ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ಸನ್ನು ಕಸಬ್ ಗೆ ಹೋಲಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವಿರುದ್ಧ ಪ್ರತಿಪಕ್ಷಗಳು ತಿರುಗಿ ಬಿದ್ದಿವೆ.  ಇಡೀ ದೇಶಕ್ಕೆ ತಿಳಿದಿದೆ ಅಮಿತ್ ಷಾಗಿಂತ ದೊಡ್ಡ ಕಸಬ್ ಮತ್ಯಾರಿಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.

ಲಕ್ನೋ (ಫೆ.23): ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್ಸನ್ನು ಕಸಬ್ ಗೆ ಹೋಲಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವಿರುದ್ಧ ಪ್ರತಿಪಕ್ಷಗಳು ತಿರುಗಿ ಬಿದ್ದಿವೆ. ಇಡೀ ದೇಶಕ್ಕೆ ತಿಳಿದಿದೆ ಅಮಿತ್ ಷಾಗಿಂತ ದೊಡ್ಡ ಕಸಬ್ ಮತ್ಯಾರಿಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 15 ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಎಸ್ಪಿ ಹಾಗೂ ಬಿಸ್ಪಿ ಪಕ್ಷಗಳು ನಾಶಪಡಿಸಿವೆ. ಉತ್ತರ ಪ್ರದೇಶದ ಜನತೆ ‘ಕಸಬ್’ ಅನ್ನು ತೊಡೆದು ಹಾಕಬೇಕು. ಕ- ಕಾಂಗ್ರೆಸ್, ಸ- ಸಮಾಜವಾದಿ, ಬ-ಬಹುಜನ ಸಮಾಜವಾದಿ ಪಕ್ಷ ಎಂದು ಶಾ ಜರಿದಿದ್ದರು.

ಅಮಿತ್ ಶಾರವರ ಈ ಹೇಳಿಕೆಯನ್ನು ಕಾಂಗ್ರೆಸ್ ಕೂಡಾ ತೀವ್ರವಾಗಿ ಖಂಡಿಸಿದೆ. ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕಾಂಗ್ರೆಸ್ ಹೇಳಿದೆ.

ಅಮಿತ್ ಶಾರವರ ಹೇಳಿಕೆ ಕೇಸರೀ ಪಕ್ಷದ ಕೀಳುಮಟ್ಟವನ್ನು ತೋರಿಸುತ್ತದೆ ಎಂದು ಮಾಯಾವತಿ ದೂಷಿಸಿದ್ದಾರೆ.