ಇಲ್ಲಿನ ಬಡೆಕೊಳ್ಳಮಠದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ.

ಬೆಳಗಾವಿ (ಜ.29): ಇಲ್ಲಿನ ಬಡೆಕೊಳ್ಳಮಠದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಡೆಕೊಳ್ಳಕೊಳ್ಳ ಮಠದ ನಾಗೇಂದ್ರ ಅಜ್ಜನವರ ಮೂಲ ಗದ್ದುಗೆಯ ಬೆಳ್ಳಿ ಆಭರಣ ಹಾಗೂ ಕಾಳಿಕಾ ಮಂದಿರದಲ್ಲಿನ ಕಾಳಿಕಾದೇವಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಸುಮಾರು 2 ಲಕ್ಷ 40 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಮಠದ ನಾಗೇಂದ್ರ ಅಜ್ಜನವರ 65 ಸಾವಿರ ಮೌಲ್ಯದ 1 ಕೆಜಿ 4 ಗ್ರಾಂ ಬೆಳ್ಳಿಯ ಮುಖವಾಡ,22, 500 ಸಾವಿರ ಮೌಲ್ಯದ ಅರ್ಧ ಕೆಜಿ ಬೆಳ್ಳಿ ಪಾದುಕೆಗಳು ಸೇರಿದಂತೆ 2.40 ಲಕ್ಷ ರೂಪಾಯಿ ಮೌಲ್ಯದ ನಗ ನಾಣ್ಯ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ನಿನ್ನೆ ತಡರಾತ್ರಿಯಲ್ಲಿ ಕಳ್ಳತನ ನಡೆದಿದ್ದು ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಹಿರೇಬಾಗೆವಾಡಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೆಳಗಾವಿ ಪೊಲೀಸರು ಕಳ್ಳರಿಗೆ ಬಲೆ ಬೀಸಿದ್ದಾರೆ.

-ಸಾಂದರ್ಭಿಕ ಚಿತ್ರ