ಬ್ರಿಟನ್ ನಲ್ಲಿರುವ ಭಾರತೀಯ ಟೆಕ್ಕಿಗಳನ್ನು ವಲಸಿಗರಾಗಿ ನೋಡದೇ ಕಾರ್ಪೋರೇಟ್ ವಲಯದಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂದು ಸಿಎಂ ಸಿಧ್ಧರಾಮಯ್ಯ ಬ್ರಿಟನ್ ಪ್ರಧಾನಿ ತೆರೆಸಾರವರಿಗೆ ಕೇಳಿಕೊಂಡಿದ್ದಾರೆ.
ಬೆಂಗಳೂರು (ನ.08): ಬ್ರಿಟನ್ ನಲ್ಲಿರುವ ಭಾರತೀಯ ಟೆಕ್ಕಿಗಳನ್ನು ವಲಸಿಗರಾಗಿ ನೋಡದೇ ಕಾರ್ಪೋರೇಟ್ ವಲಯದಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂದು ಸಿಎಂ ಸಿಧ್ಧರಾಮಯ್ಯ ಬ್ರಿಟನ್ ಪ್ರಧಾನಿ ತೆರೆಸಾರವರಿಗೆ ಕೇಳಿಕೊಂಡಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಒಂದು ದಿನದ ಭೇಟಿ ಕೈಗೊಂಡ ಬ್ರಿಟನ್ ಪ್ರಧಾನಿ ತೆರೆಸಾರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಸಿಎಂ ಸಿದ್ಧರಾಮಯ್ಯ ಅನಿವಾಸಿ ಭಾರತೀಯರ ಪರವಾಗಿ ಮಾತನಾಡಿದರು.
ನುರಿತ ಭಾರತೀಯ ಟೆಕ್ಕಿಗಳು ಕೆಲಸದ ನಿಮಿತ್ತ ಬ್ರಿಟನ್ ಗೆ ಹೋಗುವವರನ್ನು ವಲಸಿಗರು ಎಂದು ಪರಿಗಣಿಸುವುದಕ್ಕಿಂತ ಹೆಚ್ಚಾಗಿ ವ್ಯಾಪಾರದ ಹಿತದೃಷ್ಟಿಯಿಂದ ಪರಿಗಣಿಸಬೇಕು. ವಲಸೆಯಿಂದ ಆಗುವ ಪರಿಣಾಮಕ್ಕಿಂತ ನುರಿತ ಭಾರತೀಯ
ತಂತ್ರಜ್ಞರಿಂದ ದೇಶದ ಆರ್ಥಿಕತೆಗೆ ಆಗುವ ಲಾಭ ಮಹತ್ವದ್ದು ಎಂದು ಬ್ರಿಟಿಷ್ ಸರ್ಕಾರವನ್ನುದ್ದೇಶಿಸಿ ಸಿದ್ಧರಾಮಯ್ಯ ಹೇಳಿದರು.
