ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ, ಪೊಲೀಸರು ರಂಗೋಲಿ ಕೆಳಗೆ ನುಗ್ತಾರೆ. ಅಂಥಾ ಖತರ್ನಾಕ್ ಕಳ್ಳನೊಬ್ಬ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ. ಇವನು, ಯಾವುದಾದ್ರೂ ಒಂದು ಮನೆ ಟಾರ್ಗೆಟ್ ಮಾಡ್ದಾ ಅಂದ್ರೆ, ಮುಗೀತು, ಆ ಮನೆ ಖಾಲಿ ಖಾಲಿ ಆಗಿಬಿಡುತ್ತೆ. ಅಂಥಾ ಕಳ್ಳನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರು (ಜೂ.16): ಕಳ್ಳರು ಚಾಪೆ ಕೆಳಗೆ ನುಗ್ಗಿದ್ರೆ, ಪೊಲೀಸರು ರಂಗೋಲಿ ಕೆಳಗೆ ನುಗ್ತಾರೆ. ಅಂಥಾ ಖತರ್ನಾಕ್ ಕಳ್ಳನೊಬ್ಬ ಬೆಂಗಳೂರು ಪೊಲೀಸರ ಅತಿಥಿಯಾಗಿದ್ದಾನೆ. ಇವನು, ಯಾವುದಾದ್ರೂ ಒಂದು ಮನೆ ಟಾರ್ಗೆಟ್ ಮಾಡ್ದಾ ಅಂದ್ರೆ, ಮುಗೀತು, ಆ ಮನೆ ಖಾಲಿ ಖಾಲಿ ಆಗಿಬಿಡುತ್ತೆ. ಅಂಥಾ ಕಳ್ಳನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರಿನ ಇಂದಿರಾನಗರ, ಜೀವನ್ ಭೀಮಾನಗರ ಒಂದರ್ಥದಲ್ಲಿ ನಗರದ ಶ್ರೀಮಂತ ಏರಿಯಾಗಳು. ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳೇ ಹೆಚ್ಚಿರುವ ಈ ಏರಿಯಾಗಳಲ್ಲಿ ಇತ್ತೀಚಿಗೆ ಮನೆಗಳ್ಳತನ ಪ್ರಕರಣಗಳು ಶುರುವಾಗಿದ್ದವು. ಈ ಪ್ರಕರಣಗಳು ಖುದ್ದು ನಗರ ಪೊಲೀಸ್ ಆಯುಕ್ತರ ಗಮನಕ್ಕೆ ಹೋಗಿದ್ದವು. ಪೊಲೀಸರಿಗೆ ರಾತ್ರಿ ವೇಳೆ ಗಸ್ತು ಮಾಡುವಂತೆ ನಿರ್ದೇಶಿಸಲಾಯ್ತು. ಅದರಂತೆಯೇ ಇಂದಿರಾನಗರ ಇನ್ಸ್ಪೆಕ್ಟರ್ ರವಿ ಮತ್ತು ಜೀವನ್ ಭೀಮಾನಗರ ಇನ್ಸ್ಪೆಕ್ಟರ್ ಶಿವಪ್ರಸಾದ್ ತಮ್ಮ ಸಿಬ್ಬಂದಿಗೆ ರಾತ್ರಿ ವೇಳೆ ಗಸ್ತು ಹೆಚ್ಚಿಸಲು ಸೂಚನೆ ನೀಡಿದರು.
ಕಳೆದ ಎಂಟು ವರ್ಷಗಳಿಂದಲೂ ಪೊಲೀಸರಿಗೆ ಚಳ್ಲೆ ತಿನ್ನಿಸಿಕೊಂಡು ಅಡ್ಡಾಡುತ್ತಿದ್ದ ಖತರ್ನಾಕ್ ಕಳ್ಳನೊಬ್ಬ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ನೇಪಾಳದ ಬಿಜಯ್ ಸಿಂಗ್ ಬಂಧಿತ ಆರೋಪಿ. ಕಳೆದ ವಾರ, ಇಂದಿರಾನಗರದ ಮನೆಯೊಂದಕ್ಕೆ ನುಗ್ಗಿದ ಬಿಜಯ್ ಸಿಂಗ್, ಗಸ್ತು ತಿರುಗುತ್ತಿದ್ದ ಪೊಲೀಸ್ ಜೀಪ್ ನೋಡಿ ಗಾಬರಿಯಾಗಿ ಓಡಿದ್ದಾನೆ. ಆತನನ್ನ ಬೆನ್ನಟ್ಟಿ ಹಿಡಿದ ಪೊಲೀಸರು, ಆತನಿಂದ ಒಂದೂವರೆ ಕೆಜಿ ತೂಕದ ಚೊನ್ನದ ಆಭರಣಗಳನ್ನ ವಶಪಡಿಸಿಕೊಂಡಿದ್ದಾರೆ.
