ದುಡ್ಡನ್ನು ಜೇಬಿಗೆ ಇಳಿಸಿದಕೊಂಡ ನಂತರ ಇಬ್ಬರು ಗೋವಾಗೆ ಹೋಗಿ ಅಲ್ಲಿ ಲೈವ್ ಬ್ಯಾಂಡ್ ಗೆ ಹೋಗಿ ಕುಡಿದ ಮತ್ತಿನಲ್ಲಿ ಒಂದೇ ರಾತ್ರಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಹಣವನ್ನ ಅವಳ ಮೇಲೆ ಚೆಲುತ್ತಿದ್ದರು ಎನ್ನಲಾಗಿದೆ. 

ಬೆಂಗಳೂರು(ನ.05): ಕಾಟನ್ ಪೇಟೆ ಲಾಡ್ಜ್ ನಲ್ಲಿ ಕೂತ್ಕೊಂಡು ಫಾರಿನ್ ಅಕೌಂಟ್ ಗಳನ್ನ ಹ್ಯಾಕ್ ಮಾಡ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. 

ಕಾಟನ್ ಪೇಟೆಯ ಲಾಡ್ಜ್ ನಲ್ಲಿ ಕೂತ್ಕೊಂಡೆ ಆಸ್ಟ್ರೇಲಿಯಾ ಮತ್ತು ನ್ಯೂಜಿವಲ್ಯಾಂಡ್ ನ ಬ್ಯಾಂಕ್ ಅಕೌಂಟ್ ಗಳನ್ನ ಹ್ಯಾಕ್ ಮಾಡುತ್ತಿದ್ದ ಅನ್ವರ್ ಮತ್ತು ಇಮ್ರಾನ್ ಬಂಧಿತ ಆರೋಪಿಗಳಲಾಗಿದ್ದು, ಇವರಿಬ್ಬರು ಕೋಟ್ಯಾಂತರ ರೂಪಾಯಿ ಹಣವನ್ನ ಹ್ಯಾಕ್ ಮಾಡಿ ತಮ್ಮ ಖಾತೆಗೆ ಸೇರಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. 

ದುಡ್ಡನ್ನು ಜೇಬಿಗೆ ಇಳಿಸಿದಕೊಂಡ ನಂತರ ಇಬ್ಬರು ಗೋವಾಗೆ ಹೋಗಿ ಅಲ್ಲಿ ಲೈವ್ ಬ್ಯಾಂಡ್ ಗೆ ಹೋಗಿ ಕುಡಿದ ಮತ್ತಿನಲ್ಲಿ ಒಂದೇ ರಾತ್ರಿಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಹಣವನ್ನ ಅವಳ ಮೇಲೆ ಚೆಲುತ್ತಿದ್ದರು ಎನ್ನಲಾಗಿದೆ. 

ಹೀಗೆ ಇವರಿಬ್ಬರು ಸುರಿದಿದ್ದ ಹಣದಿಂದಲೇ ಬಾರ್ ಗರ್ಲ್ ಮುಂಬೈನಲ್ಲಿ ಒಂದಲ್ಲಾ ಅಂತ ಎರಡು ಅಪಾರ್ಟ್ ಮೆಂಟ್ ಗಳನ್ನ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಇದೀಗ ಕಾಟನ್ ಪೇಟೆ ಪೊಲೀಸರು ಇಬ್ಬರು ಶೋಕಿಲಾಲರನ್ನ ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.