'ಸರ್‌ ಕೈಗೆ ಹಾಕಿದ ಬೇಡಿ ಬಹಳ ಬಿಗಿಯಾಗಿದೆ. ಸ್ವಲ್ಪ ಸಡಿಲ ಮಾಡಿ' ಎಂದು ಕೈದಿ ಕೇಳಿದ್ದ. ಪಾಪ ಪೊಲೀಸರೂ ಆತನ ಮೇಲೆ ಕನಿಕರ ತೋರಿ ಬೇಡಿಯನ್ನು ಸಡಿಲ ಮಾಡತೊಡಗಿದ್ದರು.

ಅಷ್ಟರಲ್ಲಿ ಅಲೆನ್‌ ಲೂಯಿಸ್‌ ಎಂಬ ಆ ಕಳ್ಳ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಹೀಗೆ ಪರಾರಿಯಾದವನೇ, ಸಮೀಪದಲ್ಲೇ ಇದ್ದ ಹೆದ್ದಾರಿಯೊಂದರ ಬಳಿ ನಿಂತುಕೊಂಡು, ಕಂಡಕಂಡವರಿಗೆಲ್ಲಾ ಡ್ರಾಪ್‌ ಕೊಡಿ ಎಂದು ಕೇಳಿದ್ದಾನೆ. ಆದರೆ ಯಾರೂ ಡ್ರಾಪ್‌ ಕೊಟ್ಟಿರಲಿಲ್ಲ. ಕೊನೆಗೆ ಕಾರೊಂದು ಬಂದು ಈತನನ್ನು ಹತ್ತಿಸಿಕೊಂಡು ಹೋಯಿತು.

ಸ್ವಲ್ಪ ದೂರ ಹೋಗುತ್ತಲೇ, ಕಾರು ಚಲಾಯಿಸುತ್ತಿದ್ದ ಪೊಲೀಸ್‌ ಅಧಿಕಾರಿಗೆ ಇಲ್ಲೇನೋ ಎಡವಟ್‌ ಆಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ, ಕೈಯಲ್ಲಿ ಬೇಡಿ ಕಂಡಿದೆ. ಆಗ ಕಳ್ಳ ಎಂದು ಖಚಿತವಾಗಿದೆ. ಕೊನೆಗೆ ಕೈದಿಯನ್ನು ಸೀದಾ ಜೈಲಿಗೆ ಕರೆದೊಯ್ದು ಹಾಕಿದ್ದಾನೆ. ಇಂಥದ್ದೊಂದು ಘಟನೆ ಅಮೆರಿಕದ ಕೆಂಟುಕಿಯಲ್ಲಿ ನಡೆದಿದೆ.