ ನಿನ್ನೆ ರಾತ್ರಿ ನಡೆದ ಘಟನೆಯೇ ಕ್ಷಿ. ನಿನ್ನೆ ಕುಡಿದ ಮತ್ತಿನಲ್ಲಿ ಪಟ್ಟೆಗರ ಪಾಳ್ಯದ ಸೇಟು ಒಬ್ಬರಿಗೆ ಮಾರಕಸ್ತ್ರಗಳನ್ನು ತೋರಿಸಿ ದರೋಡೆ ಮಾಡಲು ಬಂದ ಮೂವರಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿವೆ.

ಹಡಮತ್ ಎಂಬುವವರು ತಮ್ಮ ಡೆಕೋರೇಟ್ ಅಂಗಡಿಯ ವ್ಯಾಪಾರ ಮುಗಿಸಿ ಬಾಗಿಲು ಹಾಕಿ ಮನೆಗೆ ಏಂಟು ವರ್ಷದ ಹುಡುಗನ ಜೊತೆ ತೆರಳುತ್ತಿದ್ದರು. ಇದೇ ವೇಳೆ ಅಲ್ಲೇ ಇದ ಬಾರಿನಲ್ಲಿ ಕುಡಿದು ಬಂದ ಏಳು ಮಂದಿ ಹಡಮತ್ ಹಾಗೂ ಹುಡುಗನ ಮೇಲೆ ದಾಳಿ ಮಾಡಿ ಮಾರಕಾಸ್ತ್ರ ತೋರಿಸಿ ಪರ್ಸ್ ಹಾಗೂ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ.

ಇವರ ರಂಪಾಟ ನೋಡಿದ ಸಾರ್ವಜನಿಕರು ಸಹಾಯಕ್ಕೆ ದೌಡಾಯಿಸಿದ್ದಾರೆ, ಆಗ ಮೂವರು ತಪ್ಪಿಸಿಕೊಂಡಿದು, ಮೂವರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ಮೂವರಿಗೂ ಹಣ್ಣುಗಾಯಿ ನಿರುಗಾಯಿ ಆಗುವಂತೆ ಥಳಿಸಿದ ಸಾರ್ವಜನಿಕರು ವಿಜಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ