ಧಾರವಾಡ[ಜ.04]  ಹತ್ತಾರು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಬರೀ ರಾಜ್ಯವಲ್ಲದೇ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿರುವ ನನಗೆ ಸೌಜನ್ಯಕ್ಕೂ ಸಮ್ಮೇಳನಕ್ಕೆ ಆಹ್ವಾನಿಸಿಲ್ಲ ಎಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ಆರೋಪಿಸಿದರು.

ತಲೆ ಮೇಲೆ ಪಾತ್ರೆ ಇಟ್ಟುಕೊಂಡ ಅವರು ಆಯೋಜಕರ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಅಲ್ಯೂಮಿನಿಯಂ ಪಾತ್ರೆಯಿಂದ ಮುಖಮುಚ್ಚಿಕೊಂಡು ತೆನಾಲಿ ರಾಮನ ಶೈಲಿಯಲ್ಲಿ ಕೃಷಿ ವಿವಿ ಮುಖ್ಯಧ್ವಾರದ ಎದುರು ಆಗಮಿಸಿದ ಅವರು, ಕಸಾಪ ಜಿಲ್ಲಾ ಘಟಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಕನ್ನಡ ಮಾಧ್ಯಮ ಕಡೆಗಣನೆ, ಕುಮಾರಸ್ವಾಮಿಗೆ ಕುಟುಕಿದ ಕಂಬಾರ

ತಮನ್ನು ಸಮ್ಮೇಳನದಲ್ಲಿ ಯಾವುದಕ್ಕೂ ಬಳಸಿಕೊಂಡಿಲ್ಲ. ಕನಿಷ್ಟ ಪಕ್ಷ ಕಾರ್‍ಯಕ್ರಮಕ್ಕೂ ಆಹ್ವಾನ ಮಾಡಿಲ್ಲ. ಈ ಕುರಿತು ವಾರದ ಹಿಂದಷ್ಟೇ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರಿಗೆ ಕರೆ ಮಾಡಿದಾಗ, ರಂಗಾಯಣ ನಿರ್ದೇಶಕ ಪ್ರಮೋದ ಶಿಗ್ಗಾಂವ ಹಾಗೂ ಮನೋಜ ಹಾನಗಲ್ ಅವರೇ ನೋಡಿಕೊಳ್ಳುತ್ತಿದ್ದಾರೆಂದು ಜವಾಬ್ದಾರಿಯಿಂದ ತಪ್ಪಿಸಿಕೊಂಡರು. ಹೀಗಾಗಿ  ಬೇಸರಿಂದ ಮುಖ್ಯ ವೇದಿಕೆಗೆ ತೆನಾಲಿ ರಾಮನ ವೇಷಧಾರಿಯಾಗಿ ಬಂದು ಸಾತ್ವಿಕ ಪ್ರತಿಭಟನೆ ತೋರಿದ್ದೇನೆ ಎಂದರು.