ಅಶ್ವತ್ಥ್’ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್’ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೇದೆ ಆಕಾಶ್ ಎಂಬುವವರು ಗಾಯಗೊಂಡಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಅಶ್ವತ್ಥ್ ಕಾಲಿಗೆ ಗುಂಡು ಹಾರಿಸಿದ್ದಾರೆ.

ಬೆಂಗಳೂರು(ಡಿ.4): ಬೆಂಗಳೂರಿನ ಕುಖ್ಯಾತ ದರೋಡೆಕೋರ ಅಶ್ವತ್ಥ್ ಮೇಲೆ ಗುಂಡಿನ ದಾಳಿ ನಡೆದಿದೆ. ಯಶವಂತಪುರದ ಆರ್’ಎಂಸಿ ಯಾರ್ಡ್ ಬಳಿ ಪೊಲೀಸರು ದರೋಡೆಕೋರನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭಾನುವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈತ ಮರಿಯಪ್ಪನ ಪಾಳ್ಯದಲ್ಲಿ ಮೊಬೈಲ್, ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ.

ಈ ವೇಳೆ ಅಶ್ವತ್ಥ್’ನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಲಾಂಗ್’ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೇದೆ ಆಕಾಶ್ ಎಂಬುವವರು ಗಾಯಗೊಂಡಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಅಶ್ವತ್ಥ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಇನ್’ಸ್ಪೆಕ್ಟರ್ ಮುಕಾರಾಮ್ ಅವರು ಅಶ್ವತ್ಥ್ ಮೇಲೆ ಫೈರಿಂಗ್ ನಡೆಸಿದ್ದಾರೆ.

ಸದ್ಯ ಗಾಯಾಳು ಆಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದರೋಡೆಕೋರ ಅಶ್ವತ್ಥ್’ನನ್ನು ಕೂಡ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.