ರಾಜಕಾರಣಿಗಳ ಹುಟ್ಟುಹಬ್ಬ, ರಾಜಕಾರಣಿಗಳ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಪತ್ರಿಕೆಗೆ, ವಾಹಿನಿಗೆ ಜಾಹೀರಾತು ನೀಡುತ್ತಾರೆ. ಆದರೆ ಇಲ್ಲಿ ಒಬ್ಬ ಪ್ರಾಮಾಣಿಕ ಅಧಿಕಾರಿಯ ಪುನರ್ ಆಗಮನಕ್ಕೆ ಜಾಹೀರಾತು ನೀಡಲಾಗಿದೆ.

ಹಾಸನ[ಜೂ.26] ರಾಜಕಾರಣಿಗಳ ಹುಟ್ಟುಹಬ್ಬ, ರಾಜಕಾರಣಿಗಳ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಪತ್ರಿಕೆಗೆ, ವಾಹಿನಿಗೆ ಜಾಹೀರಾತು ನೀಡುತ್ತಾರೆ. ಆದರೆ ಇಲ್ಲಿ ಒಬ್ಬ ಪ್ರಾಮಾಣಿಕ ಅಧಿಕಾರಿಯ ಪುನರ್ ಆಗಮನಕ್ಕೆ ಜಾಹೀರಾತು ನೀಡಲಾಗಿದೆ.

ಅಧಿಕಾರ ಸ್ವೀಕರಿಸಿದ ರೋಹಿಣಿ ಹೇಳಿದ್ದೇನು?

ಪ್ರಾಮಾಣಿಕ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ತೆಗೆದುಕೊಂಡಿದ್ದಾರೆ. ಅವರ ಪುನರ್ ಆಗಮನಕ್ಕೆ ನಾಗರಿಕರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. 

ಕರ್ನಾಟಕದ ವಿಧಾನಸಭೆ ಚುನಾವಣೆ ಎದುರಿನಲ್ಲಿರುವಾಗ ರಾಜ್ಯ ಸರಕಾರ ರೋಹಿಣಿ ಅವರನ್ನು ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಮಾಡಿತ್ತು. ನಂತರ ಇದಕ್ಕೆ ಚುನಾವಣಾ ಆಯೋಗ ತಡೆ ತರುವಂಥ ಕೆಲಸ ಮಾಡಿತ್ತು. ಇದಾದ ಮೇಲೆ ಸರಕಾರ ಮತ್ತು ರೋಹಿಣಿ ನಡುವೆ ಕಾನೂನು ಹೋರಾಟವೇ ನಡೆದಿದ್ದು ಅಂತಿಮವಾಗಿ ಅಧಿಕಾರಿಗೆ ಜಯ ಸಿಕ್ಕಂತಾಗಿದೆ.

ಅಷ್ಟಕ್ಕೂ ಸರಕಾರ ಮತ್ತು ರೋಹಿಣಿ ಕಾನೂನು ಸಮರಕ್ಕೆ ಕಾರಣವೇನು?