Asianet Suvarna News Asianet Suvarna News

ಈ ಅ್ಯಪ್’ಗಳು ಮೊಬೈಲ್’ನಲ್ಲಿದ್ದರೇ ಜಾಗ್ರತೆ...!!!

ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ರಚಿಸಲಾಗಿರುವ ಈ ಅ್ಯಪ್’ಗಳನ್ನು ವಂಚಿಸಲು ಬಳಸುವವರಿಗೇನು ಕೊರತೆಯಿಲ್ಲ.

These Smart Phone Apps Help You to Maintain Secrecy

ಪತಿ ಅಥವಾ ಪತ್ನಿ ತನಗೆ ವಂಚಿಸುತ್ತಿದ್ದಾರೆ ಎಂದು ಅವರ ಕಾಲ್ ಹಿಸ್ಟರಿ, ಇ-ಮೇಲ್,  ಎಸ್’ಎಮ್’ಎಸ್’ಗಳನ್ನು ನೋಡುವ ಮೂಲಕ ‘ಬೇಹುಗಾರಿಕೆ’ ನಡೆಸುತ್ತಿದ್ದಲ್ಲಿ, ಆದರೆ ಯಾವುದೇ ಸಾಕ್ಷ್ಯಾಧಾರಗಳು ಕೈಗೆ ಸಿಗುತ್ತಿಲ್ಲವೆಂದಾದಲ್ಲಿ ಈ 4 ಸ್ಮಾರ್ಟ್ ಫೋನ್ ಅ್ಯಪ್’ಗಳು ನಿಮ್ಮ ಪ್ರಯತ್ನಗಳಿಗೆ ನೀರೆರಚುತ್ತಿರಬಹುದು.  ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ರಚಿಸಲಾಗಿರುವ ಈ ಅ್ಯಪ್’ಗಳನ್ನು ವಂಚಿಸಲು ಬಳಸುವವರಿಗೇನು ಕೊರತೆಯಿಲ್ಲ.

ಪ್ರೈವೇಟ್ ಫೋಟೋ:

ಬೇಹುಗಾರಿಕೆ ನಡೆಸುವಾಗ ಯಾರಾದರು ಕ್ಯಾಲ್ಕುಲೇಟರ್’ಅನ್ನು ತೆರೆದು ನೋಡುತ್ತಾರೆಯೇ?  ನೋಡಲು ಕ್ಯಾಲ್ಕುಲೇಟರನ್ನೇ ಹೋಲುವ  ಪ್ರೈವೇಟ್ ಫೋಟೋ ಎಂಬ ಅ್ಯಪ್, ತೆರೆದುಕೊಳ್ಳಲು ಪಾಸ್ವರ್ಡ್ ಅಗತ್ಯವಿದೆ. ಇದರಲ್ಲಿ ಸಂಗ್ರಹಿಸಲಾದ ರಹಸ್ಯ ಫೋಟೋಗಳು, ಫೋನ್’ನ ಗ್ಯಾಲರಿಯಲ್ಲಾಗಲಿ ಅಥವಾ ಫೋಟೋ ಲೈಬ್ರರಿಯಲ್ಲಾಗಲಿ ಕಾಣಿಸುವುದಿಲ್ಲ.

ಟೈಗರ್ ಟೆಕ್ಸ್ಟ್:

ಈ ಅ್ಯಪ್ ಸಂದೇಶಗಳನ್ನು ಅಡಗಿಸಲು ಸಹಕಾರಿಯಾಗಿದೆಯಲ್ಲದೇ, ಅನಗತ್ಯವಾಗಿ ಕರೆ ಮಾಡಿದವರಿಗೆ ‘ ಈ ನಂ. ಚಾಲ್ತಿಯಲ್ಲಿಲ್ಲ’ ಎಂಬ ಸಂದೇಶವನ್ನು ನೀಡುವಂತೆ ಮಾಡಬಹುದು.

ನೋಸಿ ಟ್ರಾಪ್:

ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಫೋನ್’ಅನ್ನು ಯಾರ್ಯಾರು ನೋಡುತ್ತಾರೆಂದು ನೋಸಿ ಟ್ರಾಪ್ ಮೂಲಕ ಕಂಡುಹಿಡಿಯಬಹುದು. ಈ ಅ್ಯಪ್’ನ್ನು ಎನೇಬಲ್ ಮಾಡಿಟ್ಟಾಗ ಫೋನ್’ನ ಮುಂಭಾಗದ ಕ್ಯಾಮೆರಾ ರಹಸ್ಯವಾಗಿ ಫೋಟೋಗಳನ್ನು ಕ್ಲಿಕ್ಕಿಸುತ್ತದೆ.

ಫಾಕ್ಸ್ ಪ್ರೈವೇಟ್ ಮೆಸೇಜ್:

ನಿಮ್ಮನ್ನು ನೋಡಿದಾಗ ಯಾರಾದರೂ ತಮ್ಮ ಮೊಬೈಲನ್ನು ಅಲ್ಲಾಡಿಸುತ್ತಾರೆಂದಾದರೆ ಅವರ ಫೋನ್’ನಲ್ಲಿ ಫಾಕ್ಸ್ ಪ್ರೈವೇಟ್ ಮೆಸೇಜ್ ಎಂಬ ಅ್ಯಪ್ ಇರುವ ಸಾಧ್ಯತೆಗಳಿವೆ. ಈ ಅ್ಯಪ್ ಇದ್ದಲ್ಲಿ ಫೋನ್’ನ್ನು ಅಲ್ಲಾಡಿಸುವ ಮೂಲಕ ಮೆಸೇಜ್’ಗಳನ್ನು ಅಳಿಸಿ ಹಾಕಬಹುದಲ್ಲದೇ, ಮೆಸೇಜ್’ಗಳು ಇನ್’ಬಾಕ್ಸ್’ಗೆ ಬಾರದೇ ನೇರವಾಗಿ ಈ ಅ್ಯಪ್’ನೊಳಗೆ ಬರುವಂತೆ ಮಾಡಬಹುದು.

Follow Us:
Download App:
  • android
  • ios