ನಿಜಾಮುದ್ದಿನ-ವಾಸ್ಕೋಡಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ರವಿವಾರ ಬೆಳಗಿನ ಜಾವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ(ಸೆ.11): ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಿಂದ ಟಿಸಿಯನ್ನೇ ಹೊರದಬ್ಬಿರುವ ಘಟನೆ ರಾಯಭಾಗ-ಘಟಪ್ರಭಾ ರೈಲು ಮಾರ್ಗದಲ್ಲಿ ನಡೆದಿದೆ.

ನಿಜಾಮುದ್ದಿನ-ವಾಸ್ಕೋಡಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ರವಿವಾರ ಬೆಳಗಿನ ಜಾವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಿನ್ನಪ್ಪ ಕೆ.ಎಮ್. ರೈಲಿನಿಂದ ತಳ್ಳಲ್ಪಟ್ಟ ಟಿಸಿ.

ರೈಲಿನ ಸ್ಲೀಪರ್‌ ಕೋಚ್‌'ನಲ್ಲಿ ಯುವಕನೊಬ್ಬ ಅನುಮಾನಾಸ್ಪದಾಗಿ ಓಡಾಡುತ್ತಿದ್ದ. ಈ ವೇಳೆ ಟಿಸಿ ಯುವಕನನ್ನು ತಡೆದು ವಿಚಾರಿಸಿದಾಗ ಆತನ ಬಳಿ ಟಿಕೆಟ್ ಇರಲಿಲ್ಲ. ಜೊತೆಗೆ ಮೊಬೈಲ್ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.

ಹಾಗಾಗಿ ಘಟಪ್ರಭಾ ರೈಲ್ವೆ ಪೊಲೀಸರಿಗೆ ಒಪ್ಪಿಸಲು ಯುವಕನನ್ನ ತಮ್ಮ ಬಳಿ ಇರಿಸಿಕೊಂಡಿದ್ದರು. ಈ ವೇಳೆ ಶೌಚಾಲಯಕ್ಕೆ ತೆರಳುವುದಾಗಿ ಹೇಳಿ ಏಕಾಏಕಿ ಟಿಸಿಯನ್ನೇ ರೈಲಿನಿಂದ ತಳ್ಳಿ ಕಳ್ಳ ಪರಾರಿಯಾಗಿದ್ದಾನೆ.ಈ ಬಗ್ಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.