ನವೆಂಬರ್ 8ಕ್ಕಿಂತ ಮುಂಚೆಯೇ ಖಾತೆಯಲ್ಲಿ ಎರಡೂವರೆ ಲಕ್ಷ ರೂ ಇದ್ದರೆ ಮಾತ್ರ ಡ್ರಾ ಮಾಡಬಹುದು. ಹಳೇ ನೋಟು ಕೊಟ್ಟು ಹೊಸ ನೋಟು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಭಾಸ್ಕರ್ ಪೀಕಲಾಟಕ್ಕೆ ಸಿಲುಕಿದ್ದಾರೆ. ಮದುವೆಯೆಂದ ಮೇಲೆ ಐದಾರು ಲಕ್ಷ ರೂಪಾಯಿ ಖರ್ಚಾಗುತ್ತದೆ. ನಮ್ಮ ಬಳಿ ಹಳೇ ನೋಟುಗಳಿವೆ, ಬದಲಿಸಿಕೊಡಿ ಅಂತಾ ಬ್ಯಾಂಕಿನವರಿಗೆ ಗೋಗರೆದರೂ ಹಣ ಕೊಡುತ್ತಿಲ್ಲವೆಂದು ವಧುವಿನ ತಂದೆ ಭಾಸ್ಕರ್ ಗೋಳು ತೋಡಿಕೊಂಡಿದ್ದಾರೆ.

ಮೈಸೂರು(ನ.23): ಮದುವೆಗಾದರೆ ಎರಡೂವರೆ ಲಕ್ಷ ರೂಪಾಯಿ ಡ್ರಾ ಮಾಡಬಹುದೆಂದು ಕೇಂದ್ರ ಸರ್ಕಾರ ನೀಡಿದ ವಿನಾಯಿತಿ ಜನಸಾಮಾನ್ಯರಿಗೆ ಅನುಕೂಲ ಮಾಡುತ್ತಿಲ್ಲ. ಮೈಸೂರಿನ ಅಶೋಕ ರಸ್ತೆಯ ನಿವಾಸಿ ಭಾಸ್ಕರ್ ನಾಳೆ ಮಗಳ ಮದುವೆಗಾಗಿ ಹಣ ಡ್ರಾ ಮಾಡಲು ಇಂಡಿಯನ್ ಓವರ್ಸೀಸ್ ಬ್ಯಾಂಕಿಗೆ ಹೋದರೆ ಹಣ ಸಿಗುತ್ತಿಲ್ಲ.