Asianet Suvarna News Asianet Suvarna News

ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಬೆಂಗಳೂರು ನಗರದ 13 ಶಾಸಕರು

ಇನ್ನುಳಿದಂತೆ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಗಾಂಧಿ ನಗರದ ದಿನೇಶ್ ಗುಂಡೂರಾವ್, ಯಶವಂತಪುರದ ಎಸ್.ಟಿ. ಸೋಮಶೇಖರ್, ಮತ್ತೊಬ್ಬ ಸಚಿವ ಶಿವಾಜಿ ನಗರದ ಆರ್. ರೋಷನ್ ಬೇಗ್, ಪುಲಿಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿ, ಮಹಾಲಕ್ಷ್ಮಿ ಬಡಾವಣೆಯ ಕೆ. ಗೋಪಾಲಯ್ಯ, ಹೊಸಕೋಟೆಯ ಎಂಟಿಬಿ ನಾಗರಾಜ್, ಹೆಬ್ಬಾಳದ ವೈ.ಎ. ನಾರಾಯಣ ಸ್ವಾಮಿ,ಚಿಕ್ಕಪೇಟೆಯ ಆರ್.ವಿ. ದೇವರಾಜ್ ಉಳಿದ ಕ್ಷೇತ್ರದ ಶಾಸಕರಾಗಿದ್ದಾರೆ.   

These are all 2nd time Winner MLAs

ಬೆಂಗಳೂರು(ಜ.25): ಇನ್ನು ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು ಎಲ್ಲ ರಾಜಕೀಯ ಪಕ್ಷಗಳು ನಾಮುಂದು ತಾಮುಂದು ಎಂದು ಅಧಿಕಾರ ಹಿಡಿಯಲು ಜಿದ್ದಾಜಿದ್ದಿಯಲ್ಲಿ ತೊಡಗಿವೆ.

ಕರ್ನಾಟಕ ರಾಜ್ಯದಲ್ಲಿಯೇ ಅತೀ ಹೆಚ್ಚು ಕ್ಷೇತ್ರವಿರುವ ಹಾಗೂ ಗಮನಸೆಳೆಯುತ್ತಿರುವ ಜಿಲ್ಲೆ ಬೆಂಗಳೂರು ನಗರ. ಒಟ್ಟು 28 ಕ್ಷೇತ್ರಗಳು ಇಲ್ಲಿವೆ. ಬೆಂಗಳೂರು ನಗರದಲ್ಲಿ ಹೆಚ್ಚು ಸ್ಥಾನ ಗಳಿಸಿದರೆ ಪ್ರಾಬಲ್ಯ ಮೆರೆಯಬಹುದು ಎನ್ನುವ ಆಕಾಂಕ್ಷೆ ಎಲ್ಲ ಪಕ್ಷಗಳ ಮುಖಂಡರಲ್ಲಿಯೂ ಇದೆ. ವಿಶೇಷ ಎಂದರೆ 28 ರಲ್ಲಿ 13 ಕ್ಷೇತ್ರಗಳ ಶಾಸಕರು ಈಗಾಗಲೇ 2 ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಬಾರಿ ಗೆಲುವು ಸಾಧಿಸಿರುವ ಶಾಸಕರಲ್ಲಿ ಮೊದಲ ಸ್ಥಾನದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಇದ್ದಾರೆ. ಬಿಟಿಎಂ ಕ್ಷೇತ್ರವನ್ನು ಪ್ರತಿನಿಧಿಸುವ ಇವರು ಒಟ್ಟು 6 ಬಾರಿ ಗೆಲುವು ಸಾಧಿಸಿದ್ದಾರೆ. 2ನೇ ಸ್ಥಾನದಲ್ಲಿ ಬಿಜೆಪಿಯ ಹಿರಿಯ ನಾಯಕ ಆರ್.ಅಶೋಕ್ ಪದ್ಮನಾಭ ನಗರ ಕ್ಷೇತ್ರದಿಂದ 5 ಬಾರಿ ಜಯಗಳಿಸಿ ಡಬಲ್ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. ಚಾಮರಾಜಪೇಟೆಯ ಜೆಡಿಎಸ್'ನ ಬಂಡಾಯ ಶಾಸಕ ಬಿ.ಝೆಡ್. ಜಮೀರ್ ಅಹಮದ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ 3 ಬಾರಿ ಜಯಗಳಿಸಿ 4ನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಇನ್ನುಳಿದಂತೆ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಗಾಂಧಿ ನಗರದ ದಿನೇಶ್ ಗುಂಡೂರಾವ್, ಯಶವಂತಪುರದ ಎಸ್.ಟಿ. ಸೋಮಶೇಖರ್, ಮತ್ತೊಬ್ಬ ಸಚಿವ ಶಿವಾಜಿ ನಗರದ ಆರ್. ರೋಷನ್ ಬೇಗ್, ಪುಲಿಕೇಶಿ ನಗರದ ಅಖಂಡ ಶ್ರೀನಿವಾಸ ಮೂರ್ತಿ, ಮಹಾಲಕ್ಷ್ಮಿ ಬಡಾವಣೆಯ ಕೆ. ಗೋಪಾಲಯ್ಯ, ಹೊಸಕೋಟೆಯ ಎಂಟಿಬಿ ನಾಗರಾಜ್, ಹೆಬ್ಬಾಳದ ವೈ.ಎ. ನಾರಾಯಣ ಸ್ವಾಮಿ,ಚಿಕ್ಕಪೇಟೆಯ ಆರ್.ವಿ. ದೇವರಾಜ್ ಉಳಿದ ಕ್ಷೇತ್ರದ ಶಾಸಕರಾಗಿದ್ದಾರೆ.   

    

ಹ್ಯಾಟ್ರಿಕ್ ನಿರೀಕ್ಷೆಯಲ್ಲಿರುವ ಶಾಸಕರ ಪಟ್ಟಿ

ಎಸ್.ಆರ್. ವಿಶ್ವನಾಥ್ - ಯಲಹಂಕ

ಮುನಿರಾಜು - ದಾಸರಹಳ್ಳಿ

ಎಂ.ಕೃಷ್ಣಪ್ಪ - ವಿಜಯನಗರ

ಪ್ರಿಯಾ ಕೃಷ್ಣ - ಗೋವಿಂದರಾಜ ನಗರ

ರವಿ ಸುಬ್ರಹ್ಮಣ್ಯ - ಬಸವನಗುಡಿ

ವಿಜಯ್ ಕುಮಾರ್ - ಜಯನಗರ

ಅರವಿಂದ ಲಿಂಬಾವಳಿ - ಮಹದೇವಪುರ ಮೀಸಲು ಕ್ಷೇತ್ರ

ಸತೀಶ್ ರೆಡ್ಡಿ - ಬೊಮ್ಮನಹಳ್ಳಿ

ಅಶ್ವತ್ಥ ನಾರಾಯಣ್ - ಮಲ್ಲೇಶ್ವರಂ

ಸುರೇಶ್ ಕುಮಾರ್ - ರಾಜಾಜಿ ನಗರ

ಹಾರೀಸ್ - ಶಾಂತಿ ನಗರ

ಕೃಷ್ಣ ಬೈರೇಗೌಡ - ಬ್ಯಾಟರಾಯನ ಪುರ

ಎಸ್ ರಘು - ಸಿ.ವಿ. ರಾಮನ್ ನಗರ

 

 

 

 

Follow Us:
Download App:
  • android
  • ios