- 2 ಸಾವಿರದವರೆಗಿನ ವ್ಯವಹಾರಕ್ಕಿಲ್ಲ ಶುಲ್ಕ- ನಗದು ರಹಿತ ವ್ಯವಹಾರಕ್ಕೆ ಒತ್ತು.
ನವದೆಹಲಿ: 2000 ರು.ವರೆಗಿನ ಡೆಬಿಟ್ ಕಾರ್ಡ್, ಭೀಮ್ ಆ್ಯಪ್ ಮತ್ತು ಇತರ ಪಾವತಿಗೆ ವಹಿವಾಟು ಶುಲ್ಕವನ್ನು ಹಿಂಪಡೆದುಕೊಳ್ಳಲಾಗಿದೆ. 2000 ರು. ವರೆಗಿನ ವಹಿವಾಟಿಗೆ ಮರ್ಚಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಅನ್ನು ಸರ್ಕಾರವೇ ಭರಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಡಿಸೆಂಬರ್ ತ್ರೈಮಾಸಿಕದ ಅವಧಿಯಲ್ಲಿ ಭೀಮ್ ಆ್ಯಪ್ ಮೂಲಕ ನಡೆಸಿದ ವಹಿವಾಟು 13,174 ಕೋಟಿ ರು. ತಲುಪಿದೆ. 2000 ರು. ವರೆಗಿನ ಡೆಬಿಟ್ ಕಾರ್ಡ್ ವಹಿವಾಟಿ ಶುಲ್ಕವನ್ನು ಸರ್ಕಾರವೇ ಮರುಪಾವತಿ ಮಾಡಲಿದೆ ಎಂದು ಹಣಕಾಸು ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.
